Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಎಲ್ಲರ ಬಾಯಲ್ಲೂ ನೀರು ತರಿಸುವ ಗೋಧಿ ಕಡಿ ಪಾಯಸ ಮಾಡಿ!
ಹಬ್ಬದ ಸಮಯದಲ್ಲಿ ಮಾಡುವ ರುಚಿ ರುಚಿಯ ಹಾಗೆ ಎಲ್ಲರಿಗೂ ಇಷ್ಟವಾಗುವ ಸಿಹಿಗಳ ಪೈಕಿ ನಾವು ಪಾಯಸವನ್ನು ಸವಿಯಲು ಬಹಳ ಇಷ್ಟಪಡುತ್ತೇವೆ. ಹಬ್ಬ, ವ್ರತ, ವಿಶೇಷ ದಿನ, ಶುಭ ಕಾರ್ಯಗಳ ಮಾಡುವಾಗ, ಖುಷಿ ವಿಚಾರಗಳಿದ್ದಾಗ ಸಿಹಿ ಮಾಡುತ್ತಾರೆ. ಸಾಮಾನ್ಯವಾಗಿ ಪಾಯಸ ಮಾಡುವಾಗ ಎಲ್ಲರಿಗೂ ಇಷ್ಟವಾಗುವಂತಹ ಪಾಯಸ ಮಾಡುತ್ತಾರೆ.
ಪಾಯಸದಲ್ಲಿ ಹತ್ತು ಹಲವು ಬಗೆಗಳಿವೆ. ನಾವಿಂದು ಸುಲಭವಾಗಿ ಮಾಡುವ ಗೋಧಿ ಕಡಿ ಪಾಯಸ ಕುರಿತಾಗಿ ತಿಳಿದುಕೊಳ್ಳೋಣ. ಗೋಧಿ ಕಡಿ ಪಾಯಸ ಅಂದ್ರೆ ಹಲವರ ಬಾಯಲ್ಲಿ ನೀರು ಬರಲಿದೆ. ಹಾಗೆ ಈ ಪಾಯಸ ಮಾಡಲು 5 ನಿಮಿಷ ಸಾಕಾಗುತ್ತದೆ. ಹಾಗಾದ್ರೆ ಈ ಗೋಧಿ ಕಡಿ ಪಾಯಸ ಮಾಡುವುದು ಹೇಗೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಈ ಗೋಧಿ ಕಡಿ ಪಾಯಸ ಎಲ್ಲಾ ದಿನದಲ್ಲೂ ಸವಿಯಬಹುದು. ಹಾಗೆ ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮವಾದ ಸಿಹಿ. ಹಾಗೆ ಮಾಡಲು ಕಡಿಮೆ ವಸ್ತುಗಳು ಸಾಕಾಗುತ್ತದೆ. ಹಾಗಾದ್ರೆ ವಿಶೇಷ ದಿನದಲ್ಲಿ ಸಂಭ್ರಮ ಹೆಚ್ಚಿಸುವಂತಹ ಈ ಗೋಧಿ ಕಡಿ ಪಾಯಸ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ. ಗೋಧಿ ಕಡಿ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಮಾಹಿತಿ ಇಲ್ಲಿದೆ.
ಗೋಧಿ ಕಡಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು
- ಗೋಧಿ ಕಡಿ
- ಬೆಲ್ಲ
- ಗೋಡಂಬಿ
- ಕಡಲೆ ಬೇಳೆ
- ದ್ರಾಕ್ಷಿ
- ತುಪ್ಪ
- ಏಲಕ್ಕಿ
ಗೋಧಿ ಕಡಿ ಪಾಯಸ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ಗೆ ಗೋಧಿ ಕಡಿ ಹಾಕಿಕೊಂಡು ಅದಕ್ಕೆ ಕಾಲು ಕಪ್ ಕಡಲೆ ಬೇಳೆ ಸೇರಿಸಿ ನೀರು ಹಾಕಿ ಚೆನ್ನಾಗಿ 2 ಬಾರಿ ತೊಳೆದು ಅನಂತರ 10 ನಿಮಿಷ ನೆನೆಯಲು ಬಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಗಸೆಗಸೆ, ಏಲಕ್ಕಿ, ಕಾಯಿ ತುರಿ ಹಾಕಿ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಈ ವಸ್ತುಗಳ ಬದಿಗಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಕುದಿಬರಲು ಬಿಡಿ. ನೀರು ಕುದಿಬರುವಾಗ ನೆನೆಸಿಟ್ಟ ಗೋಧಿ ಕಡಿ ಹಾಗೂ ಬೇಳೆ ಹಾಕಿ ಲವಂಗ, ಉಪ್ಪು ಹಾಕಿ ಬೇಯಲು ಬಿಡಿ. 15 ನಿಮಿಷ ಆದರೂ ಬೇಯಲು ಬಿಡಿ. 5 ನಿಮಿಷದ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಂಡ ವಸ್ತುಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಹಾಗೆ ರುಚಿಗೆ ತಕ್ಕಷ್ಟು ಬೆಲ್ಲ ಸಹ ಹಾಕಿಕೊಂಡು ಮಿಶ್ರಣ ಮಾಡಿ.
ನಿಮಗೆ ಯಾವ ಹದಕ್ಕೆ ಬೇಕೋ ಆ ಹದಕ್ಕೆ ನೀರು ಇಲ್ಲವೆ ಹಾಲು ಹಾಕಿಕೊಂಡು ಪಾಯಸ ದಪ್ಪ ಅಥವಾ ತೆಳು ಮಾಡಿಕೊಳ್ಳಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಒಣ ಕೊಬ್ಬರಿಯನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿ. 2 ನಿಮಿಷ ಕುದಿಬರಲು ಬಿಟ್ಟು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಗೋಧಿ ಕಡಿ ಪಾಯಸ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
