Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮಸಾಲ ಮಜ್ಜಿಗೆ ರುಚಿಯ ಶುಂಠಿ ತಂಬುಳಿ: ಮಧ್ಯಾಹ್ನದ ಊಟಕ್ಕೆ ಬೆಸ್ಟ್ ರೆಸಿಪಿ!
ಸಾಮಾನ್ಯವಗಿ ಮಧ್ಯಾಹ್ನದ ಊಟಕ್ಕೆ ಯಾವುದಾದರು ಸಾಂಬಾರ್, ತಿಳಿ ಸಾರು, ತಂಬುಳಿ ಇದ್ದರೆ ಸಾಕಾಗುತ್ತದೆ. ಅದೇ ರೀತಿ ಬಿಸಿಲಿನ ಸಮಯದಲ್ಲಿ ದೇಹಕ್ಕೆ ತಂಪು ಉಂಟು ಮಾಡುವಂತಹ ಯಾವುದಾದರು ಖಾದ್ಯವನ್ನು ಮಾಡಲು ಬಯಸುವವರು ಹೆಚ್ಚು. ಹಾಗೆ ಸುಲಭವಾಗಿ ಎಲ್ಲರು ಇಷ್ಟಪಡುವಂತೆ ಮಾಡಬೇಕು ಅನ್ನೋದು ಎಲ್ಲರ ಬಯಕೆಯಾಗಿರಲಿದೆ. ಹೀಗಾಗಿಯೇ ಎಲ್ಲರು ಸುಲಭದ ರೆಸಿಪಿಗಳ ಆಯ್ಕೆ ಮಾಡಿಕೊಳ್ಳತ್ತಾರೆ.
ಇನ್ನು ಮಧ್ಯಾಹ್ನ ಅಥವಾ ರಾತ್ರಿ ಊಟ ಮತ್ತಷ್ಟು ರುಚಿಯಾಗಿರಬೇಕಾದರೆ ಬಹುತೇಕರಲ್ಲಿ ನೆನಪಿಗೆ ಬರೋದು ತಂಬುಳಿ. ಹೌದು ತಂಬುಳಿ ನಮ್ಮ ಆರೋಗ್ಯ ವೃದ್ಧಿಯಿಂದ ಹಿಡಿದು ಎಲ್ಲಾ ರೀರಿಯಲ್ಲೂ ಬಹಳ ಉಪಯೋಗಕಾರಿ. ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ತಂಬುಳಿಗಳ ಮಾಡಿ ಸವಿಯಬಹುದು.

ನೀವು ಕೂಡ ಮನೆಯಲ್ಲಿ ತಂಬುಳಿಯನ್ನು ಸುಲಭವಾಗಿ ಮಾಡಬಹುದು. ಅದ್ರಲ್ಲೂ ವಿವಿಧ ಬಗೆಯ ತಂಬುಳಿಗಳು ನಮ್ಮ ನಡುವೆ ಇದೆ. ನೀವು ಸಹ ಸುಲಭವಾಗಿ ತಂಬುಳಿ ಮಾಡಿ ಸವಿಯುವ ಬಯಕೆ ಹೊಂದಿದ್ದರೆ ಇಲ್ಲಿ ಸುಲಭದ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ. ಮಧ್ಯಾಹ್ನದ ಊಟಕ್ಕೆ ನಾವಿಂದು ಶುಂಠಿ ತಂಬುಳಿ ಮಾಡುವ ಕುರಿತು ತಿಳಿಯೋಣ.
ಶುಂಠಿ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳನ್ನು ಇದು ನಿವಾರಿಸಲಿದೆ. ಹಾಗಾದ್ರೆ ಈ ಶುಂಠಿ ತಂಬುಳಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಶುಂಠಿ ತಂಬುಳಿ ಮಾಡುವುದು ಹೇಗೆ?
- ತೆಂಗಿನಕಾಯಿ
- ಶುಂಠಿ
- ಸಾಸಿವೆ
- ಕರಿಬೇವು
- ಮೊಸರು
- ಉಪ್ಪು
- ಎಣ್ಣೆ
ಶುಂಠಿ ತಂಬುಳಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಶುಂಠಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. 4 ಸುತ್ತು ಬಂದ ಬಳಿಕ ಮುಚ್ಚಳ ತೆರೆದು ಬಳಿಕ ಮೊಸರು ಅಥವಾ ಮಜ್ಜಿಗೆ ಹಾಕಿ ಮತ್ತೆ 1 ಸುತ್ತು ರುಬ್ಬಿಕೊಳ್ಳಿ.
ಈಗ ರುಬ್ಬಕೊಂಡು ಈ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಗೂ ರುಚಿಗೆ ತಕ್ಕ್ಷಟು ಉಪ್ಪು ಸಹ ಹಾಕಿಕೊಳ್ಳಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಒಟ್ಟು ಒಂದು ಒಗ್ಗರಣೆ ಸಿದ್ದ ಮಾಡಬೇಕು. ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಕರಿಬೇವು, ಒಣ ಮೆಣಸು ಹಾಕಿಕೊಂಡು ಒಗ್ಗರಣೆ ಮಾಡಿಕೊಳ್ಳಿ. ನಂತರ ಇದನ್ನು ಪಾತ್ರೆಯಲ್ಲಿರುವ ತಂಬುಳಿಗೆ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಮತ್ತೆ ಬಿಸಿ ಮಾಡಿಕೊಳ್ಳುವುದು ಬೇಡ.
ಇಷ್ಟಾದರೆ ನಿಮ್ಮ ಮುಂದೆ ಶುಂಠಿ ತಂಬುಳಿ ಸಿದ್ದವಾಗುತ್ತೆ. ನೀವಿದನ್ನು ಊಟದೊಂದಿಗೆ ಸವಿಯಲು ಥಟ್ ಎಂದು ಮಾಡಿಕೊಳ್ಳಬಹುದು. 2 ನಿಮಿಷದೊಳಗೆ ಮಾಡಿ ಮುಗಿಸಬಹುದು. ಹಾಗೆ ಇದರ ರುಚಿಗೆ ನೀವು ಪದೇ ಪದೇ ಮಾಡಿ ಸವಿಯೋದು ಸಹ ಖಚಿತ. ಹಾಗೆ ಇದನ್ನು ಕೊತ್ತಂಬರಿ ಸೊಪ್ಪು ಹಾಕಿ ಹಸಿ ಮೆಣಸು ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ನೀರು ಬೆರೆಸಿ ಮಧ್ಯಾಹ್ನದ ಬಿಸಿಲಿನಲ್ಲಿ ಕುಡಿಯಬಹುದು. ಇದು ಮಸಾಲ ಮಜ್ಜಿಗೆಯ ರುಚಿ ನೀಡಲಿದೆ.



Click it and Unblock the Notifications
