Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೊಂಬಾಟ್ ರುಚಿಯ ಗೋಧಿ ನುಚ್ಚಿನ ಉಪ್ಪಿಟ್ಟು ಮಾಡಿ ನೋಡಿ..!
ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಅಂದ್ರೆ ಹಲವರು ದೂರ ನಿಲ್ಲುತ್ತಾರೆ. ಏಕೆಂದರೆ ಉಪ್ಪಿಟ್ಟು ಎಲ್ಲರ ಫೇವರಿಟ್ ತಿಂಡಿ ಆಗಿಲ್ಲ. ಯಾಕಂದ್ರೆ ಉಪ್ಪಿಟ್ಟು ತಿಂದ ಮೇಲೆ ಹೆಚ್ಚು ಹೆಚ್ಚು ನೀರು ಕುಡಿಯಬೇಕು ಅನಿಸುತ್ತದೆ. ಆದರೆ ಕೆಲವರು ಉಪ್ಪಿಟ್ಟು ಅಂದ್ರೆ ಪ್ರಾಣ ಬಿಡುತ್ತಾರೆ. ಮನೆಯಲ್ಲಿದ್ದರು ಉಪ್ಪಿಟ್ಟು, ಹೋಟೆಲ್‌ನಲ್ಲೂ ಉಪ್ಪಿಟ್ಟು ಆರ್ಡರ್ ಮಾಡಿ ಸವಿಯುತ್ತಾರೆ.
ಇನ್ನು ಈ ಉಪ್ಪಿಟ್ಟನ್ನು ಹಲವು ರೀತಿ ಹಲವು ರುಚಿಯಲ್ಲಿ ಮಾಡಬಹುದು. ರವೆಯ ಮೂಲಕ ಬಟಾಣಿ ಹಾಕಿ ಮಾಡುವ ಉಪ್ಪಿಟ್ಟು ಇಂದಿಗೂ ಹೆಚ್ಚು ಚಾಲ್ತಿಯಲ್ಲಿದೆ. ಬಹುತೇಕರ ಮನೆಯಲ್ಲಿ ಗಡಿಬಿಡಿಯ ತಿಂಡಿಯಾಗಿ ಈ ಉಪ್ಪಿಟ್ಟು ಮಾಡಲ್ಪಡುತ್ತದೆ. ಸುಲಭವಾಗಿ ಕಡಿಮೆ ಸಮಯದಲ್ಲಿ ಈ ಉಪ್ಪಿಟ್ಟು ಮಾಡಬಹುದಾಗಿದೆ.

ಆದ್ರೆ ನೀವು ಎಂದಾದ್ರೂ ಗೋಧಿಯಿಂದ ಉಪ್ಪಿಟ್ಟು ಮಾಡಿದ್ದೀರಾ? ಹೌದು ಗೋಧಿ ನುಚ್ಚಿನಲ್ಲಿ ರುಚಿ ರುಚಿಯ ಬೊಂಬಾಟ್ ಉಪ್ಪಿಟ್ಟು ಮಾಡಬಹುದು. ಕೆಲವು ಭಾಗದಲ್ಲಿ ಈ ಉಪ್ಪಿಟ್ಟು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಖಾದ್ಯವಾಗಿದೆ.
ಹಾಗಾದ್ರೆ ನಾವಿಂದು ಈ ಗೋಧಿ ನುಚ್ಚಿನ ಉಪ್ಪಿಟ್ಟು ಮಾಡುವುದು ಹೇಗೆ? ಈ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಉಪ್ಪಿಟ್ಟು ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂಬ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಗೋಧಿ ನುಚ್ಚಿನ ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು
- ಗೋಧಿ ನುಚ್ಚು- 1/2 ಕಪ್
- ಸಾಸಿವೆ - 1/2 ಟೀಸ್ಪೂನ್
- ಕಡಲೆ ಬೇಳೆ - 1/2 tbs
- ಉದ್ದಿನಬೇಳೆ - 1/2 tbs
- ನೆಲಗಡಲೆ - 1 tbs
- ಈರುಳ್ಳಿ-1
- ಬಟಾಣಿ - 5
- ಟೊಮೆಟೊ - 1
- ಕ್ಯಾರೆಟ್-1
- ಶುಂಠಿ-1 ಇಂಚು
- ಹಸಿರು ಮೆಣಸಿನಕಾಯಿ - 5
- ಆಲೂಗಡ್ಡೆ-1
- ಕರಿಬೇವಿನ ಎಲೆಗಳು - 2 tbs
- ಕೊತ್ತಂಬರಿ ಸೊಪ್ಪು - 2 tbs
- ನೀರು (1/2 ಕಪ್) - 3 ಕಪ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಗೋಧಿ ನುಚ್ಚಿನ ಉಪ್ಪಿಟ್ಟು ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಗೋಧಿ ನುಚ್ಚನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದು ಗೋಲ್ಡನ್ ಕಲರ್ ಬರುವರೆಗೂ ಫ್ರೈ ಮಾಡಬೇಕು. ಬಳಿಕ ಇದನ್ನು ಎತ್ತಿಟ್ಟುಕೊಳ್ಳಿ, ಇನ್ನೊಂದೆಡೆ ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಕಡಲೆ, ಸಾವಿವೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಬೀನ್ಸ್, ಕ್ಯಾರೆಟ್, ಈರುಳ್ಳಿ, ಬಟಾಣಿ, ಶುಂಠಿ, ಹಸಿ ಮೆಣಸು, ಆಲೂಗಡ್ಡೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಕರಿಬೇವು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಬಳಿಕ ಇದಕ್ಕೆ ಹುರಿದುಕೊಂಡ ಗೋಧಿ ನುಚ್ಚನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಬಳಿಕ ಅಳತೆಯ ಪ್ರಕಾರ ಒಂದಕ್ಕೆ ಎರಡು ಕಪ್‌ನಂತೆ ನೀರು ಹಾಕಿ ಜೊತೆಗೆ 1 ಕಪ್ ನೀರು ಜಾಸ್ತಿ ಹಾಕಿಕೊಳ್ಳಿ. 1 ಕಪ್ ಗೋಧಿಗೆ 3 ಕಪ್ ನೀರು ಹಾಕಬೇಕು.
ನೀರು ಹಾಕಿ ಕುದಿಯುತ್ತಿರುವಾಗ ಮಿಕ್ಸ್ ಮಾಡಿ ಮುಚ್ಚಳ ಹಾಕಿ 1 ಸೀಟಿ ಹೊಡೆಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಗೋಧಿ ನುಚ್ಚಿನ ಉಪ್ಪಿಟ್ಟು ರೆಡಿಯಾಗಿರುತ್ತದೆ. ಇದಕ್ಕೆ ಚಟ್ನಿ ಜೊತೆ ಸವಿಯಬಹುದು. ಊಟದ ಬಾಕ್ಸ್ ಗೂ ಸಹ ಈ ಉಪ್ಪಿಟ್ಟು ಹಾಕಿಕೊಂಡು ಮಧ್ಯಾಹ್ನವು ಸಹ ಸವಿಯಬಹುದು.



Click it and Unblock the Notifications
