Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಬೆಳಗ್ಗೆ ತಿಂಡಿಗೆ ಬೆಳ್ಳುಳ್ಳಿ ರೈಸ್ ಮಾಡಿ..! 15 ನಿಮಿಷದಲ್ಲಿ ರೆಡಿ..!
ಬೆಳಗ್ಗೆಯ ತಿಂಡಿ ಮಾಡ್ಬೇಕು ಅಂದ್ರೆ ನೀವು ಹೆಚ್ಚು ಆಲೋಚನೆಯಲ್ಲಿ ಮುಳುಗಬೇಕು. ಯಾಕಂದ್ರೆ ನಿತ್ಯ ಒಂದೇ ರೀತಿ ತಿಂಡಿ ಮಾಡುವುದು ಅಂದ್ರೆ ನಿಮಗೂ ಬೇಜಾರು ತಿನ್ನಲ್ಲು ಸಹ ಅಷ್ಟೇ ಬೇಜಾರು. ಆದ್ರೆ ಹೊಸದಾಗಿ ಮಾಡೋದಾದ್ರು ಏನು? ಇದು ಎಲ್ಲರಿಗೂ ಕಾಡುವ ಸಾಮಾನ್ಯ ಪ್ರಶ್ನೆಯಾಗಿದೆ.
ನಿತ್ಯ ಬೆಳಗಾದರೆ ಯಾವುದಾದರು ಒಂದು ತಿಂಡಿ ಮಾಡಬೇಕು. ಆದ್ರೆ ನೀವು ದಿನಕ್ಕೊಂದು ರೆಸಿಪಿ ಮಾಡಲು ಇಚ್ಛಿಸಿದರೆ ಈ ಕರಿಮೆಣಸು-ಬೆಳ್ಳುಳ್ಳಿ ಅನ್ನ ಅತ್ಯಂತ ಸುಲಭವಾಗಿ ಮತ್ತು ರುಚಿ ರುಚಿಯಾಗಿ ಮಾಡಬಹುದು. ಹೌದು ಬೆಳಗ್ಗೆಯ ತಿಂಡಿ ಹಾಗೂ ಸಂಜೆಯ ಸ್ನ್ಯಾಕ್ಸ್ಗೂ ಸಹ ಈ ಬೆಳ್ಳುಳ್ಳಿ ಅನ್ನ ಮಾಡಿ ಸವಿಯಬಹುದು. ಬೇರೆಲ್ಲಾ ಅನ್ನಕ್ಕಿಂತ ಹೆಚ್ಚು ರುಚಿಕರ ಮತ್ತು ಇನ್ನಷ್ಟು ಸೇವಿಸಬೇಕು ಎಂಬ ಆಸೆ ಮೂಡುವಷ್ಟು ರುಚಿ ಹೊಂದಿರುತ್ತದೆ.

ನೀವು ಬೆಳಗ್ಗೆ ಪವಾಲ್, ಪುಳಿಯೋಗರೆ, ಚಿತ್ರಾನ್ನ ಮಾಡುವಂತೆಯೇ ಇದನ್ನು ಸಹ ಮಾಡಬಹುದು, ಆದರೆ ಇದೆಲ್ಲ ಮಾಡುವುದಕ್ಕಿಂತ ಕಡಿಮೆ ಸಮಯ ಹಾಗೂ ಕಡಿಮೆ ಪದಾರ್ಥಗಳು ಇದಕ್ಕೆ ಸಾಕಾಗುತ್ತದೆ. ಹಾಗಾದ್ರೆ ನಾವಿಂದು ಈ ಬೆಳ್ಳುಳ್ಳಿ ಅನ್ನ ಮಾಡುವುದು ಹೇಗೆ? ಬೆಳ್ಳುಳ್ಳಿ ಅನ್ನ ಮಾಡಲು ಬೇಕಾಗುವ ಪದಾರ್ಥಗಳೇನು? ಬೆಳ್ಳುಳ್ಳಿ ಅನ್ನದ ಪಾಕವಿಧಾನವೇನು ಎಂಬುದನ್ನು ತಿಳಿಯೋಣ ಬನ್ನಿ.
