Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ಥಟ್ ಅಂತ ಮಾಡಿ ಸವಿಯಿರಿ ಈ ಬೆಳ್ಳುಳ್ಳಿ ರೈಸ್..! ಮಧ್ಯಾಹ್ನಕ್ಕೂ ಅದ್ಭುತ!
ನೀವು ಬೆಳಗ್ಗೆ ತಿಂಡಿಗೆ ಯಾವುದಾದರು ರೈಸ್ನಿಂದ ಮಾಡುವಂತಹ ಖಾದ್ಯ ಸವಿಯಲು ಇಷ್ಟಪಡುತ್ತಿದ್ದರೆ ನಿಮಗಾಗಿ ನಾವಿಂದು ಈ ಬೆಳ್ಳುಳ್ಳಿ ರೈಸ್ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಬೆಳಗ್ಗೆ ಎದ್ದಾಗ ಈ ದಿನ ದಿನ ಯಾವ ತಿಂಡಿ ಮಾಡಬೇಕು ಎಂಬ ಗೊಂದಲದಲ್ಲಿ ಸಮಯ ಕಳೆಯಬಹುದು. ಆದ್ರೆ ಸುಲಭವಾಗಿ ಮಾಡುವಂತಹ ಕೆಲವೇ ಖಾದ್ಯಗಳಲ್ಲಿ ಈ ಬೆಳ್ಳುಳ್ಳಿ ರೈಸ್ ಕೂಡ ಒಂದು.
ಬೆಳ್ಳುಳ್ಳಿ ರೈಸ್ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ನೀವು ಬೆಳಗ್ಗೆ ಈ ರೀತಿಯ ಆಹಾರ ಸೇವಿಸಿದರೆ ಇಡೀ ದಿನ ನೀವು ಆರೋಗ್ಯವಾಗಿರಬಹುದು. ಬೆಳ್ಳುಳ್ಳಿಯಲ್ಲಿ ಹಲವು ಆರೋಗ್ಯಕರ ಲಾಭ ಇರುವುದು ಕೂಡಈ ರೈಸ್ ಸವಿಯಲು ಉತ್ತೇಜಿಸಲಿದೆ. ಬೆಳ್ಳುಳ್ಳಿಯಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸತು, ಸೆಲೆನಿಯಮ್ ಮತ್ತು ವಿಟಮಿನ್ ಸಿ, ಎ ಮತ್ತು ಬಿ ಸಮೃದ್ಧವಾಗಿದೆ.

ನಿತ್ಯ ಬೆಳಗ್ಗೆ ಈ ಬೆಳ್ಳುಳ್ಳಿ ಸೇವಿಸುವುದು ಮಲಬದ್ಧತೆಯಂತಹ ಸಮಸ್ಯೆಯನ್ನು ದೂರ ಮಾಡಲಿದೆ. ಹಾಗೆ ಹೃದಯ ಸಂಬಂಧಿ ಸಮಸ್ಯೆಗಳಿಗೂ ಇದು ಬಹಳ ಮುಖ್ಯ ಅಂಶವಾಗಿದೆ. ಬೆಳ್ಳುಳ್ಳಿಯಲ್ಲಿರು ಅಲಿಸಿನ್ ಎಂಬ ಅಂಶವು ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ಹೀಗಾಗಿ ನಾವಿಂದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಬೆಳ್ಳುಳ್ಳಿ ರೈಸ್ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ರೈಸ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ರೈಸ್ ಮಾಡಲು ಬೇಕಾಗುವ ವಸ್ತುಗಳು
- ಬೆಳ್ಳುಳ್ಳಿ
- ಕಾಳು ಮೆಣಸು
- ಅಕ್ಕಿ
- ಒಣ ಮೆಣಸಿನಕಾಯಿ
- ಕರಿಬೇವು
- ಸಾಸಿವೆ
- ಕಡಲೆ ಬೇಳೆ
- ಹುರಿಗಡಲೆ
- ಇಂಗು
- ಕರಿಬೇವು
- ಈರುಳ್ಳಿ
- ಟೊಮೆಟೋ
- ಅರಿಶಿನ ಪುಡಿ
- ತುಪ್ಪ
- ಕೊತ್ತಂಬರಿ ಸೊಪ್ಪು
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬೆಳ್ಳುಳ್ಳಿ ರೈಸ್ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಇದಕ್ಕೆ ಕಾಳು ಮೆಣಸು, ಒಣ ಮೆಣಸು, ಬೆಳ್ಳುಳ್ಳಿ, ಕರಿಬೇವು ಹಾಕಿ 1 ನಿಮಿಷ ಬಿಸಿ ಮಾಡಿಕೊಳ್ಳಿ. ನಂತರ ಇದನ್ನು ತೆಗೆದು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಮಿಕ್ಸಿ ಜಾರ್ಗೆ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ.
ಈಗ ಇದೇ ಬಾಣಲೆಗೆ ಮತ್ತೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಕಡಲೆ ಬೀಜ, ಕಡಲೇಬೀಜ, ಇಂಗು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಹಾಗೆ ಒಣ ಮೆಣಸು, ಕರಿಬೇವು, ಈರುಳ್ಳಿ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಉಪ್ಪು, ಟೊಮೆಟೋ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮೊದಲು ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ವಸ್ತುಗಳನ್ನು, ಅರಶಿಣ ಈ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿ.
ನಂತರ ಮೊದಲು ಮಾಡಿಟ್ಟಿರುವ ಉದುರು ಉದುರಾಗಿರುವ ಅನ್ನವನ್ನು ಇದಕ್ಕೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಮಿಕ್ಸ್ ಮಾಡಿಕೊಳ್ಳಿ. ನಿಮಗೆ ಎಷ್ಟು ರೈಸ್ ಬೇಕೋ ಅಷ್ಟು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಹೆಚ್ಚು ಮಸಾಲೆ ಬೇಕಿದ್ದರೆ ಕಡಿಮೆ ರೈಸ್ ಹಾಕಿ. ಅನ್ನ ಹಾಕಿದ ಬಳಿಕ ತಕ್ಷಣ ಒಲೆ ಆಫ್ ಮಾಡಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ಈ ಬೆಳ್ಳುಳ್ಳಿ ಅನ್ನ ರೆಡಿಯಾಗುತ್ತೆ. ಒಮ್ಮೆ ಮಾಡಿ ಸವಿದರೆ ಮತ್ತೆ ಮತ್ತೆ ಮಾಡಿ ಸವಿಯಲು ನೀವು ಮುಂದಾಗೋದು ಪಕ್ಕ. ಹಾಗೆ ಇದನ್ನು ಬಾಕ್ಸ್ಗೆ ಹಾಕಿ ನೀವು ಮಧ್ಯಾಹ್ನದ ಊಟಕ್ಕೂ ಸವಿಯಬಹುದು. ಆ ರುಚಿ ಹಾಗೆ ಮಧ್ಯಾಹ್ನಕ್ಕೂ ನಿಮಗೆ ಇಷ್ಟವಾಗುತ್ತೆ.



Click it and Unblock the Notifications
