Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹಸಿ ಬಟಾಣಿ ಮಸಾಲ ಫ್ರೈ ಮನೆಯಲ್ಲೇ ಮಾಡಿ..! 5 ನಿಮಿಷ ಸಾಕಾಗುತ್ತೆ!
ಮನೆಯಲ್ಲಿ ಸಂಜೆ ಸಮಯದಲ್ಲಿ ಸವಿಯಲು ನೀವು ಸ್ನ್ಯಾಕ್ಸ್ ಹುಡುಕುತ್ತಿದ್ದರೆ ನಾವಿಂದು ಅದ್ಭುತವಾಗಿ ಮಾಡಬಹುದಾದ ರುಚಿ ರುಚಿಯ ಹಸಿ ಬಟಾಣಿ ಸ್ನಾಕ್ಸ್ ನೀವು ಮಾಡಿ ಸವಿಯಲೇ ಬೇಕು. ಅದ್ರಲ್ಲೂ ಬಟಾಣಿಯಲ್ಲಿಯೂ ಅದ್ಬುತ ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು. ಹಾಗೆ ಬೇಕರಿಗಳಲ್ಲಿ ಸಿಗುವಂತಹ ಮಸಾಲ ಬಟಾಣಿ ಸ್ನ್ಯಾಕ್ಸ್ ಸವಿಯಲು ಬಹಳ ಇಷ್ಟಪಡುತ್ತೀರಿ.
ಹಸಿರು ಬಟಾಣಿಯ ಉಪ್ಪು ಖಾರದ ಮಸಾಲೆ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಸಹ ಸವಿಯಲು ಇಷ್ಟಪಡುತ್ತೀರಿ. ಹಾಗೆ ಇದನ್ನು ಮಾಡುವುದು ಕೂಡ ಬಹಳ ಸುಲಭ. ಬೇಕರಿ, ಅಂಗಡಿಗಳಲ್ಲಿ ಈ ಹಸಿ ಬಟಾಣಿ ಮಸಾಲೆಯನ್ನು ಮನೆಯಲ್ಲಿ ಮಾಡಿ ಸಂಜೆ ಸಮಯಕ್ಕೆ ಹಾಗೆ ಸಮಯ ಕಳೆಯುವ ಉದ್ದೇಶದಿಂದ ಯಾವಾಗ ಬೇಕಾದರೂ ಮಾಡಿ ಸವಿದು ನೋಡಿ.

ಹಾಗಾದ್ರೆ ಈ ಹಸಿ ಮಸಾಲ ಬಟಾಣಿ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲೂ ಈ ಮಸಾಲ ಕಡಲೆ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ, ಟೈಮ್ ಪಾಸ್ಗೆ ಹೇಳಿ ಮಾಡಿಸಿದ ಖಾದ್ಯ ಇದು. ಹಾಗಾದ್ರೆ ಈ ಮಸಾಲ ಬಟಾಣಿ ಮಾಡುವುದು ಹೇಗೆ ನೋಡಿ.
ಮಸಾಲ ಬಟಾಣಿ ರೆಸಿಪಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಹಸಿ ಬಟಾಣಿ ಮಾಡಲು ಬೇಕಾಗುವ ವಸ್ತುಗಳು
- ಹಸಿ ಬಟಾಣಿ
- ಬೆಣ್ಣ ಅಥವಾ ಎಣ್ಣೆ
- ಗರಂ ಮಸಾಲೆ
- ಉಪ್ಪು
- ಖಾರದ ಪುಡಿ
- ಶುಂಠಿ
- ಜೀರಿಗೆ
- ಇಂಗು
- ಧನಿಯ ಪುಡಿ
ಮಸಾಲ ಹಸಿ ಬಟಾಣಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಒಂದು ಸ್ಪೂನ್ ಎಣ್ಣೆ ಅಥವಾ ಬೆಣ್ಣೆ ಹಾಕಿಕೊಂಡು ಕಾಯಲು ಬಿಡಿ. ನಂತರ ಇದಕ್ಕೆ ಜೀರಿಗೆ ಹಾಕಿ ಹುರಿಯಿರಿ. ಹಾಗೆ ಇದಕ್ಕೆ ಕತ್ತರಿಸಿಕೊಂಡ ಶುಂಠಿ ಅಥವಾ ತುರಿದುಕೊಂಡ ಶುಂಠಿ, ಇಲ್ಲವೆ ಶುಂಠಿ ಪೇಸ್ಟ್ ಹಾಕಿ ಹುರಿದುಕೊಳ್ಳಿ. ಈಗ ಅರ್ಧ ಕೆಜಿ ಹಸಿ ಬಟಾಣಿಯನ್ನು ತೊಳೆದು ಸಿಪ್ಪೆ ತೆಗೆದುಕೊಡು ಇದಕ್ಕೆ ಹಾಕಿಕೊಳ್ಳಿ.
ಬಟಾಣಿಯನ್ನು ಚೆನ್ನಾಗಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮತ್ತೆ 2 ನಿಮಿಷ ಹಾಗೆಯೇ ಬಿಡಿ. ಬಳಿಕ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಖಾರದ ಪುಡಿ, ಗರಂ ಮಸಾಲ, ಧನಿಯ ಪುಡಿ ಹಾಕಿ ಸಣ್ಣ ಉರಿಯಲ್ಲಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ.
2 ನಿಮಿಷ ಮತ್ತೆ ಹುರಿದುಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ಮಸಾಲ ಬಟಾಣಿ ಫ್ರೈ ರೆಡಿಯಾಗುತ್ತೆ. ಅದರ ರುಚಿಗೆ ನೀವು ಯಾವಾಗಲು ಮಾಡಿ ಸವಿಯಲು ಮುಂದಾಗುತ್ತೀರಿ. ಸಂಜೆ ಸಮಯದಲ್ಲಿ ಟೀ ಕಾಫಿಯೊಂದಿಗೆ ಈ ಟೇಸ್ಟಿ ಬಟಾಣಿ ಸವಿಯಲು ಬಹಳ ಅದ್ಭುತ ರುಚಿ ನೀಡಲಿದೆ.
ಈ ಕಡ್ಲೆಯನ್ನು ನೀವು ಒಂದು ಬಾಕ್ಸ್ಗೆ ಹಾಕಿಟ್ಟರೆ ಹಲವು ದಿನಗಳ ಕಾಲ ಸವಿಯಬಹುದು. ಬಹಳ ರುಚಿಯ ಜೊತೆಗೆ ಸುಲಭವಾಗಿಯೂ ಮಾಡಬಹುದಾದ ಸ್ನ್ಯಾಕ್ಸ್ ಇದಾಗಿದೆ. ನೀವು ಕೂಡ ಮನೆಯಲ್ಲಿ ಈ ರೀತಿಯಾಗಿ ಬಟಾಣಿ ಫ್ರೈ ಮಾಡಿ ಸವಿದು ನೋಡಿ. ಇದು ಬೇಕರಿಯಲ್ಲಿ ಸಿಗುವಂತಹ ರುಚಿ ರುಚಿಯ ಕಡ್ಲೆಯಂತೆಯೇ ಇರಲಿದೆ.



Click it and Unblock the Notifications
