Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ನೀವು ಇಡೀ ದಿನ ಚಟುವಟಿಕೆಯಿಂದ ಇರಬೇಕಾದರೆ ಉತ್ತಮ ಆಹಾರ ಸೇವಿಸಬೇಕು. ವಿಟಮಿನ್, ಪ್ರೋಟಿನ್ ಹೆಚ್ಚಾಗಿರುವಂತಹ ಆಹಾರಗಳ ಸೇವಿಸುವುದರಿಂದ ನಿಮ್ಮ ದೇಹವು ಇಡೀ ದಿನ ಕೆಲಸ ಮಾಡುವಷ್ಟು ಶಕ್ತಿಯನ್ನು ಪಡೆಯಲಿದೆ. ಹಾಗೆ ದೇಹ ಸದೃಢವಾಗಿರಬೇಕಾದರೆ ನೀವು ಅತ್ಯುತ್ತಮ ಕಾಳು, ತರಕಾರಿ, ಹಸಿರು ತರಕಾರಿ ಹೀಗೆ ಪೋಷಕಾಂಶ ಭರಿತವಾದ ಆಹಾರ ಸೇವಿಸುವುದು ಮುಖ್ಯವಾಗುತ್ತೆ.
ಇನ್ನು ಬೇಳೆ ಕಾಳುಗಳಿಂದ ಮಾಡಿರುವ ಆಹಾರವು ಎಲ್ಲರ ಆರೋಗ್ಯಕ್ಕೂ ಬಹಳ ಉತ್ತಮ. ಹೀಗಾಗಿ ಇಡೀ ದೇಹದ ಆರೋಗ್ಯಕ್ಕೆ ಉತ್ತಮವಾಗುವಂತಹ ಹುರಿದಕ್ಕಿ ಉಂಡೆ ಮಾಡುವ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ. ಅಕ್ಕಿ, ಬೇಳೆ, ಕಾಳುಗಳ ಹುರಿದು ಈ ಉಂಡೆ ಮಾಡಲಾಗುತ್ತದೆ. ಇದು ನಿಮ್ಮ ದೇಹಕ್ಕೆ ಒಟ್ಟಾರೆ ಬಲ ನೀಡಲಿದೆ ಹಾಗೆ ಇಡೀ ದಿನ ಕೆಲಸ ಮಾಡಲು, ಚಟುವಟಿಕೆಯಿಂದ ಇರಲು ಸಹಕಾರಿಯಾಗಲಿದೆ.

ಅಕ್ಕಿ ಸೇರಿದಂತೆ ಹಲವು ವಸ್ತುಗಳನ್ನು ಹುರಿದು ಈ ಉಂಡೆ ಮಾಡಲಾಗುತ್ತದೆ. ಇದು ನಿಮ್ಮ ದೇಹಕ್ಕೆ ಬಹಳ ಉತ್ತಮವಾಗಿದೆ. ಇನ್ನು ಈ ಬೇಸಿಗೆಯ ಸಮಯದಲ್ಲಿ ದೇಹ ದಣಿಯುವುದು, ಆಯಾಸದಿಂದ ವಿಶ್ರಾಂತಿ ಪಡೆಯಬೇಕಾಗುತ್ತದೆ. ಆದ್ರೆ ಈ ಉಂಡೆ ನಿಮ್ಮ ದೇಹಕ್ಕೆ ಬಹಳ ಉತ್ತಮ. ತೋಳಿಗೆ ಬಲ ನೀಡುವ ಈ ಹುರಿದಕ್ಕಿ ಉಂಡೆ ಮಾಡಿ ಸವಿದು ನೊಡಿ.
