Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ನೆಲ್ಲಿಕಾಯಿ ಜ್ಯೂಸ್ ಹೀಗೆ ಮಾಡಿ ಕುಡಿದರೆ ತೂಕ ನಿಯಂತ್ರಣದ ಜೊತೆಗೆ ಶರೀರಕ್ಕೆ ಹತ್ತು ಹಲವು ಗುಣಗಳಿವೆ
ನೆಲ್ಲಿಕಾಯಿ ಜ್ಯೂಸ್ ಪ್ರತಿದಿನ ಬೆಳಗ್ಗೆ ಸೇವನೆ ಮಾಡಿದರೆ ಒಳ್ಳೆಯದು, ಯಾವುದೇ ಹೊತ್ತಿನಲ್ಲಿಯೂ ಸೇವಿಸಬಹುದು, ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇನ್ನೂ ಒಳ್ಳೆಯದು. ಈ ನೆಲ್ಲಿಕಾಯಿ ಜ್ಯೂಸ್ ಅನ್ನು ಮಾಡುವುದು ಹೇಗೆ? ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಕಷ್ಟ ಎನ್ನುವವರು ಪರ್ಯಾಯವಾಗಿ ಹೇಗೆ ಬಳಸಿ ಇದರ ಸಂಪೂರ್ಣ ಪ್ರಯೋಜನ ಪಡೆಯಬಹುದು ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ನೆಲ್ಲಿಕಾಯಿ
ಚಿಕ್ಕ ತುಂಡು ಬೆಲ್ಲ
ಒಂದೆರಡು ಕಲ್ಲುಪ್ಪು
2-3 ಕಾಳು ಮೆಣಸು
2-3 ಕರಿಬೇವಿನ
ಚಿಕ್ಕ ತುಂಡು ಶುಂಠಿ
ನೀರು ಒಂದೂವರೆ ಕಪ್
ಮಾಡುವ ವಿಧಾನ
- ನೆಲ್ಲಿಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ, ಬೀಜ ಹಾಕಬೇಡಿ. ಒಂದು ಲೋಟಕ್ಕೆ ಮೀಡಿಯಂ ಗಾತ್ರದ್ದು 2-3 ನೆಲ್ಲಿಕಾಯಿ ಬಳಸಬಹುದು.
- ಈಗ ಮಿಶ್ರಣ ಹಾಕಿ ಗ್ರೈಂಡ್ ಮಾಡಬೇಕು, ಹೀಗೆ ಮಾಡಿದರೆ ನೆಲ್ಲಿಕಾಯಿ ಜ್ಯೂಸ್ ರೆಡಿ.
ಒಂದು ಲೋಟ ಕುಡಿಯುವುದು ಬೇಡ, ಒಂದು ಗುಟುಕು ಬರುವಂತೆ ಕುಡಿಯಬೇಕು ಎಂದಾದರೆ ಈ ರೀತಿ ತಯಾರಿಸಿ
- 4-5 ನೆಲ್ಲಿಕಾಯಿಯನ್ನು ನೀರಿನಲ್ಲಿ ಅಥವಾ ಉಪ್ಪು ನೀರಿನಲ್ಲಿ ಒಂದು 10 ನಿಮಿಷ ನೆನೆಹಾಕಿ
- ನಂತರ ಅದರಿಂದ ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ, ಅದರ ಬೀಜ ತೆಗೆದು ಕತ್ತರಿಸಿ.
- ನಂತರ ಚಿಕ್ಕ ತುಂಡು ಶುಂಠಿ ಸೇರಿಸಿ ಗ್ರೈಂಡ್ ಮಾಡಿ.
- ನಂತರ ಜಾರಡಿಯಿಂದ ರಸ ಸೋಸಿ ಒಂದು ಲೋಟಕ್ಕೆ ಹಿಡಿಯಿರಿ.
- ಹೀಗೆ ಸಂಗ್ರಹವಾದ ಜ್ಯೂಸ್ ಅನ್ನು ಒಂದು ಅಥವಾ ಎರಡು ಗುಟುಕು ಕುಡಿದರೆ ಸಾಕು. ಬೇಕಿದ್ದರೆ ಇದಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಬಹುದು.
ಇಲ್ಲಾ ಸಿಹಿ ಬೇಕೆಂದರೆ ಉಪ್ಪು, ಕಾಳುಮೆಣಸಿನ ಬದಲಿದೆ ಜೇನು
ಸೇರಿಸಬಹುದು.
