Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
6 ತಿಂಗಳು ಇಟ್ಟರೂ ಹಾಳಾಗಲ್ಲ ಈ ಬೆಳ್ಳುಳ್ಳಿ ಚಟ್ನಿ..! ಏನೆಲ್ಲಾ ಹಾಕಬೇಕು ಗೊತ್ತಾ?
ಬೆಳಗ್ಗೆ ತಿಂಡಿಯ ಸಮಯಕ್ಕೂ ಯಾವುದಾದರು ಚಟ್ನಿ ಇದ್ದರೆ ಅದರ ರುಚಿ ಅದ್ಭುತವಾಗಿರುತ್ತೆ. ಹಾಗೆ ಊಟದ ಸಮಯದಲ್ಲೂ ಒಂದೊಂದು ಚಟ್ನಿ ಇರಬೇಕು. ಖಾರ ಖಾರವಾಗಿ ಬಾಯಿ ರುಚಿ ಹೆಚ್ಚಿಸುವ ಚಟ್ನಿ ಇದ್ದರೆ ತಿಂಡಿಗೆ ಮತ್ತೊಂದಿಷ್ಟು ರುಚಿ ಬರಲಿದೆ. ಹಾಗೆ ಕೆಲವೊಂದು ಚಟ್ನಿಯನ್ನು ನೀವು ಹಲವು ದಿನಗಳ ಕಾಲ ಇಟ್ಟು ಸವಿಯಬಹುದು ಅನ್ನೋದು ಕೂಡ ನೀವು ತಿಳಿದಿದ್ದೀರಿ. ಒಣ ಮೆಣಸು, ಹುಣಸೆ ಹುಳಿ ಹಾಕಿ ಚಟ್ನಿ ಪುಡಿ ಮಾಡಿ ಇಟ್ಟರೆ ಹಲವು ದಿನಗಳ ಕಾಲ ಹಾಳಾಗುವುದಿಲ್ಲ. ಇದನ್ನು ಎಲ್ಲಾ ತಿಂಡಿಯ ಜೊತೆಗೆ ಸವಿಯುವುದು ನೋಡಬಹುದು.
ಹಾಗೆ ನಾವಿಂದು ಬರೋಬ್ಬರಿ 6 ತಿಂಗಳಿಗೂ ಹೆಚ್ಚು ಕಾಲ ಇಟ್ಟರೂ ಹಾಳಾಗದೆ ಇರುವ ಚಟ್ನಿಯ ಕುರಿತಾಗಿ ತಿಳಿದುಕೊಳ್ಳೋಣ. ಹೌದು ಬೆಳ್ಳುಳ್ಳಿಯಿಂದ ಮಾಡುವ ಈ ಚಟ್ನಿಯನ್ನು ನೀವು 6 ತಿಂಗಳಿಗೂ ಹೆಚ್ಚು ಕಾಲ ಇಟ್ಟು ಸವಿಯಬಹುದು. ನೀವು ಯಾವುದೇ ತಿಂಡಿ ಮಾಡಿದ್ದರೂ ಈ ಚಟ್ನಿ ಸವಿಯಬಹುದು. ಹಾಗೆ ಊಟದ ಜೊತೆಗೂ ಕೂಡ ಇದು ಅದ್ಭುತ ರುಚಿ ನೀಡಲಿದೆ.

