Latest Updates
-
ಸಿಎಟಿ 2026: ಪರೀಕ್ಷೆಯ ದಿನ ಸಂಗಾತಿಯ ಒತ್ತಡ ಕಡಿಮೆ ಮಾಡಿ, ಬೆಂಬಲ ನೀಡುವುದು ಹೇಗೆ? -
ಬರ್ಡ್ ಫ್ಲೂ ಆತಂಕ: ಮೊಟ್ಟೆ, ಚಿಕನ್ ಬೆಲೆ ಏರಿಕೆ ಭೀತಿ ನಡುವೆ ಪ್ರೋಟೀನ್ ಪಡೆಯಲು ಬೆಸ್ಟ್ ಪರ್ಯಾಯಗಳಿವು! -
ದಿಲ್ಜಿತ್ ದೋಸಾಂಜ್ ಬೆಂಗಳೂರು ಕನ್ಸರ್ಟ್: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಉತ್ತರ ಭಾರತದಲ್ಲಿ ದಟ್ಟ ಮಂಜಿನ ಎಚ್ಚರಿಕೆ: ಚಳಿಗಾಲದಲ್ಲಿ ವಾಕಿಂಗ್ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ! -
ಬಿಹಾರದ 4 ಲಕ್ಷ ಜನರ ಮದುವೆ ವೈರಲ್: ಇಂತಹ ಬೃಹತ್ ಸಮಾರಂಭಗಳಲ್ಲಿ ನೀವು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಪರ್ಯಾಯ ಬಳಸುವುದು ಹೇಗೆ? -
ತಮಿಳುನಾಡು, ಕೇರಳದಲ್ಲಿ ಸಿಡಿಲು-ಮಳೆ ಅಬ್ಬರ: ಪ್ರಯಾಣಿಕರೇ ಎಚ್ಚರ, ಈ ಮುನ್ನೆಚ್ಚರಿಕೆ ಪಾಲಿಸಿ! -
ದೆಹಲಿ ಮಾಲಿನ್ಯ: ಉಸಿರುಗಟ್ಟುವ ಗಾಳಿಯಲ್ಲಿ ಆರೋಗ್ಯ ರಕ್ಷಣೆ ಹೇಗೆ? 12 ನಿಮಿಷದ ವರ್ಕೌಟ್ ಮತ್ತು ಮಾಸ್ಕ್ ಟಿಪ್ಸ್ -
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ!
ಗೋರಿಕಾಯಿ ಪಲ್ಯ: ಸೂಪರ್ ಟೇಸ್ಟ್ನ ಸುಲಭದ ರೆಸಿಪಿ
ಊಟದೊಂದಿಗೆ ಹಾಗೆ ಯಾವುದೇ ತಿಂಡಿಯೊಂದಿಗೆ ಪಲ್ಯ ಅಥವಾ ಗ್ರೇವಿ ಇದ್ದರೆ ಬಹಳ ರುಚಿಯಿಂದ ಖಾದ್ಯಗಳ ಸವಿಯಬಹುದು. ಅದ್ರಲ್ಲೂ ವಿಶೇಷ ರುಚಿಯಲ್ಲಿ ಮಾಡುವಂತಹ ತರಕಾರಿ ತಿನಿಸುಗಳು ರುಚಿಕರವಾಗಿರಲಿದೆ. ನಾವಿಂದು ಸುಲಭವಾಗಿ ತಿಂಡಿಯೊಂದಿಗೆ ಹಾಗೆ ಊಟದ ರುಚಿ ಹೆಚ್ಚಿಸುವ ಗೋರಿಕಾಯಿಯ ವಿಭಿನ್ನ ಗ್ರೇವಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಈ ಗೋರಿಕಾಯಿಯ ಪಲ್ಯ ಹಾಗೆ ಸಾಂಬಾರ್ ಮಾಡಿ ಸವಿಯುವ ಹಲವು ಖಾದ್ಯಗಳ ನೀವು ಸವಿದಿರುತ್ತೀರಿ. ಹಾಗೆ ಆರೋಗ್ಯದ ದೃಷ್ಟಿಯಿಂದ ಈ ಗೋರಿಕಾಯಿ ಬಹಳ ಉತ್ತಮ ಹಸಿರು ತರಕಾರಿಯಾಗಿದೆ. ಗೋರಿಕಾಯಿಯಲ್ಲಿನ ನಾರಿನ ಅಂಶ, ವಿಟಮಿನ್, ಕಬ್ಬಿಣಾಂಶವು ನಿಮ್ಮ ದೇಹಕ್ಕೆ ಉತ್ತಮವಾಗಿರಲಿದೆ. ಇದು ಮಧುಮೇಹ ನಿಯಂತ್ರಣ ಹೃದಯದ ಆರೋಗ್ಯ ಸುಧಾರಣೆ ಜೀರ್ಣಕ್ರಿಯೆ ಸುಗಮಗೊಳಿಸುವುದು ತೂಕ ಇಳಿಕೆ ಮತ್ತು ಗರ್ಭಿಣಿಯರಿಗೆ ಅಗತ್ಯವಾದ ಫೋಲಿಕ್ ಆಮ್ಲವನ್ನು ಒದಗಿಸುವ ಅತ್ಯುತ್ತಮ ತರಕಾರಿಯಾಗಿದೆ.

