Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ನಾಲಿಗೆಗೆ ರುಚಿ ನೀಡುವ ಬೆಳ್ಳುಳ್ಳಿ ಗೊಜ್ಜು: ಹೀಗೆ ಮಾಡಿ ಸಿಂಪಲ್ ರೆಸಿಪಿ
ಜನರು ಈಗ ಸರಿಯಾದ ಸಮಯಕ್ಕೆ ಆಹಾರ ಸೇವಿಸುತ್ತಾರೋ ಇಲ್ಲವೋ ಆದ್ರೆ ನಾಲಿಗೆಗೆ ಯಾವುದು ಚೆನ್ನಾಗಿ ರುಚಿಸುತ್ತೆ ಅನ್ನೋದನಂತು ಹುಡುಕುತ್ತಾರೆ. ಏಕೆಂದ್ರೆ ರುಚಿ ಇಲ್ಲದಿರುವ ಯಾವುದೇ ಅಡುಗೆಯನ್ನೂ ಅವರು ಹತ್ತಿರವೂ ಸುಳಿಯುವುದಿಲ್ಲ. ಅದೇ ರೀತಿ ಬಾಯಿ ರುಚಿಗೆ ಯಾವ ಊಟ, ತಿಂಡಿ, ಪಲ್ಯ, ಗೊಜ್ಜು ಮಾಡಬಹುದು ಎಂಬುದನ್ನು ನೋಡುತ್ತಾರೆ.
ಇನ್ನು ಊಟ ತಿಂಡಿಗೆ ಗೊಜ್ಜು ಮಾಡಿದರೆ ಅದರ ರುಚಿಯೇ ಬೇರೆ. ಪಲ್ಯಕ್ಕಿಂತಲೂ ಗೊಜ್ಜು ಸ್ವಲ್ಪ ವಿಭಿನ್ನ ರುಚಿ ನೀಡಲಿದೆ. ಗೊಜ್ಜು ಊಟದ ಜೊತೆಗಿದ್ದರೆ ಬೇರೆ ಯಾವ ಸಾಂಬಾರ್, ಚಟ್ನಿ, ಪಲ್ಯದ ಅಗತ್ಯವಿರುವುದಿಲ್ಲ. ಅದ್ರಲ್ಲೂ ಗೊಜ್ಜನ್ನು ನಾವು ಹಲವು ದಿನಗಳವರೆಗೆ ಇಟ್ಟು ಸವಿಯಬಹುದು. ಹೀಗಾಗಿ ಗೃಹಿಣಿಯರು ಗೊಜ್ಜನ್ನು ಮಾಡಲು ಹೆಚ್ಚು ಇಷ್ಟಪಡುತ್ತಾರೆ.

ಹೀಗಾಗಿ ನಾವಿಂದು ಬೆಳ್ಳುಳ್ಳಿಯಲ್ಲಿ ಮಾಡುವಂತಹ ರುಚಿ ರುಚಿಯ ಗೊಜ್ಜಿನ ಕುರಿತು ತಿಳಿದುಕೊಳ್ಳೋಣ. ಬೆಳ್ಳುಳ್ಳಿ ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ ವಸ್ತುವಾಗಿದೆ. ಹೀಗಾಗಿ ಎಲ್ಲಾ ಖಾದ್ಯದಲ್ಲೂ ಬೆಳ್ಳುಳ್ಳಿ ಬಳಸಲಾಗುತ್ತದೆ.
ಹಾಗಾದ್ರೆ ನಾವಿಂದು ಬೆಳ್ಳುಳ್ಳಿ ಬಳಸಿ ರುಚಿ ರುಚಿಯ ಗೊಜ್ಜು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೆಳ್ಳುಳ್ಳಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು ಏನು? ಬೆಳ್ಳುಳ್ಳಿಯಿಂದ ಗೊಜ್ಜು ಮಾಡುವ ವಿಧಾನವೇನು? ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬ ಕುರಿತು ನಾವಿಂದು ತಿಳಿಯೋಣ.
ಬೆಳ್ಳುಳ್ಳಿ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು
- ಬೆಳ್ಳುಳ್ಳಿ- 3 ಗಡ್ಡೆ
- ಮೆಂತ್ಯ - 1 ಚಮಚ
- ಜೀರಿಗೆ
- ಇಂಗು
- ಸಾಸಿವೆ
- ಹಸಿಮೆಣಸು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಈರುಳ್ಳಿ- 2
- ಟೊಮೆಟೋ -1
- ಅರಶಿಣ
- ಖಾರದ ಪುಡಿ-1 ಚಮಚ
- ಸಾಂಬಾರ್ ಪುಡಿ-1 ಚಮಚ
- ಧನಿಯಾ- ಅರ್ಧ ಚಮಚ
- ಹುಣಸೆ ಹುಳಿ
ಮೊದಲು ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿಕೊಳ್ಳಿ. 6 ಚಮಚ ಎಣ್ಣೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಸಾಸಿವೆ ಹಾಕಿಕೊಳ್ಳಿ. ಬಳಿಕ ಇಂಗು, ಮೆಂತ್ಯ, ಜೀರಿಗೆ ಹಾಕಿಕೊಳ್ಳಿ. ಇದಕ್ಕೆ ಹಸಿಮೆಣಸು, ಕರಿಬೇವು, ಬೆಳ್ಳುಳ್ಳಿ ಹಾಕಿಕೊಂಡು ಫ್ರೈ ಮಾಡಿ.
3 ನಿಮಿಷದ ವರೆಗೆ ಇದನ್ನು ಫ್ರೈ ಮಾಡಿದ ಬಳಿಕ ಈರುಳ್ಳಿಯನ್ನು ಹಾಕಿ, ಅಲ್ಲದೆ ಟೊಮೆಟೋ ಸಹ ಹಾಕಿಕೊಂಡು ಹಸಿ ವಾಸನೆ ಹೋಗುವವರೆಗು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಖಾರದ ಪುಡಿ, ಸಾಂಬಾರ್ ಪುಡಿ, ಧನಿಯಾ ಪುಡಿ, ಅರಶಿಣ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹೀಗೆ ಮಿಕ್ಸ್ ಮಾಡಿದ ಬಳಿಕ ಒಂದು ದೊಡ್ಡ ಗೋಲಿ ಗಾತ್ರದ ಹುಣಸೆ ಹಣ್ಣು ತೆಗೆದುಕೊಂಡು ಅದರ ಹುಳಿಯನ್ನು ತೆಗೆದುಕೊಂಡು ಇದಕ್ಕೆ ಹಾಕಿಕೊಳ್ಳಿ. ಈಗ ಒಲೆ ಸಣ್ಣಗೆ ಮಾಡಿಕೊಂಡು 20 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಬೇಕು.
20 ನಿಮಿಷದ ಬಳಿಕ ಮುಚ್ಚಳ ತೆಗೆದು ಕೈಯಾಡಿಸಿ. ಬಳಿಕ ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಳ್ಳುಳ್ಳಿ ಗೊಜ್ಜು ರೆಡಿಯಾಗಿರುತ್ತದೆ. ಇದನ್ನು ಅನ್ನದ ಜೊತೆ ಸವಿಯಲು ತುಂಬಾನೆ ತುಚಿ ಇರಲಿದೆ.



Click it and Unblock the Notifications
