Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಅದ್ಭುತ ರುಚಿಯ ಬೆಳ್ಳುಳ್ಳಿ ಬೋಂಡಾ ಸೂಪ್ ಮಾಡಿ..! ಹೇಗೆ ಮಾಡಬೇಕು ನೋಡಿ
ನಾವು ಸಂಜೆ ಸಮಯದಲ್ಲಿ ಹೋಟೆಲ್ಗೆ ತೆರಳಿದಾಗ ಸವಿಯಲು ನೆನಪಾಗುವ ತಿಂಡಿ ಯಾವುದಾದರು ಇದ್ದರೆ ಹಲವರಿಗೆ ಬೋಂಡಾ ಸೂಪ್ ನೆನಪಿಗೆ ಬರುತ್ತದೆ. ಬೆಳಗ್ಗೆ ತಿಂಡಿಗೂ ಬೋಂಡಾ ಸೂಪ್ ಸಖತ್ ರುಚಿ ನೀಡುವ ತಿಂಡಿ. ಮಕ್ಕಳಿಗಂತು ಬೋಂಡಾ ಸೂಪ್ ಅತ್ತುತ್ತಮ ಖಾದ್ಯ.
ಬೋಂಡಾ ಸೂಪ್ಗೆ ಹಾಕುವಂತಹ ಮಸಾಲೆಯ ವಸ್ತುಗಳ ಸವಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬೆಳ್ಳುಳ್ಳಿ ಒಗ್ಗರಣೆಯ ಸವಿ ನೀಡುವ ಬೋಂಡಾ ಸೂಪ್ ಎಲ್ಲರ ನೆಚ್ಚಿನ ಖಾದ್ಯದಲ್ಲಿ ಒಂದಾಗಿದೆ. ಮೃದುವಾದ ಬೋಂಡಾ ಸೂಪ್ ಅನ್ನು ಹಿರಿಯರು ಕೂಡ ಸವಿಯಲು ಇಷ್ಟಪಡುತ್ತಾರೆ. ಅದರಲ್ಲೂ ಮಳೆಗಾಲದಲ್ಲಿ, ಚಳಿಗಾಲದಲ್ಲಿ ಬಿಸಿ ಬಿಸಿಯ ಸೂಪ್ನ ಜೊತಗೆಗೆ ಬೋಂಡಾ ಸವಿಯುತ್ತಿದ್ದರೆ ಬಾಯಲ್ಲಿ ನೀರು ಬರುತ್ತೆ.

ಹಾಗಾದ್ರೆ ಮನೆಯಲ್ಲಿ ಈ ಬೆಳ್ಳುಳ್ಳಿ ರುಚಿಯ ಬೋಂಡಾ ಸೂಪ್ ಮಾಡುವುದು ಹೇಗೆ? ಮನೆಯಲ್ಲಿ ಈ ಬೋಂಡಾ ಸೂಪ್ ಮಾಡಿ ಸವಿಯುವುದು ಹೇಗೆ? ಬೋಂಡಾ ಸೂಪ್ ಮಾಡಲು ಬೇಕಾಗುವ ಪದಾರ್ಥವೇನು? ಮಾಡುವ ವಿಧಾನವೇನು? ಮಾಡಲು ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಾವಿಂದು ನೋಡೋಣ.
ಬೆಳ್ಳುಳ್ಳಿ ಬೋಂಡಾ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು
- ಹೆಸರು ಬೇಳೆ
- ಉದ್ದಿನ ಬೇಳೆ
- ಅರಶಿನ
- ಎಣ್ಣೆ
- ಈರುಳ್ಳಿ
- ಟೊಮೆಟೋ
- ಹಸಿ ಮೆಣಸು
- ಒಣ ಮೆಣಸು
- ಕರಿವೇವು
- ಕೊತ್ತಂಬರಿ ಸೊಪ್ಪು
- ಶುಂಠಿ
- ಜೀರಿಗೆ
- ಬೆಳ್ಳುಳ್ಳಿ
- ತೆಂಗಿನಕಾಯಿ
ಬೆಳ್ಳುಳ್ಳಿ ಬೋಂಡಾ ಸೂಪ್ ಮಾಡುವುದು ಹೇಗೆ?
ಮೊದಲು ಸೂಪ್ ಮಾಡಿಕೊಳ್ಳುವುದು ಹೇಗೆ ನೋಡೋಣ.
ಮೊದಲು ಅರ್ಧ ಕಪ್ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು ನಂತರ ಇದನ್ನು ಒಂದು ಕುಕ್ಕರ್ಗೆ ಹಾಕಿ ನೀರು, ಅರಶಿನ, ಹಸಿ ಮೆಣಸು, ಕರಿಬೇವು, ಎಣ್ಣೆ, ಈರುಳ್ಳಿ, ಹುಳಿ ಟೊಮೆಟೊ ಹಾಕಿ ಬೇಕಾದರೆ ಸ್ವಲ್ಪ ಉಪ್ಪು ಸಹ ಹಾಕಿ ಚೆನ್ನಾಗಿ ಕಲಸಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ.
