Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಮನೆಯಲ್ಲೇ ಮಾಡಿ ಅದ್ಭುತ ಗೋಬಿ ರೈಸ್..! ಸಿಂಪಲ್ ರೆಸಿಪಿ ಇಲ್ಲಿದೆ..!
ಮಕ್ಕಳಿಗೆ ಹಿರಿಯರಿಗೆ ಎಲ್ಲರಿಗೂ ರಸ್ತೆ ಬದಿಯಲ್ಲಿ ಸಿಗುವಂತಹ ಎಲ್ಲಾ ರೀತಿಯ ತಿಂಡಿಯೂ ಕೂಡ ಸವಿಯಲು ಇಷ್ಟಪಡುತ್ತಾರೆ. ಹಾಗೆ ಬಹುಯೇಕ ರಸ್ತೆ ಬದಿಯಲ್ಲಿ ಸಿಗುವಂತಹ ಖಾದ್ಯಗಳನ್ನು ಬಾಯಿ ಚಪ್ಪರಿಸಿ ಸವಿಯುತ್ತಾರೆ. ಪಾನಿಪೂರಿ, ಗೋಬಿ ಮಂಚೂರಿ, ಎಗ್ ರೈಸ್, ಬೋಂಡಾ, ಕರಿದ ತಿಂಡಿ, ನೂಡಲ್ಸ್ ಹೀಗೆ ಹತ್ತು ಹಲವು ಖಾದ್ಯ ಬಾಯಿಯಲ್ಲಿ ನೀರು ತರಿಸುತ್ತವೆ.
ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯದಲ್ಲಿ ಈ ಗೋಬಿ ರೈಸ್ ಕೂಡ ಒಂದಾಗಿದೆ. ಗೋಬಿ ಜೊತೆಗೆ ಫ್ರೈ ಮಾಡಿದ ರೈಸ್ ಸವಿಯುವುದು ಅಂದ್ರೆ ಎಲ್ಲರಿಗೂ ಬಲು ಇಷ್ಟ. ಹಾಗೆ ರೈಸ್ನ ನಡುವೆ ಸವಿಯಲು ಸಿಗುವ ಗೋಬಿ ಈ ರುಚಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಸಂಜೆ ಸಮಯದಲ್ಲಿ ಈ ಗೋಬಿ ರೈಸ್ ಸವಿಯೋದೆ ಮಜ. ಹಾಗೆ ನಾವು ಇದನ್ನು ಮನೆಯಲ್ಲೂ ಕೂಡ ಮಾಡಿ ಸವಿಯಬಹುದು.

ರಾತ್ರಿ ಊಟದ ಬದಲಿಗೆ ಇಲ್ಲವೆ ಸಂಜೆ ಸ್ನ್ಯಾಕ್ಸ್ಗಾಗಿಯೂ ಈ ಗೋಬಿ ರೈಸ್ ಮಾಡಿಕೊಂಡು ಸವಿಯಬಹುದು. ಇದರ ರುಚಿ ನಮಗೆ ಹಿಡಿಸುವುದಿಲ್ಲ ಎಂದು ಹೇಳುವವರು ಬಹಳ ಕಡಿಮೆ. ಹಾಗಾದ್ರೆ ನಾವಿಂದು ಮನೆಯಲ್ಲೇ ಈ ರುಚಿ ರುಚಿಯ ಗೋಬಿ ರೈಸ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಗೋಬಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಗೋಬಿ ರೈಸ್ ಮಾಡಲು ಯಾವೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿಯೋಣ.
ಗೋಬಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು
- ಅನ್ನ - 1 ಕಪ್
- ಹೂಕೋಸು
- ಗರಂ ಮಸಾಲಾ
- ಖಾರದ ಪುಡಿ
- ರೆಡ್ ಚಿಲ್ಲಿ ಸಾಸ್
- ಸೋಯಾ ಸಾಸ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕಾಳು ಮೆಣಸಿನ ಪುಡಿ
- ಕಾರ್ನ್ ಹಿಟ್ಟು
- ಮೈದಾ ಹಿಟ್ಟು
- ಶುಂಠಿ
- ಬೆಳ್ಳುಳ್ಳಿ
- ಹಸಿರು ಮೆಣಸಿನಕಾಯಿ
- ಈರುಳ್ಳಿ
- ಕ್ಯಾಪ್ಸಿಕಂ
- ಎಲೆಕೋಸು
- ಕೊತ್ತಂಬರಿ ಸೊಪ್ಪು
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಗೋಬಿ ರೈಸ್ ಮಾಡುವುದು ಹೇಗೆ?
ಮೊದಲು ಒಂದು ಬೌಲ್ಗೆ ಕಾರ್ನ್ ಪ್ಲೋರ್ ಹಾಗೂ ಮೈದಾ ಹಿಟ್ಟು ಹಾಕಿಕೊಳ್ಳಿ. ನಂತರ ಇದಕ್ಕೆ ಗರಂ ಮಸಾಲೆ, ಖಾರದ ಪುಡಿ, ಕೆಂಪು ಬಣ್ಣದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಸ್ವಲ್ಪ ಸ್ವಲ್ಪೇ ನೀರು ಹಾಕಿಕೊಂಡು ಹಿಟ್ಟು ಹದ ಮಾಡಿಕೊಳ್ಳಿ. ಅನಂತರ ಹೂಕೋಸನ್ನು ಗೋಬಿ ಮಾಡಲು ಎಷ್ಟು ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಬಿಸಿ ನೀರಿನಲ್ಲಿ ಹಾಕಿ ಕತ್ತರಿಸಿಕೊಂಡು ಈ ಹಿಟ್ಟಿನೊಳಗೆ ಹಾಕಿ.
ಚೆನ್ನಾಗಿ ಕಲಸಿಕೊಂಡು ನೆನೆಯಲು ಬಿಡಿ. ಅನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಕಲಸಿಕೊಂಡಿರುವ ಎಲ್ಲಾ ಹೂಕೋಸುಗಳ ಹಾಕಿ ಚೆನ್ನಾಗಿ ಹಿಟ್ಟು ಹಿಡಿಯುವಂತೆ ಕಲಸಿಕೊಂಡು ಅನಂತರ ಕರಿದುಕೊಳ್ಳಿ. ಡ್ರೈ ಗೋಬಿ ಕರಿದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಕ್ಯಾಪ್ಸಿಕಂ, ಎಲೆಕೋಸು ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ. ಬಳಿಕ ರೆಡ್ ಚಿಲ್ಲಿ ಸಾಸ್, ಸೋಯಾ ಸಾಸ್ ಹಾಕಿಕೊಂಡು ಫ್ರೈ ಮಾಡಿ. ಅನಂತರ ಇದಕ್ಕೆ ಕರಿದುಕೊಂಡಿರುವ ಗೋಬಿಯನ್ನು ಕೂಡ ಹಾಕಿ ಫ್ರೈ ಮಾಡಿ. 1 ನಿಮಿಷದ ಬಳಿಕ ಈಗ ಮೊದಲು ಮಾಡಿಟ್ಟಿರುವ ಅನ್ನವನ್ನು ಹಾಕಿ ಫ್ರೈ ಮಾಡಿ. ಅದಕ್ಕೆ ಗರಂ ಮಸಾಲೆ ಸೇರಿ ನಿಮ್ಮಿಷ್ಟದ ಮಸಾಲೆ ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ಗೋಬಿ ರೈಸ್ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಮನೆಯಲ್ಲಿ ಮಾಡಿ ಸವಿಯಬಹುದು.



Click it and Unblock the Notifications
