Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹೆಸರು ಕಾಳು, ಸಬ್ಬಸ್ಸಿಗೆ ಪಲ್ಯ ಮಾಡಿದ್ದೀರಾ? ಈ ರುಚಿ ಪಲ್ಯ ಸವಿದು ನೋಡಿ!
ನೀವು ಬೆಳಗ್ಗೆ ತಿಂಡಿಗೆ ಚಪಾತಿ, ರೊಟ್ಟಿ, ದೋಸೆ, ಮಾಡಿದಾಗ ಅದರ ಜೊತೆಗೆ ಸವಿಯಲು ಏನಾದರು ಪಲ್ಯ ಮಾಡುತ್ತೀರಿ. ಇಲ್ಲವೆ ಚಟ್ನಿಯನ್ನಾದರು ಮಾಡಿಯೇ ಮಾಡುತ್ತೀರಿ. ಬಹುತೇಕ ಮಂದಿ ಬೆಳಗ್ಗೆ ಆರೋಗ್ಯಕರ ತಿಂಡಿಯನ್ನು ಸವಿಯಲು ಮುಂದಾಗುವುದು ನೋಡಬಹುದು. ಅದರಲ್ಲೂ ರೊಟ್ಟಿ, ಚಪಾತಿಯೊಂದಿಗೆ ಕಾಳುಗಳಿಂದ ಮಾಡಿರುವ ಪಲ್ಯವು ಆರೋಗ್ಯದ ದೃಷ್ಟಿಯಲ್ಲಿ ಬಹಳ ಮುಖ್ಯವಾಗುತ್ತದೆ. ಇನ್ನು ಈ ಕಾಳುಗಳಲ್ಲಿ ಹಲವು ರೀತಿಯ ಆರೋಗ್ಯಕರ ಅಂಶಗಳಿವೆ ಇದು ನಾವು ಚಟುವಟಿಕೆಯಿಂದ ಕೂಡಿರಲು ಸಹಕರಿಸಲಿವೆ.
ಅದರಲ್ಲೂ ಈ ಕಾಳು ಪಲ್ಯಗಳಲ್ಲಿ ನಾವು ಹೆಚ್ಚಾಗಿ ಹೆಸರು ಕಾಳಿನ ಹಾಗೂ ಸಬ್ಬಸಿಗೆ ಸೊಪ್ಪಿನಿಂದ ಮಾಡುವ ಪಲ್ಯದ ರುಚಿ ನೋಡಿರಬಹುದು. ಚಪಾತಿ ಹಾಗೂ ರೊಟ್ಟಿಗೆ ಇದಕ್ಕಿಂತ ರುಚಿಕರ ಪಲ್ಯ ಮತ್ತೊಂದಿಲ್ಲ ಎನ್ನಬಹುದು. ನೀವು ಈ ಹೆಸರು ಕಾಳು ಹಾಗೂ ಸಬ್ಬಸಿಗೆ ಸೊಪ್ಪು ಹಾಕಿ ಮಾಡುವ ಪಲ್ಯ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಲು ಮುಂದಾಗೋದು ಖಚಿತ.

ಹಾಗೆ ಈ ಪಲ್ಯ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಉತ್ತಮ ಫೈಬರ್, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಅಂಶಗಳಿಂದ ತುಂಬಿರಲಿದೆ. ಸಬ್ಬಸಿಗೆ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಹೀಗಾಗಿ ಬೆಳಗ್ಗಿನ ತಿಂಡಿಗೆ ನಾವು ಈ ಕಾಳು ಪಲ್ಯ ಮಾಡಿದ್ರೆ ಅದ್ಭುತ ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿರಲಿದೆ.
