Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗೋಬಿ ಕಬಾಬ್: ವೆಜ್ ಅಡುಗೆಗೆ ಬೆಸ್ಟ್ ಸೈಡ್ ಐಟಂ
ವೆಜ್ ಆಹಾರಕ್ಕೆ ಸೈಡ್ ಐಟಂ ಆಗಿ ಸರ್ವ್ ಮಾಡಲು ಬೆಸ್ಟ್ ಗೋಬಿ ಡ್ರೈ ಅಥವಾ ಗೋಬಿ ಕಬಾಬ್. ಈ ಗೋಬಿ ಡ್ರೈ ಸ್ನ್ಯಾಕ್ಸ್ ರೀತಿಯಲ್ಲಿಯೂ ಸರ್ವ್ ಮಾಡಬಹುದು, ಅಲ್ಲದೆ ಇದನ್ನು ಮಾಡುವುದಂತೂ ಬಲು ಸುಲಭ, ಚಟ್ಪಟ್ ಅಂತ ಮಾಡಬಹುದಾದ ಗೋಬಿ ಡ್ರೈ ರೆಸಿಪಿ ನೋಡೋಣ

ಬೇಕಾಗುವ ಸಾಮಗ್ರಿ
ಗೋಬಿ 1 (ಅದನ್ನು ಬಿಡಿಸಿ ಅರಿಶಿಣ ನೀರಿನಲ್ಲಿ ನೆನೆಹಾಕಿ)
ಮೈದಾ 4 ಚಮಚ
ಜೋಳದ ಹಿಟ್ಟು 1 ಚಮಚ
ಬೇಕಿಂಗ್ ಸೋಡಾ 1/4 ಚಮಚ
ಸ್ಪ್ರಿಂಗ್ ಆನಿಯನ್ ಒಂದು ಕಟ್ಟು
ಕೊತ್ತಂಬರಿ ಪುಡಿ 1 ಚಮಚ
ಚಾಟ್ ಮಸಾಲ 1 ಚಮಚ
ಜೀರಿಗೆ ಪುಡಿ 1 ಚಮಚ
ಖಾರದ ಪುಡಿ 1 ಚಮಚ
ಸೋಯಾ ಸಾಸ್ 1/2 ಚಮಚ
ವಿನೆಗರ್ 1/2 ಚಮಚ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಶುಂಠಿ ಪೇಸ್ಟ್ 1 ಚಮಚ
ಎಣ್ಣೆ 1 ಚಮಚ
ರುಚಿಗೆ ತಕ್ಕ ಉಪ್ಪು
1 ಕಪ್ ಎಣ್ಣೆ
ಮಾಡುವ ವಿಧಾನ
- ನೀವು ಗೋಬಿಯನ್ನು ಶುದ್ಧಗೊಳಿಸಬೇಕು, ನೀವು ಸ್ವಲ್ಪ ಹೊತ್ತು ಬಿಸಿ ನೀರಿನಲ್ಲಿ ಅರಿಶಿಣಹಾಕಿ ಅದರಲ್ಲಿ ಹಾಕಿಡಿ. ಈ ರೀತಿ ಹಾಕಿಡುವುದರಿಂದ ಹುಳು ಇದ್ದರೆ ಸತ್ತು ಹೋಗುತ್ತೆ. ಅಲ್ಲದೆ ಏನಾದರೂ ಕೆಮಿಕಲ್ ಸ್ಪ್ರೇ ಮಾಡಿದ್ದರೆ ಅದೂ ಕೂಡ ಹೋಗುತ್ತೆ, ಹಾಗಾಗಿ ಗೋಬಿ ಕ್ಲೀನಿಂಗ್ ಕಡೆಗೆ ಹೆಚ್ಚಿನ ಗಮನ ನೀಡಬೇಡು.
- ಈಗ ಒಂದು ಬೌಲ್ನಲ್ಲಿ ಮೈದಾ, ಜೋಳದ ಹಿಟ್ಟು, ಖಾರದ ಪುಡಿ, ಗರಂ ಮಸಾಲ ಪುಡಿ, ಚಾಟ್ ಮಸಾಲ ಪುಡಿ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ವಿನೆಗಗರ್ ಹಾಕಿ ಮಿಕ್ಸ್ ಮಾಡಿ
- ಈಗ ಗೋಬಿಯನ್ನು ನೀವು ಮಸಾಲೆಗೆ ಹಾಕಿ ಮಿಕ್ಸ್ ಮಾಡಿ
- ಎಣ್ಣೆಯನ್ನು ಕಾಯಿಸಿ
- ನಂತರ ಗೋಬಿಯನ್ನು ಹಾಕಿ ಫ್ರೈ ಮಾಡಿ ತೆಗೆದರೆ ತಿನ್ನಲು ಸೂಪರ್ ಆಗಿರುತ್ತದೆ.
- ಇದನ್ನು ನೀವು ಸ್ನ್ಯಾಕ್ಸ್ ಆಗಿಯೂ ಬಳಸಬಹುದು ಅಥವಾ ಆಹಾರಕ್ಕೆ ಸೈಡ್ ಐಟಂ ಆಗಿಯೂ ಬಳಸಬಹುದು.
ಇತರ ಸಲಹೆ
ನೀವು ಮೈದಾ ಹಾಕುವುದು ಬೇಡ ಎಂದು ಬಯಸಿದರೆ ಬರಿ ಕಡಲೆಹಿಟ್ಟು ಬಳಸಿ ಕೂಡ ಮಾಡಬಹುದು.
ಈ ಗೋಬಿ ಡ್ರೈಯನ್ನು ಬಿಸಿ ಬಿಸಿಯಾಗಿ ಸರ್ವ್ ಮಾಡಬೇಕು, ತಣ್ಣಗಾದರೆ ಟೇಸ್ಟ್ ಅಷ್ಟೊಂದು ರುಚಿಯಾಗಿರಲ್ಲ, ಬಿಸಿಯಿದ್ದರೆ ಸೂಪರ್ ಆಗಿರುತ್ತದೆ. ಅಲ್ಲದೆ ಇದನ್ನು ಸುಲಭವಾಗಿ ಮಾಡಬಹುದಾಗಿರುವುದರಿಂದ ನೆಂಟರಿಷ್ಟರು ಮನೆಗೆ ಬಂದಾಗ ಬಲು ಸುಲಭದಲ್ಲಿ ಮಾಡಬಹುದು ಕೂಡ.
ಹೂಕೋಸು ಪ್ರಯೋಜನಗಳು
ಇದರಲ್ಲಿ ಪೋಷಕಾಂಶಗಳು ಅಧಿಕವಿದೆ. ವಿಟಮಿನ್ ಸಿ, ವಿಟಮಿನ್ ಕೆ ಪೋಷಕಾಂಶ
ಅಧಿಕವಿದೆ.ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಬಿ, ಮೆಗ್ನಿಷ್ಯಿಯಂ,
ಮ್ಯಾಂಗನೀಸ್, ರಂಜಕ, ಪೊಟಾಷ್ಯಿಯಂ ಅಂಶವಿದೆ.
ನಾರಿನಂಶ ಹೆಚ್ಚಿರುತ್ತದೆ
ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು,
ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತದೆ.



Click it and Unblock the Notifications
