Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಆಂಧ್ರ ಮಾದರಿಯ ಗೊಂಗುರ ಸೊಪ್ಪಿನ ಚಟ್ನಿ ಮಾಡಿದ್ದೀರಾ? ಈ ರುಚಿ ನೀವೆಂದು ಸವಿದಿರಲ್ಲ..!
ನೀವು ಬೆಳಗ್ಗೆ ತಿಂಡಿಯ ಸಮಯಕ್ಕೆ ಇಲ್ಲವೆ, ಊಟಕ್ಕೆ ಅದ್ಭುತವಾದ ಚಟ್ನಿ ಮಾಡಿ ಸವಿಯಲು ಮುಂದಾಗಿರಬಹುದು. ಅದೇ ವೇಳೆ ಹಲವು ರೀತಿಯಲ್ಲಿ ಸೊಪ್ಪಿನ ಚಟ್ನಿ, ಪಲ್ಯ ಮಾಡುವುದು ಕೂಡ ನಾವು ನೋಡಬಹುದು. ಆದರಲ್ಲೂ ಸೊಪ್ಪಿನಲ್ಲಿ ಹಲವು ಬಗೆಯ ಆರೋಗ್ಯಕರ ಅಂಶಗಳಿರುವುದು ನಾವು ತಿಳಿದಿದ್ದೇವೆ. ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶಗಳು ಸೊಪ್ಪಿನಲ್ಲಿ ಸಿಗುತ್ತವೆ.
ಇನ್ನು ನಾವು ಗೊಂಗುರ ಸೊಪ್ಪಿನ ಕುರಿತು ತಿಳಿದಿರಬಹುದು. ಸಾಮಾನ್ಯವಾಗಿ ಆಂಧ್ರ ಹಾಗೂ ತೆಲಂಗಾಣದಲ್ಲಿ ಈ ಸೊಪ್ಪನ್ನು ಬಹಳ ಬಳಸುತ್ತಾರೆ. ಉತ್ತರ ಭಾಗದಲ್ಲೂ ಈ ಸೊಪ್ಪಿನ ಬಳಕೆ ಹೆಚ್ಚಾಗಿದೆ. ರೆಡ್ ಸೊರೆಲ್ ಎಂದು ಕರೆಯಲ್ಪಡುವ ಈ ಸೊಪ್ಪು ನಮ್ಮ ದೇಃಕ್ಕೆ ಬಹಳ ಉತ್ತಮವಾದ ಹಾಗೆ ಅಗತ್ಯ ಪೋಷಣಾತ್ಮಕ ಅಂಶಗಳ ಹೊಂದಿರಲಿದೆ.

ಈ ಸೊಪ್ಪಿನಲ್ಲಿ ವಿಟಮಿನ್ ಎ ಮತ್ತು ಸಿ, ಫೈಬರ್ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುವುದು ನಮ್ಮ ದೇಹಕ್ಕೆ ಬಹಳ ಉತ್ತಮವಾಗಿರಲಿದೆ. ಹಾಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಜೀರ್ಣಕ್ರಿಯೆ ಉತ್ತೇಜಿಸಲು ಕೂಡ ಇದು ಬಹಳ ಮುಖ್ಯವಾಗಿರಲಿದೆ. ಇದು ಉತ್ತಮ ನಾರಿನ ಮೂಲವಾಗಿರುವ ಸೊಪ್ಪು ಎಂದು ಗುರುತಿಸಲಾಗಿದೆ. ಇದರಲ್ಲಿ ಅತ್ಯಧಿಕ ಪೊಟ್ಯಾಸಿಯಂ ಅಂಶವೂ ಇದ್ದು , ಉರಿಯೂತ, ಉತ್ತಮ ನಿದ್ರೆಗೂ ಕೂಡ ಈ ಸೊಪ್ಪು ಅತ್ಯುತ್ತಮವಾಗಿದೆ. ಹಾಗಾದ್ರೆ ಈ ಸೊಪ್ಪಿನಿಂದ ಎಷ್ಟೊಂದು ಆರೋಗಕರ ಅಂಶಗಳಿವೆಯೋ ಹಾಗೆ ಅದ್ಭುತ ರುಚಿ ಹೊಂದಿದೆ. ಹಾಗಾದ್ರೆ ನಾವಿಂದು ಆಂಧ್ರ ಶೈಲಿಯಲ್ಲಿ ಮಾಡುವಂತಹ ಗೊಂಗುರ ಚಟ್ನಿಯನ್ನು ಮಾಡುವ ಕುರಿತು ತಿಳಿದುಕೊಳ್ಳೋಣ.
