Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ರೀತಿ ದ್ರಾಕ್ಷಿ ಹಣ್ಣಿನ ಸ್ಪೆಷಲ್ ಹಲ್ವಾ ಮಾಡಿದ್ದೀರಾ? ಯಾರೂ ಸಹ ಈ ರೆಸಿಪಿ ಮಾಡಿರಲ್ಲ!
ಸಿಹಿ ತಿಂಡಿ ಸವಿಯುವ ಆಸೆ ಹೊಂದಿರುವ ಮಂದಿಗೆ ಹಲವು ರೀತಿ ತಿಂಡಿಯನ್ನು ಮನೆಯಲ್ಲಿ ಮಾಡಿ ಸವಿಯುವುದು ಇಷ್ಟವಾಗುತ್ತೆ. ಅದ್ರಲ್ಲೂ ವಿಶೇಷ ರೀತಿಯಾದ ಸಿಹಿ ತಿಂಡಿಗಳು ಹಾಗೆ ಮೊದಲ ಬಾರಿಗೆ ನೀವೇ ಖುದ್ದು ಮಾಡಿ ಸವಿಯುವ ತಿಂಡಿಗಳೆಂದರೆ ಎಲ್ಲರೂ ಮಾಡಿ ಸವಿಯೋದು ನೋಡುತ್ತೇವೆ. ಇಂತಹ ವಿಶೇಷ ಖಾದ್ಯಗಳ ಪೈಕಿ ನಾವಿಂದು ದ್ರಾಕ್ಷಿ ಬಳಸಿ ಮಾಡುವ ಹಲ್ವಾ ಕುರಿತಾಗಿ ತಿಳಿಯೋಣ.
ಸಿಹಿ ತಿಂಡಿಗಳಲ್ಲಿ ಹಲ್ವಾ ಇಷ್ಟಪಡುವ ಮಂದಿ ಬಹಳಷ್ಟಿದ್ದಾರೆ. ಬಗೆ ಬಗೆಯ ಹಲ್ವಾಗಳು ಬಾಯಲ್ಲಿ ನೀರು ತರಿಸುತ್ತವೆ. ನೀವು ಕೂಡ ಒಂದಿಷ್ಟು ಬಗೆಯ ಹಲ್ವಾದ ರುಚಿ ನೋಡಿರುತ್ತೀರಿ. ನಾವಿಂದು ಸುಲಭವಾಗಿ ಮಾಡುವಂತಹ ಹಾಗೆ ಎಲ್ಲರಿಗೂ ಇಷ್ಟವಾಗು ಹೊಸ ಬಗೆಯ ದ್ರಾಕ್ಷಿ ಹಲ್ವಾ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಈ ದ್ರಾಕ್ಷಿ ಹಲ್ವಾ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ತಯಾರಿ ಬೇಕು ಎಂಬುದನ್ನು ತಿಳಿದುಕೊಳ್ಳೋಣ.
ದ್ರಾಕ್ಷಿ ಹಲ್ವಾ ಮಾಡಲು ಬೇಕಾಗುವ ಪದಾರ್ಥವೇನು?
- ದ್ರಾಕ್ಷಿ ಹಣ್ಣು- ಅರ್ಧ ಕೆಜಿ
- ತುಪ್ಪ
- ಕಾರ್ನ್ ಫ್ಲೋರ್
- ಹಸಿರು ಬಣ್ಣ
ದ್ರಾಕ್ಷಿ ಹಲ್ವಾ ಮಾಡುವ ವಿಧಾನವೇನು?
