Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅದ್ಭುತ ರುಚಿಯ ಬೆಳ್ಳುಳ್ಳಿ ಕರಿಬೇವು ಕಬಾಬ್ ಮಾಡಿ ನೋಡಿ..! ಇಲ್ಲಿದೆ ರೆಸಿಪಿ!
ನಾನ್ವೆಜ್ ಪ್ರಿಯರಿಗೆ ಚಿಕನ್ನಿಂದ ಮಾಡುವ ಎಲ್ಲಾ ಖಾದ್ಯಗಳು ಬಹಳ ರುಚಿಯಾಗಿರುತ್ತೆ. ಅದರಲ್ಲೂ ಚಿಕನ್ ಪ್ರಿಯರು ಬಹಳ ಇಷ್ಟಪಟ್ಟು ಸವಿಯುವುದು ಕಬಾಬ್ ಅನ್ನು. ಹೋಟೆಲ್ನಲ್ಲಿ ಮನೆಯಲ್ಲೂ ಕೂಡ ಮಾಡಿ ಸವಿಯುತ್ತಾರೆ. ಮಧ್ಯಾಹ್ನ, ರಾತ್ರಿ ಊಟಕ್ಕೆ ಇದು ಕಬಾಬ್ ಇದ್ದರೆ ಎಂತವರು ಕೂಡ ಹೆಚ್ಚಿಗೆ ಊಟ ಮಾಡುತ್ತಾರೆ. ಹಾಗೆ ಮಾಡೋದು ಕೂಡ ಬಹಳ ಸುಲಭ.
ಇನ್ನು ಚಿಕನ್ ಕಬಾಬ್ನಲ್ಲಿ ಹಲವು ಬಗೆಗಗಳಿವೆ. ನೀವು ಒಂದೇ ವಿಧದ ಚಿಕನ್ ಕಬಾಬ್ ಸವಿದಿರಬಹುದು ಆದ್ರೆ ಒಂದಕ್ಕಿಂತ ಒಂದು ವಿಭಿನ್ನ ರುಚಿಯ ಕಬಾಬ್ ಕೂಡ ಮಾಡಬಹುದು. ಅದರಲ್ಲೂ ಇತ್ತೀಚಿಗೆ ಬಹಳ ಫೇಮಸ್ ಆಗಿದ್ದು ಈ ಬೆಳ್ಳುಳ್ಳಿ ಕಬಾಬ್, ಬೆಳ್ಳುಳ್ಳಿ ಬೆಳಸಿ ಮಾಡುವಂತಹ ಈ ರುಚಿ ರುಚಿತ ಕಬಾಬ್ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿತ್ತು.

ಎಲ್ಲಿ ನೋಡಿದ್ರೆ ಬೆಳ್ಳುಳ್ಳಿ ಕಬಾಬ್ನ ಸುವಾಸನೆ ಮೂಗಿಗೆ ಬಡಿಯುತ್ತಿತ್ತು. ಹಾಗೆ ಇದನ್ನು ಮನೆಯಲ್ಲೂ ಹಲವರು ಟ್ರೈ ಮಾಡಿ ಸವಿದಿದ್ದರು, ಆದ್ರೆ ನಾವಿಂದು ಇದೇ ಬೆಳ್ಳುಳ್ಳಿ ಕಬಾಬ್ನಲ್ಲಿ ಹೊಸ ವಿಧದ ಕಬಾಬ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಬೆಳ್ಳುಳ್ಳಿ ಹಾಗೂ ಕರಿಬೇವಿನ ಸೊಪ್ಪು ಹಾಕಿ ಮಾಡುವ ಈ ಡ್ರೈ ಬೆಳ್ಳುಳ್ಳಿ ಕಬಾಬ್ ಮಾಡುವ ಕುರಿತು ನಾವಿಂದು ತಿಳಿಯೋಣ.