ನಾವು ಸಹ ಇಂದು ಈ ಬೆಳ್ಳುಳ್ಳಿ ಚಟ್ನಿ ಮಾಡುವ ಕುರಿತು ತಿಳಿಯೋಣ. ನಿತ್ಯ ಒಂದೊಂದು ಬಗೆಯ ಚಟ್ನಿ ಮಾಡಿ ಸವಿಯಲು ಸಮಯ ಹಿಡಿಯಲಿದೆ. ಆದ್ರೆ ಈ ಚಟ್ನಿ ಮಾಡಿದರೆ ಬಹಳ ರುಚಿಕರವಾಗಿ ತಿಂಗಳಕಾಲ ಸವಿಯಬಹುದು. ಹಾಗಾದ್ರೆ ಈ ಬೆಳ್ಳುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬೆಳ್ಳುಳ್ಳಿ
- ಲವಂಗ
- ಚಕ್ಕೆ
- ಎಣ್ಣೆ
- ಜೀರಿಗೆ
- ಜೀರಿಗೆ ಪುಡಿ
- ಧನಿಯಾ ಪುಡಿ
- ಖಾರದ ಪುಡಿ
- ಇಂಗು
- ಅರಶಿಣ
- ಉಪ್ಪು
- ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಈ ಚಟ್ನಿಗೆ ಎಣ್ಣೆ ಹೆಚ್ಚಾಗಿ ಬಳಸಿ. ಬಳಿಕ ಇದಕ್ಕೆ ಸಿಪ್ಪೆ ಬಿಡಿಸಿರುವ ಬೆಳ್ಳುಳ್ಳಿ ಹಾಕಿ. ಸುಮಾರು 200 ಗ್ರಾಮ್ ಬೆಳ್ಳುಳ್ಳಿ ಬಳಸಿಕೊಳ್ಳಿ. ಎಣ್ಣೆಯಲ್ಲಿ ಬೆಳ್ಳುಳ್ಳಿ ಚೆನ್ನಾಗಿ ಫ್ರೈ ಆಗುವಂತೆ ನೋಡಿಕೊಳ್ಳಿ. ನಂತರ ಇದಕ್ಕೆ ಲವಂಗ, ಚಕ್ಕೆ ಹಾಕಿ ಮತ್ತೆ ಬಿಸಿ ಮಾಡಿಕೊಳ್ಳಿ.
ಹಾಗೆ ಕಾಲು ಚಮಚ ಜೀರಿಗೆ, ಕರಿಬೇವು ಕೂಡ ಹಾಕಿಕೊಂಡು ಬೆಳ್ಳುಳ್ಳಿ ಸ್ವಲ್ಪ ಕೆಂಪಾಗುವವರೆಗೂ ಮಿಕ್ಸ್ ಮಾಡಿ. ಈಗ ಇಂಗು, ಅರಶಿಣ ಪುಡಿ ಸಹ ಹಾಕಿಕೊಳ್ಳಿ. ನಂತರ ಖಾರದ ಪುಡಿ (ನಿಮಗೆ ಎಷ್ಟು ಖಾರ ಬೇಕೋ ಅಷ್ಟು) ಹಾಗೆ ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿ.
ಈಗ 2 ಚಮಚದಷ್ಟು ಹುಣಸೆ ಹುಳಿಯ ನೀರು ಹಾಕಿಕೊಳ್ಳಿ. ಹಾಗೆ ಬೆಲ್ಲ ಅಥವಾ ಬೆಲ್ಲದ ಪುಡಿ ಇದ್ದರೆ ಸ್ವಲ್ಪ ಹಾಕಿಕೊಂಡು ಮಿಕ್ಸ್ ಮಾಡಿ ಕರಗಲು ಬಿಡಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ಇದು ತಣ್ಣಗಾಗಲು ಬಿಡಿ. ಸಂಪೂರ್ಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಈ ಬೆಳ್ಳುಳ್ಳಿಗಳ ಹಾಕಿಕೊಳ್ಳಿ.
ನೀರು ಹಾಕಿಕೊಳ್ಳದೆಯೇ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಕ್ಯಾರೆಟ್ ಹಲ್ವದ ರೀತಿಯಲ್ಲಿ ಇದು ಅಂಟು ಅಂಟಾಗಿ ಬರಬೇಕು. ಇಷ್ಟು ರುಬ್ಬಿಕೊಂಡು ಒಂದು ಬಾಕ್ಸ್‌ಗೆ ಹಾಕಿಡಿ. ಇದನ್ನು 6 ತಿಂಗಳಿಗೂ ಹೆಚ್ಚು ಸಮಯ ಫ್ರಿಡ್ಜ್‌ನಲ್ಲಿಟ್ಟು ಸವಿಯಬಹುದು. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