ಕರಿಮೆಣಸು-ಬೆಳ್ಳುಳ್ಳಿ ಅನ್ನ ಮಾಡಲು ಬೇಕಾಗುವ ಪದಾರ್ಥಗಳು
- ಬೆಳ್ಳುಳ್ಳಿ- 3
- ಜೀರಿಗೆ - 1/4 ಟೀಸ್ಪೂನ್
- ಈರುಳ್ಳಿ- 1
- ಚನಾ ದಾಲ್ - 1 tbs
- ಉದ್ದಿನಬೇಳೆ - 1 tbs
- ಇಂಗು
- ಹಸಿರು ಮೆಣಸಿನಕಾಯಿ - 1
- ಕೆಂಪು ಮೆಣಸಿನಕಾಯಿ - 2
- ಕರಿಬೇವಿನ ಎಲೆಗಳು - 2 tbs
- ಕರಿಮೆಣಸು ಪುಡಿ - 1 ಟೀಸ್ಪೂನ್
- ಸಾಸಿವೆ - 1/4 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 tbs
- ತುಪ್ಪ - 1 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
- ಅನ್ನ
ಬೆಳ್ಳುಳ್ಳಿ ಅನ್ನ ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿಕೊಳ್ಳಿ, ಬಳಿಕ ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಫ್ರೈ ಮಾಡಿಕೊಳ್ಳಿ . ಬಳಿಕ ಈ ಬೆಳ್ಳುಳ್ಳಿ ತೆಗೆದು ಬದಿಗೆ ತೆಗೆದಿಟ್ಟುಕೊಳ್ಳಿ. ಬಳಿಕ ಇದೇ ಪಾತ್ರೆಗೆ ಉದ್ದಿನ ಬೇಳೆ, ಸಾಸಿವೆ, ಜೀರಿಗೆ, ಕಡಲೆ ಬೇಳೆ ಮತ್ತು ಇಂಗು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಒಂದು ನಿಮಿಷ ಫ್ರೈ ಮಾಡಿದ ಬಳಿಕ ಒಣಮೆಣಸು, ಕರಿಬೇವಿನ ಸೊಪ್ಪು ಹಾಕಿಕೊಳ್ಳಿ. 30 ಸೆಕೆಂಡ್ ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಸುಮಾರು 1 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಕರಿಮೆಣಸಿನ ಪುಡಿ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ, ಬಳಿಕ ಅನ್ನ ತೆಗೆದುಕೊಂಡು ಅದಕ್ಕೆ ಹಾಕಿ ಮೇಲೆ ಉಪ್ಪು ಹಾಗೂ ಮೊದಲು ಫ್ರೈ ಮಾಡಿಕೊಂಡ ಬೆಳ್ಳುಳ್ಳಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಉರಿ ಸಣ್ಣಗೆ ಮಾಡಿಕೊಳ್ಳಿ. ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಒಂದು ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಂಡು ಬಳಿಕ ಒಲೆಯಿಂದ ಕೆಳಗೆ ಇರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಬೆಳ್ಳುಳ್ಳಿ ಅನ್ನ ರೆಡಿಯಾಗಿರುತ್ತದೆ. ಇದರ ಜೊತೆ ಯಾವುದೇ ಸೈಡ್ಸ್ ಇಲ್ಲದೆ ಸೇವಿಸಬಹುದು.
ಗಮನಿಸಿ: ಆರಂಭದಲ್ಲಿ ಬೆಳ್ಳುಳ್ಳಿ ಹುರಿದುಕೊಳ್ಳಲು ತುಪ್ಪವನ್ನೇ ಬಳಸಬೇಕೆಂದಿಲ್ಲ, ಎಣ್ಣೆಯಲ್ಲೂ ಫ್ರೈ ಮಾಡಿಕೊಳ್ಳಬಹುದು, ಆದರೆ ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಫ್ರೈ ಮಾಡುವುದರಿಂದ ನಿಮಗೆ ಬೆಳ್ಳುಳ್ಳಿಯ ವಾಸನೆ ತಟ್ಟುವುದಿಲ್ಲ.



Click it and Unblock the Notifications