ಹಾಗೆ ಈ ಗೋರಿಕಾಯಿಯ ಪಲ್ಯವಂತು ಚಪಾತಿ, ದೋಸೆಯ ರುಚಿ ದುಪ್ಪಟ್ಟಾಗಿಸುತ್ತೆ. ಆದ್ತೆ ನಾವಿಂದು ಊಟಕ್ಕೆ ಹಾಗೆ ತಿಂಡಿಗೂ ಸೇರಿದಂತೆ ಮಾಡುವ ಈ ಗೋರಿಕಾಯಿಯ ವಿಶೇಷ ಗ್ರೇವಿ ರೆಸಿಪಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಗೋರಿಕಾಯಿ ಗ್ರೇವಿ ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ವಸ್ತುಗಳ ಬಳಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಗೋರಿಕಾಯಿ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಗೋರಿಕಾಯಿ
- ಅರಶಿಣ
- ಗೋಡಂಬಿ
- ಟೊಮೆಟೋ
- ತೆಂಗಿನಕಾಯಿ ತುರಿ
- ಈರುಳ್ಳಿ
- ಕರಿಬೇವು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
ಗೋರಿಕಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲು ಅರ್ಧ ಕೆ.ಜಿ ಗೋರಿಕಾಯಿಯನ್ನು ತೊಳೆದು ಹೆಚ್ಚಿಕೊಂಡು ಇಟ್ಟುಕೊಳ್ಳಿ, ಬೀನ್ಸ್ ಗಾತ್ರಕ್ಕೆ ಹೆಚ್ಚಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್ಗೆ ತೆಂಗಿನಕಾಯಿ, ಟೊಮೆಟೋ, ಗೋಡಂಬಿ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಈ ಫೇಸ್ಟ್ ಅನ್ನು ಬದಿಗಿಟ್ಟುಕೊಳ್ಳಿ.
ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಅನಂತರ ಚಕ್ಕೆ ಹಾಕಿಕೊಂಡು ಈರುಳ್ಳಿ ಸಹ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ, ಕರಿಬೇವು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸಾಂಬಾರ್ ಪುಡಿ, ಹಾಗೆ ಮೊದಲು ರುಬ್ಬಿದ್ದ ಟೊಮೆಟೋ ಪೇಸ್ಟ್ ಅನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಂಡು ಫ್ರೈ ಆಗಲು ಬಿಡಿ.
ಇದು ಸ್ವಲ್ಪ ಗಟ್ಟಿಯಾಗಿ ಮಸಾಲೆಯಾಗಿ ಬದಲಾಗಬೇಕು. ಈಗ ಹೆಚ್ಚಿಕೊಂಡಿರುವ ಗೋರಿಕಾಯಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಸ್ವಲ್ಪ ನೀರು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಗ್ಯಾಸ್ ಹೋಗಿ ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡು ಇದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಮತ್ತೆ 2 ನಿಮಿಷ ಬೇಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಈ ಗೋರಿಕಾಯಿ ಗ್ರೇವಿ ಸಿದ್ದವಾಗುತ್ತೆ.



Click it and Unblock the Notifications