ಮೊದಲಿಗೆ ದ್ರಾಕ್ಷಿ ಹಣ್ಣುಗಳನ್ನು ತೊಳೆದು ಇಟ್ಟುಕೊಳ್ಳಿ. ಸಿಹಿ ದ್ರಾಕ್ಷಿ ತೆಗೆದುಕೊಂಡು ಅದನ್ನು ಬಿಡಿಸಿಕೊಂಡು ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಎಲ್ಲಾ ದ್ರಾಕ್ಷಿ ಹಣ್ಣುಗಳನ್ನು ಹಾಕಿಕೊಂಡು ಅರ್ಧ ಕಪ್ ನೀರು ಸಹ ಸೇರಿಸಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದ ಬಳಿಕ ಇದನ್ನು ಜರಡಿ ಹಿಡಿದುಕೊಂಡು ಕೇವಲ ದ್ರಾಕ್ಷಿ ರಸ ತೆಗೆದಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ತೆಗೆದುಕೊಂಡು ಅಳತೆ ಕಪ್‌ನಲ್ಲಿ 2 ಕಪ್ ದ್ರಾಕ್ಷಿ ರಸವನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಒಂದು ಕಪ್ ನೀರು ಸಹ ಹಾಕಿಕೊಳ್ಳಿ. ಅನಂತರ ಇದಕ್ಕೆ ಅರ್ಧ ಕಪ್ ಸಕ್ಕರೆ ಕೂಡ ಹಾಕಿಕೊಂಡು, ಮುಕ್ಕಾಲು ಕಪ್ ಕಾರ್ನ್ ಫ್ಲೋರ್ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಗ ಈ ಬಾಣಲೆಯನ್ನು ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಇಡಿ.
ಹಾಗೆ ಒಂದು ಅಚ್ಚು ಪಾತ್ರೆ ಅಥವಾ ಟ್ರೇಗೆ ತುಪ್ಪ ಸವರಿಕೊಂಡು ರೆಡಿ ಇಟ್ಟುಕೊಳ್ಳಿ. ಒಲೆ ಮೇಲಿರುವ ಎಲ್ಲಾ ಪದಾರ್ಥಗಳು ಗಂಟು ಆಗದಂತೆ ತಿರುಗಿಸುತ್ತಾ ಇರಿ. ಕೈ ಬಿಡದೆ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷಕ್ಕೆ ಇದು ಗಟ್ಟಿಯಾಗಲು ಆರಂಭಿಸುತ್ತದೆ. ತಳ ಹಿಡಿಯಲು ಬಿಡದೆ ಮಿಕ್ಸ್ ಮಾಡುತ್ತಾ ಇರಬೇಕು. ಒಟ್ಟು 7ರಿಂದ 8 ನಿಮಷದಲ್ಲಿ ಇದು ಗಟ್ಟಿಯಾಗುವಾಗ 1 ಸ್ಪೂನ್ ತುಪ್ಪ ಹಾಕಿಕೊಳ್ಳಿ.
ಹಾಗೆ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಡ್ರೈ ಫ್ರೂಟ್ಸ್ ಹಾಕಿಕೊಳ್ಳಿ. ಅನಂತರ ಹಸಿರು ಬಣ್ಣದ ಪುಡಿ ಅಥವಾ ಲಿಕ್ವಿಡ್ ಸಹ ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ 1 ಸ್ಪೂನ್ ತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ, ಇದು ಬಾಣಲೆಯ ತಳ ಬಿಡುವ ಹಂತಕ್ಕೆ ಬರಬೇಕು. ಒಟ್ಟಾರೆ 13 ನಿಮಿಷ ಕಾಯಿಸಿ.
ಈಗ ಇದನ್ನು ತುಪ್ಪ ಸವರಿದ ತಟ್ಟೆಗೆ ಅಥವಾ ಟ್ರೇಗೆ ಹಾಕಿ ಸವರಿಕೊಂಡು ಸುಮಾರು 2 ಗಂಟೆ ತಣ್ಣಗಾಗಲು ಬಿಡಿ. ನಂತರ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಂಡರೆ ನಿಮ್ಮ ಮುಂದೆ ದ್ರಾಕ್ಷಿ ಹಣ್ಣಿನ ಹಲ್ವಾ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ಹಲ್ವಾ ಮಾಡಿ ಸವಿದು ನೋಡಿ.



Click it and Unblock the Notifications