ಹೆಸರು ಕಾಳು ಸಬ್ಬಸಿಗೆ ಸೊಪ್ಪಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹೆಸರು ಕಾಳು
- ಸಬ್ಬಸಿಗೆ ಸೊಪ್ಪು
- ಉಪ್ಪು
- ಎಣ್ಣೆ
- ಅರಶಿಣ ಪುಡಿ
- ಹಸಿ ಮೆಣಸು
- ಟೊಮೆಟೋ
- ಈರುಳ್ಳಿ
ಹೆಸರು ಕಾಳು ಸಬ್ಬಸಿಗೆ ಸೊಪ್ಪಿನ ಪಲ್ಯ ಮಾಡುವ ವಿಧಾನವೇನು?
ಮೊದಲು ಹೆಸರು ಕಾಳನ್ನು ಚೆನ್ನಾಗಿ ತೊಳೆದು ಕಾಳುಗಳು ಮುಚ್ಚುವಷ್ಟು ನೀರು ಹಾಕಿಕೊಂಡು ಚೆನ್ನಾಗಿ ಕುದಿಸಿಕೊಳ್ಳಬೇಕು. ಹೆಸರು ಕಾಳು ಬೆಂದು ನೀರು ಬಸಿದು ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಅರ್ಧ ಹಿಡಿ ಬೆಳ್ಳುಳ್ಳಿ ಹಾಕಿ 2 ಸುತ್ತು ಹೊಡೆಸಿ ತೆಗೆದಿಟ್ಟುಕೊಳ್ಳಿ. ಹಾಗೆ ಇನ್ನೊಂದು ಕಡೆ ಹಸಿ ಮೆಣಸು ಕೂಡ ಹಾಕಿ ಅದೇ ರೀತಿ ರುಬ್ಬಿ ಬದಿಗಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ ಅನಂತರ ಇದಕ್ಕೆ ರುಬ್ಬಿದ ಹಸಿ ಮೆಣಸು ಹಾಕಿಕೊಳ್ಳಿ. ಹಾಗೆ ಹೆಚ್ಚಿರುವ ಒಂದು ಟೊಮೆಟೋ ಫ್ರೈ ಮಾಡಿಕೊಳ್ಳಿ. ಈಗ ಅರಶಿಣ ಪುಡಿ, ಹಾಗೆ ರುಬ್ಬಿದ ಬೆಳ್ಳುಳ್ಳಿ ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ತೊಳೆದು ಹೆಚ್ಚಿರುವ ಸಬ್ಬಸಿಗೆ ಸೊಪ್ಪನ್ನು ಕೂಡ ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಬೇಯಿಸಿಕೊಂಡಿರುವ ಹೆಸರು ಕಾಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಚೆನ್ನಾಗಿ ಬೇಯಲು ಬಿಟ್ಟು ಆಗಾಗ ಮಿಕ್ಸ್ ಮಾಡುತ್ತಾ ಇರಿ. ಸುಮಾರು 3 ರಿಂದ 4 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಪಲ್ಯ ರೆಡಿಯಾಗುತ್ತದೆ. ಯಾವುದೇ ತಿಂಡಿ ಅಥವಾ ಊಟದ ಜೊತೆಗೆ ಈ ಪಲ್ಯ ಸವಿಯಲು ಬಹಳ ರುಚಿಯಾಗಿರುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ.
ಇಷ್ಟಾದರೆ ನಿಮ್ಮ ಮುಂದೆ ಈ ರುಚಿ ರುಚಿಯ ಹೆಸರು ಕಾಳಿನ ಪಲ್ಯ ರೆಡಿಯಾಗುತ್ತದೆ. ನೀವು ಸಹ ಇದನ್ನೊಮ್ಮೆ ಮಾಡಿ ನೋಡಿ, ಉಟ ತಿಂಡಿಯ ಜೊತೆಗಿದು ಬಹಳ ರುಚಿ ನೀಡಲಿದೆ. ನೀವು ಸಹ ಇದನ್ನೊಮ್ಮೆ ಮಾಡಿ ನೋಡಿ. ಅದರ ರುಚಿಗೆ ಯಾವಾಗಲು ಮಾಡಿ ಸವಿಯಲು ಮುಂದಾಗುತ್ತೀರಿ.



Click it and Unblock the Notifications