ಹಾಗಾದ್ರೆ ಈ ಹುರಿದಕ್ಕಿ ಉಂಡೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಹುರಿದಕ್ಕಿ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು
- ಅಕ್ಕಿ
- ಶೇಂಗಾ ಕಡಲೆ
- ಹೆಸರು ಬೇಳೆ
- ಕೊಬ್ಬರಿ ತುರಿ
- ಗಸೆ ಗಸೆ
- ಏಲಕ್ಕಿ
- ಬೆಲ್ಲ
ಹುರಿದಕ್ಕಿ ಉಂಡೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ 4 ಕಪ್ ಅಕ್ಕಿ ಹಾಕಿ, ಮತ್ತೊಂದು ಬೌಲ್ಗೆ 1 ಕಪ್ ಹೆಸರು ಕಾಳು, 1 ಕಪ್ ಗೋಧಿ ಹಾಕಿ ಎಲ್ಲವನ್ನು ತೊಳೆದು ಬೇರೆ ಬೇರೆಯಾಗಿ ಒಂದು ಬಟ್ಟೆಯ ಮೇಲೆ ಹಾಕಿ ಒಣಗಿಸಬೇಕು. ಬಿಸಿಲಿನಲ್ಲಿ 1 ಗಂಟೆಯಾದರು ಒಣಗಿಸಬೇಕು. ಈಗ ಒಲೆ ಮೇಲ ಒಂದು ಬಾಣಲೆ ಇಟ್ಟು ಅದಕ್ಕೆ ಒಣಗಿಸಿದ ಹೆಸರು ಬೇಳೆಯನ್ನು ಹಾಕಿ ಹುರಿದುಕೊಳ್ಳಿ. ಕೆಂಪಗಾಗಿ, ಘಮ ಘಮ ಎನ್ನುವರೆಗೂ ಹುರಿದು ತೆಗೆದಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ ಒಣಗಿಸಿದ ಗೋಧಿಯನ್ನು ಹಾಕಿಕೊಂಡು ಸಣ್ಣ ಉರಿಯಲ್ಲಿ ಹುರಿದುಕೊಂಡು ಬದಿಗಿಟ್ಟುಕೊಳ್ಳಿ. ಹಾಗೆ ಅಕ್ಕಿಯನ್ನು ಸಹ ಹಾಕಿ ಹುರಿದು ಬದಿಗೆ ತೆಗೆದಿಟ್ಟುಕೊಳ್ಳಿ. ಈಗ ಒಂದು ಕಪ್ ಶೇಂಗಾ ಸಹ ಹಾಕಿ ಹುರಿದು ಬದಿಗಿಟ್ಟುಕೊಳ್ಳಿ. ಹಾಗೆ ಅರ್ಧ ಕಪ್ ಬಿಳಿ ಎಳ್ಳು ಸಹ ಹುರಿದು ತೆಗೆದಿಡಿ. 2 ಚಮಚ ಗಸೆಗಸೆ ಕೂಡ ಹುರಿದು ಇಟ್ಟುಕೊಳ್ಳಿ.
ಈಗ ಬಾಣಲೆಗೆ ತುರಿದ ಕೊಬ್ಬರಿಯನ್ನು ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಅಕ್ಕಿ, ಬೇಳೆ, ಗೋಧಿಯನ್ನು ಒಂದೇ ಬೌಲ್ಗೆ ಮಿಕ್ಸ್ ಮಾಡಿಕೊಂಡು ಬಳಿಕ ಇದಕ್ಕೆ 1 ಕಪ್ ಹುರಿಗಡಲೆ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಹಾಗೆ ಕಡಲೆ ಬೀಜದ ಸಿಪ್ಪೆ ತೆಗೆದು ಅದಕ್ಕೆ ಏಲಕ್ಕಿ ಸೇರಿಸಿ ಪುಡಿ ಮಾಡಿಕೊಳ್ಳಿ, ಇದನ್ನು ಸ್ವಲ್ಪ ತರಿ ತರಿಯಾಗಿ ಪುಡಿ ಮಾಡಿ.
ಹಾಗೆ ಎಳ್ಳು ಕೊಬ್ಬರಿ ಗಸೆಗಸೆ ಸಹ ಈ ಹಿಟ್ಟಿನೊಂದಿಗೆ ಮಿಕ್ಸ್ ಮಾಡಿ. ಈಗ ಒಲೆ ಮೇಲೆ ಬಾಣಲೆ ಇಟ್ಟು 3ರಿಂದ 4 ಕಪ್ ಬೆಲ್ಲ ಹಾಕಿ ನೀರು ಹಾಕಿ ಕರಗಲು ಬಿಡಿ. ಬೆಲ್ಲದ ನೀರನ್ನು ಜರಡಿ ಹಿಡಿದು ಈ ಹಿಟ್ಟಿಗೆ ಹಾಕಬೇಕು. ಸ್ವಲ್ಪ ಸ್ವಲ್ಪ ಬೆಲ್ಲದ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಬೇಕು. ಈ ಹಿಟ್ಟಿಗೆ ಚೆನ್ನಾಗಿ ಬೆಲ್ಲದ ನೀರು ಹಿಡಿಯುವಂತೆ ಕಲಸಿಕೊಳ್ಳಿ. ಉಂಡೆ ಕಟ್ಟುವ ಹದಕ್ಕೆ ಬರಬೇಕು. ಹೀಗೆ ಉಂಡೆ ಕಟ್ಟಿದರೆ ನಿಮ್ಮ ಮುಂದೆ ಹುರಿದಕ್ಕಿ ಉಂಡೆ ಸಿದ್ದವಾಗುತ್ತೆ.



Click it and Unblock the Notifications