ಕುಕ್ಕರ್ನಲ್ಲಿ ಎರಡು ಸೀಟಿ ಹೊಡೆಯಲು ಬಿಡಿ. ನಂತರ ಕುಕ್ಕರ್ನಿಂದ ಗ್ಯಾಸ್ ಸಂಪೂರ್ಣ ಹೋಗುವರೆಗೂ ಬಿಡಿ, ನಂತರ ಮುಚ್ಚಳ ತೆಗೆದು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ಸೌಟಿನಿಂದ ತಿರುಗಿಸಿದರೆ ಇದು ಪುಡಿಯಾಗುತ್ತದೆ. ಈಗ ಒಲೆ ಮೇಲೆ ಒಂದು ಪಾತ್ರೆ ಒಟ್ಟು ಅದಕ್ಕೆ ಎಣ್ಣೆ ಹಾಕಿ. ನಂತರ ಜೀರಿಗೆ, ಬೆಳ್ಳುಳ್ಳಿ ಹಾಕಿ, ಮೆಣಸು, ಇಂಗು, ಕರಿಬೇವು, ಅರಶಿಣ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 10 ರಿಂದ 20 ಸೆಕೆಂಡ್ ಈ ಒಗ್ಗರಣೆ ಮಾಡಿದ ಬಳಿಕ ಇದಕ್ಕೆ ಕುಕ್ಕರ್ನಲ್ಲಿ ಬೇಯಿಸಿರುವ ಅಂಶವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದು ಬೋಂಡಾ ಜೊತೆ ಸವಿಯುವ ಸೂಪ್ ಆಗಲಿದೆ. ಬಳಿಕ ಇದನ್ನು ಒಲೆ ಮೇಲೆ 5 ನಿಮಿಷ ಕುದಿಸಿಕೊಳ್ಳಬೇಕು. ನಿಮಗೆ ಎಷ್ಟು ತೆಳು ಬೇಕಾದರು ಮಾಡಿ.
ಕುದಿಯುವಾಗ ಇದಕ್ಕೆ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ಸೂಪ್ ರೆಡಿಯಾಗುತ್ತದೆ.
ಈಗ ಬೋಂಡಾ ಮಾಡಿಕೊಳ್ಳುವುದು ಹೇಗೆ ನೋಡಿ.
ಒಂದು ಬೌಲ್ನಲ್ಲಿ ಉದ್ದಿನ ಬೇಳೆ ಚೆನ್ನಾಗಿ ತೊಳೆದು ನೀರು ಹಾಕಿ ನೆನೆಸಿಡಬೇಕು. ಸುಮಾರು 4 ರಿಂದ 5 ಗಂಟೆ ನೆನೆಸಿಡಬೇಕು. ನೆನೆಸಿಟ್ಟ ಈ ಉದ್ದಿನ ಬೇಳೆಯನ್ನು ಒಂದು ಮಿಕ್ಸಿಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಹಿಟ್ಟನ್ನು ಒಂದು ಬೌಲ್ಗೆ ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಈ ಹಿಟ್ಟಿಗೆ ಸಣ್ಣದಾಗಿ ಹೆಚ್ಚಿಕೊಂಡಿರುವ ಕರಿಬೇವು, ತೆಂಗಿನಕಾಯಿ, ಮೆಣಸು, ಹಸಿ ಮೆಣಸು, ಶುಂಠಿ, ಉಪ್ಪು ಹಾಕಿಕೊಂಡು ಕಲಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಹಿಟ್ಟನ್ನು ತೆಗೆದುಕೊಂಡು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಹಿಟ್ಟು ತೆಗೆದುಕೊಂಡು ಎಣ್ಣೆಗೆ ಬಿಡಿ.
ಮಧ್ಯಮ ಉರಿಯಲ್ಲಿ 10 ನಿಮಿಷ ಕರಿದುಕೊಂಡರೆ ಬೋಂಡಾ ರೆಡಿಯಾಗುತ್ತದೆ. ನಂತರ ಒಂದು ಸಣ್ಣ ಬೌಲ್ಗೆ ಬೋಂಡಾ ಹಾಕಿ, ಸೂಪ್ ಬಿಸಿ ಮಾಡಿಕೊಂಡು ಬೋಂಡಾ ಮೇಲೆ ಹಾಕಿಕೊಂಡು ಸವಿಯಲು ನೀಡಿದರೆ ಅದರ ರುಚಿಯೇ ಬೇರೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
