Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗೋಧಿ ಹಿಟ್ಟಿನ ಪೇಪರ್ ರೋಸ್ಟ್ ದೋಸೆ: ಹಿಟ್ಟು ನೆನೆಸೋದು ಬೇಡ, ಎಣ್ಣೆಯೂ ಬೇಡ!
ಬ್ರೇಕ್ಫಾಸ್ಟ್ ಸಮಯಕ್ಕೆ ನೀವು ಹಲವು ಬಗೆಯ ಖಾದ್ಯ ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ಯಾವಾಗಲು ನೀವು ದೋಸೆ ಸವಿಯಲು ಇಷ್ಟಪಡುವ ಮಂದಿ ಆಗಿರಬಹುದು. ದೋಸೆ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಬ್ರೇಕ್ಫಾಸ್ಟ್. ದೋಸೆಯಲ್ಲು ಹಲವು ರೀತಿಯ ಬಗೆಗಳಿವೆ. ವಿವಿಧ ಬಗೆಯ ದೋಸೆಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ.
ನಿಮಗೆ ಹೋಟೆಲ್ನಲ್ಲಿ ಸಿಗುವ ಮಸಾಲೆ ದೋಸೆ, ರವೆ ದೋಸೆ, ಈರುಳ್ಳಿ ದೋಸೆ, ಸೆಟ್ ದೋಸೆ ಹೀಗೆ ಹತ್ತು ಹಲವು ಬಗೆಯ ದೋಸೆಗಳು ಇಷ್ಟವಾಗೋದ್ರಲ್ಲಿ ಅನುಮಾನವಿಲ್ಲ. ಹಾಗೆ ದೋಸೆಯನ್ನು ಮಕ್ಕಳಿಂದ ಹಿಡಿದು ಹಿರಿಯರು ಕೂಡ ಸವಿಯಲು ಇಷ್ಟಪಡುತ್ತಾರೆ ಇನ್ನು ದೋಸೆಗಳನ್ನು ಮಾಡಿ ಸವಿಯುವಾಗ ನೀವು ಹಿಂದಿನ ದಿನವೇ ತಯಾರಿ ಬೇಕಾಗುತ್ತದೆ.

ಆದರೆ ನಾವಿಂದು ಸುಲಭವಾಗಿ ಕಡಿಮೆ ತಯಾರಿಯಲ್ಲಿ ಪೇಪರ್ ರೋಸ್ಟ್ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಗೋಧಿ ಹಿಟ್ಟು ಬಳಸಿ ಪೇಪರ್ ದೋಸೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಅನ್ನೋದನ್ನು ತಿಳಿದುಕೊಳ್ಳಿ.
ಗೋಧಿ ಹಿಟ್ಟಿನ ಪೇಪರ್ ರೋಸ್ಟ್ ದೋಸೆ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು
- ಸಣ್ಣ ರವೆ
- ಮೊಸರು
- ಕೆಡಲೆ ಹಿಟ್ಟು
- ಉಪ್ಪು
- ಸಕ್ಕರೆ
ಗೋಧಿ ಹಿಟ್ಟಿನ ಪೇಪರ್ ರೋಸ್ಟ್ ದೋಸೆ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅಳತೆ ಕಪ್ನಲ್ಲಿ 1 ಕಪ್ ಗೋಧಿ ಹಿಟ್ಟು ಹಾಕಿ ನಂತರ ಅರ್ಧ ಕಪ್ ಸಣ್ಣ ರವೆ ಅಥವಾ ಚಿರೋಟಿ ರವೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಕಾಲು ಕಪ್ ಕಡಲೆ ಹಿಟ್ಟು ಹಾಕಿ ನಂತರ ಸಕ್ಕರೆ ಹಾಕಿಕೊಂಡು 2 ಸುತ್ತು ರುಬ್ಬಿಕೊಳ್ಳಬೇಕು. ನಂತರ ಮುಚ್ಚಳ ತೆಗೆದು ಅದಕ್ಕೆ ಅರ್ಧ ಕಪ್ ಮೊಸರು ಕೂಡ ಹಾಕಿಕೊಂಡು, ಮುಕ್ಕಾಲು ಕಪ್ ನೀರು ಹಾಕಿ ರುಬ್ಬಿಕೊಳ್ಳಬೇಕು.
ನಂತರ ಒಂದು ಪಾತ್ರೆಗೆ ಈ ಹಿಟ್ಟು ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಒಲೆ ಮೇಲೆ ಕಾವಲಿ ಬಿಸಿಯಾಗಲು ಬಿಡಿ, ನಂತರ ಒರೆಸಿಕೊಂಡು ಬೇಕಿದ್ದರೆ ತುಪ್ಪ ಹಾಕಿಕೊಂಡು ಈ ಹಿಟ್ಟು ಹಾಕಿಕೊಳ್ಳಿ. ಇಂದು ಒಂದು ಕಡೆ ಕಾಯಲು 2ರಿಂದ 3 ನಿಮಿಷ ಬೇಕಾಗುತ್ತದೆ. ದೋಸೆ ಹಿಟ್ಟು ಬಳಸೋದ್ರಿಂದ ಬಹಳ ಸಮಯ ಬೇಕಾಗುತ್ತದೆ. ಹೀಗೆ ಎಲ್ಲಾ ಹಿಟ್ಟನ್ನು ದೋಸೆ ಮಾಡಿಕೊಳ್ಳಿ.
ಇದು ಬಹಳ ತೆಳುವಾಗಿ ಬರಲಿದೆ. ಎರಡೂ ಕಡೆ ರೋಸ್ಟ್ ಮಾಡಿಕೊಂಡರೆ ಆ ರುಚಿಗೆ ನಿಮ್ಮ ಬಾಯಲ್ಲಿ ನೀರು ಬರಲಿದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ. ಬಹಳ ರುಚಿಕರ ಹಾಗೆ ಕ್ರಿಸ್ಪಿಯಾದ ದೋಸೆ ಇದು. ಇದನ್ನು ಮಾಡಲು ಹಿಂದಿನ ದಿನದ ತಯಾರಿಯ ಅಗತ್ಯವೂ ಇಲ್ಲ. ಥಟ್ ಎಂದು ಮನೆಯಲ್ಲಿ ರೆಡಿ ಮಾಡಬಹುದು.
ಈ ದೋಸೆಯ ಜೊತೆ ಸವಿಯಲು ನೀವು ತೆಂಗಿನಕಾಯಿ ಚಟ್ನಿ ಇಲ್ಲವೆ ಹುರಿಗಡಲೆ ಚಟ್ನಿ ಮಾಡಬಹುದು. ಇದರಿಂದ ದೋಸೆಯ ರುಚಿ ದುಪ್ಪಟ್ಟಾಗುತ್ತೆ.



Click it and Unblock the Notifications
