Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬೆಳ್ಳುಳ್ಳಿ ಖಾರ ಚಟ್ನಿ ಮಾಡಿದ್ರೆ ಬೆಳಗ್ಗೆ ತಿಂಡಿ ರುಚಿ ದುಪ್ಪಟ್ಟಾಗುತ್ತೆ! 2 ವಸ್ತು ಇದ್ರೆ ಸಾಕು
ನೀವು ಬೆಳಗ್ಗೆ ತಿಂಡಿ ಸಮಯಕ್ಕೆ ನೀವು ಯಾವುದಾದರು ಚಟ್ನಿಯೊಂದನ್ನು ಮಾಡಿ ಸವಿಯಲು ಇಷ್ಟಪಡುತ್ತೀರಿ. ಹಾಗೆ ಊಟದೊಂದಿಗೆ ಸವಿಯಲು ಕೂಡ ಇಷ್ಟವಾಗುವಂತಹ ರುಚಿ ರುಚಿಯ ಚಟ್ನಿ ಮಾಡಿ ಸವಿಯೋಕೆ ಎಲ್ಲರು ಮುಂದಾಗುತ್ತಾರೆ. ಅದ್ರಲ್ಲೂ ಖಾರ ಖಾರವಾಗಿ ಬೆಳ್ಳುಳ್ಳಿಯ ಬಳಸಿಕೊಂಡು ಮಾಡುವಂತಹ ಚಟ್ನಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಹೀಗಾಗಿ ನಾವಿಂದು ಬೆಳ್ಳುಳ್ಳಿ ಖಾರದ ಚಟ್ನಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಚಟ್ನಿಯನ್ನು ನೀವು ಊಟ, ತಿಂಡಿಯೊಂದಿಗೆ ಸವಿಯಬಹುದು. ಬಹಳ ರುಚಿಕರ ಹಾಗೆ ನಾಲಗೆ ರುಚಿಗೆ ಹೆಚ್ಚಿಸುವ ಚಟ್ನಿ ಇದು. ಬೆಳ್ಳುಳ್ಳಿ ಇದ್ದರೆ ನೀವು ಸುಲಭವಾಗಿ ಈ ಚಟ್ನಿ ಮಾಡಿ ಸವಿಯಬಹುದು.

ಹಾಗಾದ್ರೆ ನಿಮ್ಮ ಬೆಳಗ್ಗೆಯ ತಿಂಡಿಗೆ ಬೆಳ್ಳುಳ್ಳಿ ಬಳಸಿಕೊಂಡು ಹೇಗೆ ಚಟ್ನಿ ಮಾಡಬಹುದು. ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಖಾರ ಚಟ್ನಿ ಮಾಡಲು ಅಗತ್ಯವಿರುವ
ವಸ್ತುಗಳು
- ಬೆಳ್ಳುಳ್ಳಿ
- ಒಣ ಮೆಣಸು
- ಖಾರದ ಪುಡಿ
- ಕೊತ್ತಬರಿ ಸೊಪ್ಪು
- ಜೀರಿಗೆ
- ಉಪ್ಪು
- ಎಣ್ಣೆ
ಬೆಳ್ಳುಳ್ಳಿ ಖಾರ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಇದಕ್ಕೆ ಜೀರಿಗೆ ಹಾಕಿ ಚಟಪಟ ಅನ್ನಲು ಬಿಡಿ. ನಂತರ ಇದಕ್ಕೆ ಬ್ಯಾಡಗಿ ಮೆಣಸುಗಳ ಹಾಕಿ ಈ ಮೆಣಸನ್ನು ಕತ್ತರಿಸಿ ಹಾಕಿಕೊಳ್ಳಿ ಒಂದು ಮೆಣಸಿನಲ್ಲಿ ಮೂರು ಭಾಗ ಮಾಡಿ ಹಾಕಿಕೊಳ್ಳಿ.
ನಂತರ ಚೆನ್ನಾಗಿ ಹುರಿದುಕೊಳ್ಳಿ. ಹಾಗೆ ಒಲೆ ಆಫ್ ಮಾಡಿಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಖಾರ ಮಾಡುವ ಅಥವಾ ಕುಟ್ಟುವ ಕಲ್ಲು ತೆಗೆದುಕೊಳ್ಳಿ. ಕಲ್ಲು ಇಲ್ಲದಿದ್ದರೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಮೊದಲಿಗೆ ಪಾತ್ರೆಯಲ್ಲಿನ ಮೆಣಸು, ಜಿರಿಗೆ ಹಾಕಿಕೊಂಡು 2ರಿಂದ 3 ಸುತ್ತು ರುಬ್ಬಿ. ಇದು ತರಿ ತರಿ ಆದಾಗ ಬಿಡಿಸಿಕೊಂಡಿರುವ ಒಂದು ಗಡ್ಡೆ ಬೆಳ್ಳುಳ್ಳಿ ಇದಕ್ಕೆ ಹಾಕಿ ಮತ್ತೆ 1 ಸುತ್ತು ರುಬ್ಬಿ.
ಈಗ ರುಚಿಗೆ ತಕ್ಕಷ್ಟು ಉಪ್ಪು, 2 ಸ್ಪೂನ್ ಎಣ್ಣೆ, ಖಾರದ ಪುಡಿ, ಕೊತ್ತಂಬರಿ ಸೊಪ್ಪು ಕೂಡ ಹಾಕಿ ಮತ್ತೆ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವುದಕ್ಕಿಂತ ಕಲ್ಲಿನಲ್ಲಿ ಹಾಕಿ ಅರಿಯುವುದು ಬಹಳ ಉತ್ತಮ. ಇಷ್ಟಾದರೆ ಚಟ್ನಿ ರೆಡಿಯಾಗುತ್ತೆ. ಇದನ್ನು ಕೈಯಿಂದ ಒಂದು ಉಂಡೆ ಕಟ್ಟಿಕೊಂಡು ಇಟ್ಟುಕೊಳ್ಳಿ. ತಿಂಡಿಯ ಜೊತೆಗೆ ಹಾಗೆ ಊಟದೊಂದಿಗೆ ಸವಿಯಲು ಬಹಳ ರುಚಿಯಾದ ಖಾರ ಖಾರವಾದ ಚಟ್ನಿ ಇದು.
ನೀವು ಇದಕ್ಕೆ ಸ್ವಲ್ಪ ಬೆಲ್ಲ ಬೇಕಾದರೆ ಹಾಕಿ ರುಬ್ಬಿಕೊಳ್ಳಬಹುದು, ಬೇಡವಾದರೆ ಹಾಗೆಯೇ ಮಾಡಿ. ಇನ್ನು ಈ ಚಟ್ನಿಯನ್ನು ಒಂದಿಷ್ಟು ದಿನ ಇಟ್ಟು ಕೂಡ ಸವಿಯಬಹುದು. ರೊಟ್ಟಿ, ಚಪಾತಿ ದೋಸೆಯೊಂದಿಗೆ ಇದನ್ನು ಸವಿಯಬಹುದು. ಹಾಗೆ ಊಟದೊಂದಿಗೂ ಇದು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಈ ಚಟ್ನಿಯನ್ನು ಮಾಡಿ ಸವಿದು ನೋಡಿ, ಒಮ್ಮೆ ಸವಿದರೆ ಬೆಳಗ್ಗೆ ತಿಂಡಿ ಸವಿಯಲು ಇದೇ ಚಟ್ನಿ ಬಯಸುತ್ತೀರಿ.



Click it and Unblock the Notifications
