Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬ್ಯಾಚುಲರ್ಸ್ಗಳಿಗೆ ಸುಲಭದ ಫ್ರೈಡ್ ರೈಸ್ ಇದು..! ಕೇವಲ 4 ನಿಮಿಷ ಮಾಡಲು ಸಾಕು!
ಮನೆಯಲ್ಲಿ ಬ್ರೇಕ್ಫಾಸ್ಟ್ಗೆ ರೈಸ್ನಿಂದ ಮಾಡುವ ಹಲವು ಬಗೆಯ ಖಾದ್ಯ ಸವಿಯಲು ನೀವು ಇಷ್ಟಪಡುತ್ತೀರಿ. ಬೆಳಗ್ಗೆ ರುಚಿ ರುಚಿಯ ರೈಸ್ನಿಂದ ಮಾಡಿರುವ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಫ್ರೈಡ್ ರೈಸ್ ಅನ್ನು ನೀವೆಲ್ಲರು ಮಾಡಿ ಸವಿದಿರುತ್ತೀರಿ. ಹಾಗೆ ನೋಡಿದರೆ ಸಂಜೆ ಸಮಯದಲ್ಲಿ ಫ್ರೈಡ್ ರೈಸ್ ಸವಿಯಲು ಎಲ್ಲರು ಇಷ್ಟಪಡುತ್ತಾರೆ. ಹಾಗೆ ಇದರಲ್ಲೂ ಹಲವು ಬಗೆಯಲ್ಲಿ ಫ್ರೈಡ್ ರೈಸ್ ಮಾಡಿ ಸವಿಯಬಹುದು. ಬೆಳಗ್ಗೆಯ ತಿಂಡಿಗೆ ಅದ್ಭುತವಾದ ರುಚಿಯಲ್ಲಿ ಇಂದು ಫ್ರೈಡ್ ರೈಸ್ ಮಾಡಿ ಸವಿಯುವ ಕುರಿತಂತೆ ತಿಳಿದುಕೊಳ್ಳೋಣ.
ಅದರಲ್ಲೂ ನೀವು ಬ್ಯಾಚುಲರ್ಸ್ ಆಗಿದ್ದರೆ ನಿಮಗೆ ಅತ್ಯಂತ ಸುಲಭವಾಗಿ, ಎಲ್ಲಿಯೂ ಸವಿದಿರದ ರೀತಿಯಲ್ಲಿ ಈ ಫ್ರೈಡ್ ರೈಸ್ ಮಾಡಿ ಸವಿಯಿರಿ. ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿ, ಸುಲಭವಾಗಿ ಮಾಡಿ ಸವಿಯಬಹುದಾದ ರೆಸಿಪಿ ಇದಾಗಿದೆ. ಹಾಗಾದ್ರೆ ಈ ಫ್ರೈಡ್ ರೈಸ್ ಮಾಡುವ ಕುರಿತು ತಿಳಿದುಕೊಳ್ಳೋಣ.

ನಾವಿಂದು ಹೇಳುತ್ತಿರುವುದು ಎಲೆಕೋಸು ಬಳಸಿ ಮಾಡುವ ಸುಲಭದ ಫ್ರೈಡ್ ರೈಸ್ ವಿಧಾನವಾಗಿದೆ. ಯಾರು ಬೇಕಾದರು ಬಹಳ ಸುಲಭವಾಗಿ ಈ ವಿಧಾನದಲ್ಲಿ ರುಚಿ ರುಚಿ ತಿಂಡಿ ರೆಡಿ ಮಾಡುತ್ತಾರೆ. ಹಾಗಾದ್ರೆ ಬ್ಯಾಚುಲರ್ಸ್ ಇಷ್ಟಪಡುವಂತಹ ಈ ಎಲೆಕೋಸಿನ ಫ್ರೈಡ್ ರೈಸ್ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಲೆಕೋಸು ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇಣು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಲೆಕೋಸಿನ ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅನ್ನ
- ಎಲೆಕೋಸು
- ಈರುಳ್ಳಿ
- ಹಸಿರು ಬಟಾಣಿ
- ಶುಂಠಿ
- ಬೆಳ್ಳುಳ್ಳಿ
- ಹಸಿರು ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಮೆಣಸಿನ ಪುಡಿ
- ಜೀರಿಗೆ
- ಸೋಯಾ ಸಾಸ್
- ಉಪ್ಪು
- ಎಣ್ಣೆ
ಎಲೆಕೋಸಿನ ಫ್ರೈಡ್ ರೈಸ್ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಥವಾ ಪೀಸ್ಗಳು, ಹಸಿ ಮೆಣಸು, ಕಾಳು ಮೆಣಸಿನ ಪುಡಿ, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಎಲೆಕೋಸು, ಹಸಿ ಬಟಾಣಿಯನ್ನು ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಇದಕ್ಕೆ ಸೋಯಾ ಸಾಸ್ ಇದ್ದರೆ ಇದಕ್ಕೆ ಹಾಕಿಕೊಳ್ಳಿ. ಇಲ್ಲದಿದ್ದರೂ ನಡೆಯುತ್ತದೆ. ಜೀರಿಗೆ ಪುಡಿ, ಹಾಗೆ ಪೆಪ್ಪರ್ ಪುಡಿ ಸಹ ಹಾಕಿಕೊಂಡು ಮತ್ತೆ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಮೊದಲು ಮಾಡಿಟ್ಟಿರುವ ಅನ್ನವನ್ನು ಇದಕ್ಕೆ ಹಾಕಿಕೊಳ್ಳಿ. ಸುಲಭವಾಗಿ ಈ ಅನ್ನವು ಎಲ್ಲಾ ಮಸಾಲೆಯೊಂದಿಗೆ ಬೆರೆಯಬೇಕು. ಉರಿ ದೊಡ್ಡದಾಗಿ ಇಟ್ಟುಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಂಡರೆ ಸಾಕಾಗುತ್ತೆ. ಕೊನೆಗೆ ಉರಿ ಸಣ್ಣ ಮಾಡಿಕೊಂಡು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ಸುಲಭದ ಫ್ರೈಡ್ ರೈಸ್ ನಿಮ್ಮದಾಗುತ್ತೆ.
ಹಾಗೆ ಇದಕ್ಕೆ ಈರುಳ್ಳಿ ಹಾಕಿದ ನಂತರದಲ್ಲಿ ಮೊಟ್ಟೆಯನ್ನು ಹಾಕಿ ಬೆರೆಸಿಕೊಂಡರೆ ಮೊಟ್ಟೆ ಫ್ರೈಡ್ ರೈಸ್ ಆಗುತ್ತದೆ. ಬ್ಯಾಚುಲರ್ಸ್ಗಳು ಇದನ್ನು ಸುಲಭವಾಗಿ ಮಾಡಿ ಸವಿಯಬಹುದು.



Click it and Unblock the Notifications