ಜೇನು ಹಾಕಿದ ತಕ್ಷಣ ಮಿಕ್ಸ್ ಮಾಡಿ ತಕ್ಷಣ ಕುಡಿಯಿರಿ, ಇಲ್ಲದಿದ್ದರೆ ಜೇನು
ಕೆಳಭಾಗದಲ್ಲಿ ಸೆಟ್ಲ್ ಆಗುತ್ತದೆ.
ಹೀಗೆ ಸ್ವಲ್ಪ ರಸ ಮಾತ್ರ ಕುಡಿಯುವುದು ಯಾರಿಗೆ
ಒಳ್ಳೆಯದು?
ಎಲ್ಲರಿಗೂ ನೆಲ್ಲಿಕಾಯಿ ಜ್ಯೂಸ್ ತುಂಬಾ ಒಳ್ಳೆಯದು, ಆದರೆ ಕೆಲವರಿಗೆ ಒಂದು ಲೋಟ
ಜ್ಯೂಸ್ ಕುಡಿಯುವುದು ತುಂಬಾ ಕಷ್ಟವಾಗುವುದು. ಅದರ ರುಚಿ ಇಷ್ಟವಾಗಲ್ಲ ಆದರೆ
ನೆಲ್ಲಿಕಾಯಿ ಗುಣಗಳನ್ನು ಪಡೆಯಬೇಕು ಎಂದಿರುತ್ತದೆ, ಅಂಥವರು ಎರಡನೇ ಆಯ್ಕೆ
ಮಾಡಬಹುದು. ಒಂದು ಗುಟುಕು ಸಿರಪ್ ಕುಡಿದ ರೀತಿಯಲ್ಲಿ ಕುಡಿಯಬಹುದು ಅಲ್ವಾ?
ಯಾವ ನೆಲ್ಲಿಕಾಯಿ ಬಳಸಬೇಕು?
ನಾಟಿ ನೆಲ್ಲಿಕಾಯಿ ಸಿಕ್ಕರೆ ಅದನ್ನು ಬಳಸಿ ಇನ್ನೂ ಒಳ್ಳೆಯದು, ಸಿಗದಿದ್ದರೆ
ಹೈಬ್ರಿಡ್ ನೆಲ್ಲಿಕಾಯಿ ಬಳಸಬಹುದು.
ನಾಟಿ ನೆಲ್ಲಿಕಾಯಿ ಸಿಕ್ಕರೆ ಹೆಚ್ಚು ಖರೀದಿಸಿ ಅದನ್ನು ಕತ್ತರಿಸಿ ಒಣಗಿಸಿ ಪುಡಿ
ಮಾಡಿ ಅದನ್ನು ಜ್ಯೂಸ್‌ಗೆ ಹಾಕಿ ಬಳಸಬಹುದು.
ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು?
ನೆಲ್ಲಿಕಾಯಿ ಜ್ಯೂಸ್ ಎಲ್ಲರಿಗೂ ಒಳ್ಳೆಯದು, ಅದೇ ಸಕ್ಕರೆ ಕಾಯಿಲೆ ಇರುವವರಿಗೆ
ಇನ್ನೂ ಒಳ್ಳೆಯದು, ಇದು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ.
ಹಾಗಾಗಿ ಮಧುಮೇಹಿಗಳು ಪ್ರತಿದಿನ ಇದರ ಸೇವನೆ ಮಾಡುವುದು ತುಂಬಾ ಒಳ್ಳೆಯದು.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಸಕ್ಕರೆಯಂಶ
ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿಯಾಗುವುದು.
ಮೈ ತೂಕ ನಿಯಂತ್ರಣಕ್ಕೆ ಸಹಕಾರಿ
ನೆಲ್ಲಿಕಾಯಿ ಜ್ಯೂಸ್ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ,
ಜೀರ್ಣಕ್ರಿಯೆಗೆ ಒಳ್ಳೆಯದು, ಮೈ ತೂಕ ನಿಯಂತ್ರಣಕ್ಕೆ ಸಹಕಾರಿ.
ಈಗಂತೂ ಕೂದಲು ಉದುರುವುದು ಬಹುತೇಕರ ಸಮಸ್ಯೆಯಾಗಿದೆ. ಕೂದಲು ಉದುರುವುದನ್ನು ತಡೆಗಟ್ಟಲು ಈ ಜ್ಯೂಸ್ ಸಹಕಾರಿಯಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಧಿಕವಿದೆ, ಹೀಗಾಗಿ ರೋಗ ನಿರೋಧಕ ಶಕ್ತಿ ತುಂಬಾ ಹೆಚ್ಚಾಗುವುದು, ಇದರಿಂದ ಆಗಾಗ ಕಾಯಿಲೆ ಬೀಳುವುದು ಕಡಿಮೆಯಾಗುವುದು.



Click it and Unblock the Notifications