ಬೆಳ್ಳುಳ್ಳಿ ಕರಿಬೇವಿನ ಈ ಕಬಾಬ್ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಕಬಾಬ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಚಿಕನ್
- ಕರಿಬೇವು
- ಮೊಟ್ಟೆ
- ಬೆಳ್ಳುಳ್ಳಿ
- ಹಸಿ ಶುಂಠಿ
- ಹಸಿ ಮೆಣಸಿನಕಾಯಿ
- ಚಕ್ಕೆ
- ಲವಂಗ
- ಮೊಸರು
- ಕಾರ್ನ್ ಫ್ಲೋರ್
- ಮೈದಾ ಹಿಟ್ಟು
- ಅಕ್ಕಿ ಹಿಟ್ಟು
- ಕಡ್ಲೆಹಿಟ್ಟು
- ಅರಿಶಿಣ ಪುಡಿ
- ಕಸೂರಿ ಮೆಂತ್ಯ
- ಉಪ್ಪು
- ಎಣ್ಣೆ
ಬೆಳ್ಳುಳ್ಳಿ ಕಬಾಬ್ ಮಾಡುವ ವಿಧಾನವೇನು?
ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೂರು ಬೆಳ್ಳುಳ್ಳಿ ಗಡ್ಡೆ ಸಿಪ್ಪೆ ತೆಗೆದು ಹಾಕಿಕೊಳ್ಳಿ. ಹಾಗೆ ಹಸಿ ಶುಂಠಿ, ಚಕ್ಕೆ, ಲವಂಗ, 15 ಹಸಿ ಮೆಣಸು ಹಾಕಿಕೊಳ್ಳಿ. ಹಾಗೆ ಕರಿಬೇವಿನ ಸೊಪ್ಪು ಸಹ ಹಾಕಿಕೊಂಡು ಸ್ವಲ್ಪ ನೀರು ಸಹ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನುಣ್ಣಗೆ ರುಬ್ಬಿದ ಬಳಿಕ ಈ ಮಸಾಲೆಯ್ನು ತೆಗೆದು ಒಂದು ಬಾಣಲೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಜೊಳದ ಹಿಟ್ಟು, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಅರಶಿಣ ಪುಡಿ, ಮೈದಾ ಹಿಟ್ಟು, ಪುಡಿ ಮಾಡಿದ ಕಸೂರಿ ಮೇಥಿ, ಎಣ್ಣೆ, ಮೊಸರು, ಉಪ್ಪು, ಒಂದು ಮೊಟ್ಟೆ ಒಡೆದು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸಾಮಾನ್ಯ ಕಬಾಬ್ ಮಾಡಲು ಕೆಲವೇ ವಸ್ತುಗಳ ಬಳಸಿ ಮಿಕ್ಸ್ ಮಾಡುತ್ತೀರಿ. ಆದ್ರೆ ಈ ಬೆಳ್ಳುಳ್ಳಿ ಕಬಾಬ್ ವಿಶೇಷ ಪೇಸ್ಟ್ ರೆಡಿ ಮಾಡಿ.
ಈಗ ತೊಳೆದುಕೊಂಡಿರುವ ಚಿಕನ್ ಅನ್ನು ಈ ಪಾತ್ರೆಗೆ ಹಾಕಿಕೊಂಡು ಕಲಸಿಕೊಳ್ಳಬೇಕು. ಮಸಾಲೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಬೇಕು. ಮಿಕ್ಸ್ ಮಾಡಿದ ಬಳಿಕ ಮತ್ತೆ ಮೇಲೆ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ. ಹಿಟ್ಟು ತೆಳುವಾಗಿರದಂತೆ ನೋಡಿಕೊಳ್ಳಿ. ಹಾಗೆ ತಟ್ಟೆ ಮುಚ್ಚಿ 30 ನಿಮಿಷ ಹಾಗೆಯೇ ಬಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
ಈ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಕಲಸಿಕೊಂಡಿರುವ ಕಬಾಬ್ ಅನ್ನು ಬಿಡಬೇಕು. ಉರಿ ಮಧ್ಯವಾಗಿಟ್ಟು ಚೆನ್ನಾಗಿ ಕರಿದುಕೊಳ್ಳಲು ಬಿಡಿ. ಚಿಕನ್ ಎಲ್ಲಾ ಭಾಗದಲ್ಲಿ ಬೇಯುವಂತೆ ತಿರುಗಿಸಿಕೊಳ್ಳಿ. ಕೊನೆಯಲ್ಲಿ ಈ ಎಣ್ಣೆಗೆ ಕರಿಬೇವಿನ ಸೊಪ್ಪು ಹಾಕಿ ಫ್ರೈ ಮಾಡಿ ಚಿಕನ್ ತೆಗೆದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಳ್ಳುಳ್ಳಿ ಕಬಾಬ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications