Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೃದು ಜಾಮೂನಂತೆ ಗೋಲಿ ಇಡ್ಲಿ ಮಾಡಿದ್ದೀರಾ?: ಇಲ್ಲಿದೆ ಸಿಂಪಲ್ ರೆಸಿಪಿ
ನೀವು ಮನೆಯಲ್ಲಿ ಯಾವ ರೀತಿ ಇಡ್ಲಿ ಮಾಡಿರುತ್ತೀರಿ, ನೀವು ರವೆ ಇಡ್ಲಿ, ಗೋಧಿ ಹಿಟ್ಟಿನ ಇಡ್ಲಿ, ಮಲ್ಲಿಗೆ ಇಡ್ಲಿ, ಅವಲಕ್ಕಿ ಹಾಕಿ ಮಾಡುವ ಇಡ್ಲಿ ಹೀಗೆ ನಾನಾ ವಿಧದ ಇಡ್ಲಿ ಸವಿದಿರಬಹುದು. ಈಗಂತು ಇಡ್ಲಿಯಲ್ಲಿ ಎಷ್ಟೊಂದು ವೆರೈಟಿ ಬಂದಿವೆ ಅಂದ್ರೆ ಅದನ್ನ ನಂಬೋಕು ಆಗಲ್ಲ. ಕೆಲವೊಂದು ಕಡೆ ತಟ್ಟೆ ಇಡ್ಲಿಯಿಂದ ಹಿಡಿದು ಸ್ಪೆಷಲ್ ಇಡ್ಲಿಗಳು ಸಹ ದುಬಾರಿ ಬೆಲೆ ನೀಡಿ ಸವಿದಿರುತ್ತೀರಿ.
ಆದ್ರೆ ಎಂದಾದ್ರು ನೀವು ಗೋಲಿ ಇಡ್ಲಿ ಸವಿದಿದ್ದೀರಾ? ಕೆಲವರು ಈ ಹೆಸರು ಇದೇ ಮೊದಲು ಕೇಳುತ್ತಿರಬಹುದು. ಹೌದು ಗೋಲಿ ಇಡ್ಲಿ ಈಗ ಹೆಚ್ಚು ಫೇಮಸ್ ಆಗುತ್ತಿರುವ ಇಡ್ಲಿಯ ಮತ್ತೊಂದು ವಿಧವಾಗಿದೆ. ಗೋಲಿ ಇಡ್ಲಿ ನೋಡಲು ದೊಡ್ಡ ಗಾತ್ರದ ಗೋಲಿಯಂತೆಯೇ ಇರುತ್ತದೆ. ಮೃದುವಾಗಿರುವ ಇದನ್ನು ಒಂದೇ ಬಾಯಿಗೆ ತಿನ್ನಬಹುದು. ಸುಮಾರು 10, 15 ಇಡ್ಲಿ ಸವಿಯಬಹುದು.

ಹಾಗಾದ್ರೆ ಈ ಗೋಲಿ ಇಡ್ಲಿ ಮಾಡುವುದು ಹೇಗೆ? ಗೋಲಿ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.
ಗೋಲಿ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು
- ಶುಂಠಿ
- ಕರಿಬೇವು
- ಎಣ್ಣೆ
- ಇಂಗು
- ಉದ್ದಿನ ಬೇಳೆ
- ಕಡಲೆ ಬೇಳೆ
- ಹಸಿ ಮೆಣಸು
- ತುಪ್ಪ
ಗೋಲಿ ಇಡ್ಲಿ ಮಾಡುವ ವಿಧಾನ
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅರ್ಧ ಗ್ಲಾಸ್ ನೀರು ಹಾಕಿ. ಆ ನೀರಿಗೆ ಉಪ್ಪು ತುಪ್ಪ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಅದಕ್ಕೆ ಒಂದೂವರೆ ಬೌಲ್ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನೀರಿನ ಅಂಶ ಹೋಗುವವರೆಗೂ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಈ ಹಿಟ್ಟು ಹುಡಿ ಹುಡಿಯಾಗುವಂತೆ ಮಾಡಿಕೊಳ್ಳಿ.
ಒಂದು ಬೌಲ್‌ಗೆ ಈ ಹಿಟ್ಟು ಹಾಕಿಕೊಂಡು ಸ್ವಲ್ಪ ಸ್ವಲ್ಪ ಬಿಸಿ ನೀರು ಹಾಕಿಕೊಳ್ಳುತ್ತಾ ಹಿಟ್ಟು ಮಾಡಿಕೊಳ್ಳಿ. ಹಿಟ್ಟು ತುಂಬಾನೆ ಮೃದುವಾಗವಂತೆ ಮಾಡಿಕೊಳ್ಳಬೇಕು. ಬಳಿಕ ಗೋಲಿ ಆಕಾರದಲ್ಲಿ ಉಂಡೆಗಳ ಮಾಡಿಕೊಳ್ಳಬೇಕು. ನಂತರ ಇಡ್ಲಿಗೆ ಸ್ಟೀಮ್ ರೆಡಿ ಮಾಡಿಕೊಳ್ಳಿ. ಇಡ್ಲಿ ಮಾಡುವ ವಿಶೇಷ ಕುಕ್ಕರ್ ಅಥವಾ ಸ್ಟೀಮ್ ರೆಡಿ ಮಾಡಿಕೊಳ್ಳಿ.
ಈ ಪಾತ್ರೆಯಲ್ಲಿ ಇಡ್ಲಿ ಹಾಕಿ ಚೆನ್ನಾಗಿ ಬೇಯಲು ಬಿಡಿ. ಸುಮಾರು 20 ನಿಮಿಷಗಳ ಕಾಲ ಇಡ್ಲಿ ಬೇಯಲು ಬಿಡಬೇಕು. ಬಳಿಕ ಮುಚ್ಚಳ ತೆಗೆದು ಇಡ್ಲಿ ಬೆಂದಿದೆಯೇ ನೋಡಿಕೊಳ್ಳಿ.
ಈಗ ಈ ಗೋಲಿ ಇಡ್ಲಿ ಸವಿಯಲು ಮಸಾಲೆ ಮಾಡಿಕೊಳ್ಳಿ. ಮೊದಲು ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಕ ಸಾಸಿವೆ ಹಾಕಿ, ಬೇಳೆ, ಉದ್ದಿನ ಬೇಳೆ, ಇಂಗು, ಕರಿಬೇವು ಹಾಕಿ ಫ್ರೈ ಮಾಡಿ. ಬಳಿಕ ಇದಕ್ಕೆ ಹಸಿ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇಷ್ಟಾದ ಮೇಲೆ ಈ ಎಲ್ಲಾ ಇಡ್ಲಿಗಳನ್ನು ಆ ಪಾತ್ರೆಗೆ ಹಾಕಿ ಚೆನ್ನಾಗಿ ಅದರ ಮೇಲೆ ಉರುಳಿಸಿಕೊಳ್ಳಿ.
ನೀವು ಹಾಗೆಯೇ ಇಡ್ಲಿ ಚಟ್ನಿ ಜೊತೆ ಸವಿಯಬಹುದು. ಇಲ್ಲದಿದ್ದರೆ ಈ ಮಸಾಲೆಗೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಂಡು ಸಹ ಸವಿಯಬಹುದು. ಒಮ್ಮೆ ನೀವು ಸಹ ಈ ಗೋಲಿ ಇಡ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