ಈ ಚಟ್ನಿ ಎಲ್ಲಾ ತಿಂಡಿಯ ಜೊತೆಗೂ ನೀವು ಸವಿಯಬಹುದು, ಹಾಗೆ ಊಟದ ಜೊತೆಗೆ ಇದು ರುಚಿಕರವಾಗಿರಲಿದೆ, ಹಾಗಾದ್ರೆ ಆಂಧ್ರ ಮಾದರಿಯಲ್ಲಿ ಗೊಂಗುರ ಚಟ್ನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ಗೊಂಗುರ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಗೊಂಗುರ ಸೊಪ್ಪು- 1 ಕಟ್
ಜೀರಿಗೆ ಸಾಸಿವೆ
ಬೆಳ್ಳುಳ್ಳಿ
ಎಣ್ಣೆ
ಮೆಂತ್ಯ
ಧನಿಯಾ ಕಾಳು
ಒಣ ಮೆಣಸು (ಹೆಚ್ಚಾಗಿ ಬಳಸಿಕೊಳ್ಳಿ)
ಕರಿಬೇವು
ಮೆಂತ್ಯ
ಉದ್ದಿನ ಬೇಳೆ
ಕಡಲೆ ಬೇಳೆ
ಉಪ್ಪು
ಆಂಧ್ರ ಶೈಲಿಯ ಗೊಂಗುರ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಒಣ ಮೆಣಸು ಹಾಕಿಕೊಳ್ಳಿ, ಹಾಗೆ ಜೀರಿಗೆ, ಧನಿಯಾ ಕಾಳು, ಮೆಂತ್ಯ, ಬೆಳ್ಳುಳ್ಳಿ, ಕರಿಬೇವು ಹಾಕಿ ಚೆನ್ನಾಗಿ ಹುರಿಯಬೇಕು. 1 ಸ್ಪೂನ್ ಎಣ್ಣೆ ಸಹ ಹಾಕಿಕೊಂಡು ಹುರಿದುಕೊಳ್ಳಬೇಕು. 5 ನಿಮಿಷ ಹುರಿದು ಇದನ್ನು ತೆಗೆದು ಬದಿಗಿಟ್ಟು ತಣ್ಣಗಾಗಲು ಬಿಡಿ.
ಇಗ ಗೊಂಗುರ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ, ಈಗ ಒಲೆ ಮೇಲಿನ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಇದಕ್ಕೆ ಎಲ್ಲಾ ಸೊಪ್ಪುಗಳನ್ನು ಹಾಕಿಕೊಳ್ಳಿ. ಸೊಪ್ಪಿನಲ್ಲಿ ನೀರು ಇರುವ ಕಾರಣ ಎಚ್ಚರಿಕೆಯಿಂದ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದು ಚೆನ್ನಾಗಿ ಫ್ರೈ ಆಗಬೇಕು. ಒಲೆ ಮೇಲೆಯೇ ಇದು ನುಣ್ಣಗೆ ಪೇಸ್ಟ್ ಆಗುತ್ತದೆ. ಇದನ್ನು ರುಬ್ಬಿಕೊಳ್ಳುವುದು ಬೇಡ, ಹಾಗೆಯೇ ಪೇಸ್ಟ್ ಆಗಲಿದೆ.
ಈಗ ಮಿಕ್ಸಿ ಜಾರ್‌ಗೆ ಮೊದಲು ಹುರಿದುಕೊಂಡ ಮಸಾಲೆಗಳನ್ನು ಇದಕ್ಕೆ ಹಾಕಿ ಉಪ್ಪು ಹಾಕಿ ನುಣ್ಣಗೆ ಹುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಈಗ ಒಲೆ ಮೇಲಿನ ಗೊಂಗುರ ಸೊಪ್ಪಿನ ಪೇಸ್ಟ್‌ಗೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ, ಈ ಮಸಾಲೆ ಚೆನ್ನಾಗಿ ಬೆರೆಯುವವೆಗೂ ಮಿಕ್ಸ್ ಮಾಡಿ. 4 ನಿಮಿಷ ಬೇಯಿಸಿದ ಬಳಿಕ ಇದಕ್ಕೆ ಒಗ್ಗರಣೆ ನೀಡಬೇಕು. ಇದಕ್ಕೆ ಒಂದು ಸಣ್ಣ ಪಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಜೀರಿಗೆ, ಸಾಸಿವೆ, ಇಂಗು, ಕರಿಬೇವು, ಕಡಲೆಬೇಳೆ, ಉದ್ದಿನ ಬೇಳೆ, ಬೆಳ್ಳುಳ್ಳಿ, ಒಣ ಮೆಣಸು ಹಾಕಿ ಫ್ರೈ ಮಾಡಿಕೊಂಡು ಇದನ್ನು ಚಟ್ನಿ ಜೊತೆಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಗೊಂಗುರ ಸೊಪ್ಪಿನ ಚಟ್ನಿ ಸಿದ್ದವಾಗಲಿದೆ.



Click it and Unblock the Notifications