Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬ್ರೇಕ್ಫಾಸ್ಟ್ಗೆ ತುಪ್ಪದ ಅವಲಕ್ಕಿ ಮಾಡಿ: ಮಕ್ಕಳ ಬಾಯಲ್ಲಿ ನೀರು ಬರೋದು ಪಕ್ಕ!
ನೀವು ಮನೆಯಲ್ಲಿದ್ದಾಗ ಒಂದಲ್ಲಾ ಒಂದು ರೀತಿಯ ಸ್ನ್ಯಾಕ್ಸ್ ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ಟೀ ಕಾಫಿಯ ಜೊತೆಗೆ ಯಾವುದಾದರು ಖಾದ್ಯ ಮಾಡಿ ಸವಿಯುವುದು ಸಾಮಾನ್ಯ. ಬೇಕರಿ ರುಚಿಯ ಖಾದ್ಯಗಳ ಬಿಟ್ಟರೆ ಮನೆಯಲ್ಲೇ ನಾವು ಹಲವು ರೀತಿಯ ಸ್ನ್ಯಾಕ್ಸ್ ಮಾಡಿ ಸವಿಯುತ್ತೇವೆ. ಅದ್ರಲ್ಲೂ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿ ಮಾಡಿ ಸವಿಯುವ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಇನ್ನು ಶ್ರಾವಣ ಮಾಸದಲ್ಲಿ ಒಂದಲ್ಲಾ ಒಂದು ಹಬ್ಬ, ವ್ರತ, ಪೂಜೆಗಳು ಬರಲಿವೆ. ಇಂತಹ ಸಮಯದಲ್ಲಿ ನಾವು ಪ್ರಸಾದವಾಗಿಯೂ ಹಾಗೆ ಮನೆ ಮಂದಿಗೆಲ್ಲಾ ಇಷ್ಟವಾಗುವಂತಹ ಖಾದ್ಯ ಮಾಡಿ ಸವಿಯುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ ಅದ್ರಲ್ಲೂ ಈ ರೀತಿಯಾಗಿ ಅವಲಕ್ಕಿಯಿಂದ ಮಾಡುವಂತಹ ತುಪ್ಪದ ಖಾದ್ಯ ಬಹಳ ರುಚಿ ನೀಡಲಿದೆ.

ತುಪ್ಪದ ಅವಲಕ್ಕಿ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತೆ. ಇದನ್ನು ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ಆಗಿ ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ಪೂಜೆ ಸಮಯದಲ್ಲಿ ನೈವೇದ್ಯಕ್ಕೆ ಹಾಗೆ ಪ್ರಸಾದವಾಗಿಯೂ ಕೂಡ ಬಳಸಬಹುದು. ಮಕ್ಕಳಿಗೂ ಈ ತುಪ್ಪದ ಅವಲಕ್ಕಿ ರುಚಿ ಬಹಳ ಇಷ್ಟವಾಗುತ್ತೆ, ನೀವು ಸಹ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ.
ಹಾಗಾದ್ರೆ ಬೆಳಗ್ಗೆ ತಿಂಡಿ, ಸಂಜೆಯ ಸ್ನ್ಯಾಕ್ಸ್ಗೆ ಈ ರುಚಿ ರುಚಿಯ ತುಪ್ಪದ ಅವಲಕ್ಕಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಪ್ಪದ ಅವಲಕ್ಕಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅವಲಕ್ಕಿ
- ತುಪ್ಪ
- ತೆಂಗಿನ ಕಾಯಿ ತುರಿ
- ಕರಿಬೇವು
- ಈರುಳ್ಳಿ
- ಸಕ್ಕರೆ
- ಜೀರಿಗೆ
- ಸಾಸಿವೆ
- ನಿಂಬೆ ರಸ
- ಗೋಡಂಬಿ
- ಶೇಂಗಾ ಬೀಜ
ತುಪ್ಪದ ಅವಲಕ್ಕಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ 1 ಚಮಚ ತುಪ್ಪ ಹಾಕಿಕೊಂಡು ಬಳಿಕ ಶೇಂಗಾ ಹಾಕಿಕೊಂಡು ಹುರಿದುಕೊಳ್ಳಿ. ನಂತರ ಸ್ವಲ್ಪ ಗೋಡಂಬಿ ಕೂಡ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಹುರಿದು ಬದಿಗಿಟ್ಟುಕೊಳ್ಳಿ. ಬಳಿಕ ಮತ್ತೆ ಅದೇ ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ.
ಈಗ ಅದೇ ಬಾಣಲೆಗೆ ಸಾಸಿವೆ, ಜೀರಿಗೆ ಹಾಕಿ ಬಳಿಕ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕರಿಬೇವು, ಸಣ್ಣದಾಗಿ ಹೆಚ್ಚಿಕೊಂಡ ಹಸಿ ಮೆಣಸು ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮುಕ್ಕಾಲು ಚಮಚ ಸಕ್ಕರೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈಗ ಒಲೆ ಆಫ್ ಮಾಡಿಕೊಂಡು ಅದಕ್ಕೆ ತೆಳು ಅವಲಕ್ಕಿಯನ್ನು ಹಾಕಿಕೊಂಡು, ಬಳಿಕ ತೆಂಗಿನಕಾಯಿ ತುರಿ, ನಿಂಬೆ ರಸ, ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಚೆನ್ನಾಗಿ ಕೈಯಿಂದ ಮಿಶ್ರಣ ಮಾಡಿಕೊಳ್ಳಬೇಕು. ಈಗ ಮೊದಲು ಹುರಿದುಕೊಂಡಿದ್ದ ಗೋಡಂಬಿ ಹಾಗೂ ಶೇಂಗಾವನ್ನು ಸಹ ಇದಕ್ಕೆ ಹಾಕಿಕೊಂಡು ಮತ್ತೆ ಮಿಶ್ರಣ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತುಪ್ಪದ ಅವಲಕ್ಕಿ ರೆಡಿಯಾಗುತ್ತದೆ. ನೀವು ಸಹ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ. ಇದು ಸವಿಯಲು ಬಹಳ ರುಚಿಕರವಾಗಿರಲಿದೆ. ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಸ್ನ್ಯಾಕ್ಸ್ ಎನ್ನಬಹುದು. ಬೆಳಗ್ಗೆ ತಿಂಡಿ ಹಾಗೆ ಸ್ನ್ಯಾಕ್ಸ್ ಜೊತೆಗೆ ಹಬ್ಬದ ದಿನದಲ್ಲಿ ಪೂಜೆ ಮಾಡಿ ಪ್ರಸಾದವಾಗಿಯೂ ಇದನ್ನು ಹಂಚಲು ಬಳಸಬಹುದು. ಇದನ್ನು ತಯಾರಿಸುವುದು ಕೂಡ ಬಹಳ ಸುಲಭ. ನೀವು ಸಹ ಸವಿದು ನೋಡಿ.



Click it and Unblock the Notifications
