Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
5 ನಿಮಿಷದಲ್ಲಿ ಗರಿ ಗರಿಯಾದ ಫ್ರೆಂಚ್ ಫ್ರೈಸ್ ಮಾಡಿ: ಬಹಳ ಸುಲಭದ ರೆಸಿಪಿ
ಸಂಜೆಯ ಸಮಯದಲ್ಲಿ ಟೀಯೊಂದಿಗೆ ಸವಿಯಲು ಹಲವು ರೀತಿಯ ತಿಂಡಿಯನ್ನು ನೀವು ಸವಿಯಲು ಇಷ್ಟಪಡುವ ಮಂದಿಯಾಗಿದ್ದರೆ ರುಚಿರುಚಿಯ ಚಿಪ್ಸ್, ಬೋಂಡಾ, ಬಜ್ಜಿ, ಬಿಸ್ಕೇಟ್, ಕುರುಕಲು ತಿಂಡಿ, ಕರಿದ ತಿಂಡಿಗಳನ್ನು ಸವಿಯುತ್ತೀರಿ. ಅಂಗಡಿ, ಬೇಕರಿಗಳಲ್ಲಿ ಸಿಗುವಂತಹ ರುಚಿಯಾದ ಈ ತಿಂಡಿಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರಲಿದೆ. ಟೀ ಕಾಫಿಯೊಂದಿಗೆ ಅಥವಾ ಮನೆಗೆ ಯಾರಾದರು ಅತಿಥಿಗಳು, ಸ್ನೇಹಿತರು ಬಂದಾಗಲು ಇಂತಹ ತಿಂಡಿಗಳ ಸವಿಯಲು ನೀಡುವುದು ನೋಡಿದ್ದೇವೆ.
ಹಾಗೆ ಸ್ನ್ಯಾಕ್ಸ್ ವೇಳೆ ಬಾಯಿ ರುಚಿ ಹೆಚ್ಚಿಸುವಂತಹ ಹಲವು ತಿಂಡಿಗಳ ಪೈಕಿ ನಾವಿಂದು ಫ್ರೆಂಚ್ ಫ್ರೈಸ್ ಮಾಡುವ ಕುರಿತಾಗಿ ತಿಳಿಯೋಣ. ನೀವು ಸಹ ಬೇಕರಿಗಳಲ್ಲಿ ಅಂಗಡಿಗಳಲ್ಲಿ, ಹೋಟೆಲ್, ಮಾಲ್‌ಗೆ ಭೇಟಿ ನೀಡಿದ್ದ ವೇಳೆಯಲ್ಲಿ ಈ ಫ್ರೆಂಚ್ ಫ್ರೈ ಸವಿದಿರುತ್ತೀರಿ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಫ್ರೆಂಚ್ ಫ್ರೈಸ್ ಅನ್ನು ಇಷ್ಟಪಡುವ ಮಂದಿ ಇದ್ದಾರೆ.
ಇನ್ನು ಫ್ರೆಂಚ್ ಫ್ರೈಸ್ ಈಗ ದುಬಾರಿ ಎನ್ನಬಹುದು. ಹಾಗೆ ಮೃದುವಾದ ಈ ಫ್ರೆಂಚ್ ಫ್ರೈಸ್ ಮನೆಯಲ್ಲೂ ನಾವು ಮಾಡಿ ಸವಿಯಬಹುದು ಹೀಗಾಗಿ ನಾವಿಂದು ಮನೆಯಲ್ಲೇ ಈ ಫ್ರೆಂಚ್ ಫ್ರೈಸ್ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಮನೆಯಲ್ಲಿ ಈ ಫ್ರೆಂಚ್ ಫ್ರೈಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಫ್ರೆಂಚ್ ಫ್ರೈಸ್ ಮಾಡಲು ಬೇಕಾಗುವ ವಸ್ತುಗಳು
- ಆಲೂಗಡ್ಡೆ- ದೊಡ್ಡ ಗಾತ್ರದ ಮೂರು
- ಎಣ್ಣೆ
- ಕಾರ್ನ್ ಫ್ಲೋರ್
- ಉಪ್ಪು
- ಖಾರದ ಪುಡಿ
ಫ್ರೆಂಚ್ ಫ್ರೈಸ್ ಮಾಡುವ ವಿಧಾನವೇನು?
ಮೊದಲಿಗೆ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದುಕೊಳ್ಳಿ. ನಂತರ ಮಧ್ಯದಲ್ಲಿ ಕತ್ತರಿಸಿಕೊಂಡು ಉದ್ದವಾಗಿ ಕತ್ತರಿಸಿಕೊಳ್ಳಿ. ಸ್ಲೈಸ್‌ಗಳು ತೆಳುವಾಗಿದ್ದರೆ ಉತ್ತಮ ಹಾಗೆ ಬಹಳ ದಪ್ಪವಾಗಿ ಮಾಡಿಕೊಳ್ಳಬೇಡಿ. ಕತ್ತರಿಸಿದ ಆಲೂಗಡ್ಡೆಯನ್ನು ನೀರಿನಲ್ಲಿ ಹಾಕಿಟ್ಟುಕೊಳ್ಳಿ. 10 ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿಡಬೇಕು.
ಈಗ ನೀರಿನಿಂದ ತೆಗೆದು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು, ಉಪ್ಪು ಹಾಕಿ ಬಿಸಿಯಾಗಲು ಬಿಡಿ. ನೀರು ಬಿಸಿಯಾದ ಬಳಿಕ ಇದಕ್ಕೆ ತಟ್ಟೆಯಲ್ಲಿರುವ ಆಲೂಗಡ್ಡೆಯನ್ನು ಹಾಕಿ 4ರಿಂದ 5 ನಿಮಿಷ ಬೇಯಿಸಿಕೊಳ್ಳಿ. ಅನಂತರ ಮತ್ತೆ ಆಲೂಗಡ್ಡೆ ತೆಗೆದು ನೀರು ಇಳಿಯಲು ಬಿಟ್ಟು ಅದನ್ನು ಕಾಟನ್ ಬಟ್ಟೆಯಲ್ಲಿ ಹಾಕಿ ನೀರು ಒಣಗಿಸಿ ಗಾಳಿಯಲ್ಲಿ ಇಡಿ.
ಈಗ ಒಂದು ಬೌಲ್‌ಗೆ 2 ಸ್ಪೂನ್ ಕಾರ್ನ್ ಫ್ಲೋರ್ ಹಾಕಿಕೊಂಡು ಅದಕ್ಕೆ ಈ ಎಲ್ಲಾ ಆಲೂಗಡ್ಡೆಯನ್ನು ಹಾಕಿ ಹಿಟ್ಟು ಹಿಡಿಯುವಂತೆ ಮಿಶ್ರಣ ಮಾಡಿ. ಹಿಟ್ಟು ಸ್ವಲ್ಪ ಹಿಡಿಯಬೇಕು. ದಪ್ಪವಾಗಿ ಹಿಟ್ಟು ಹಿಡಿಯುವ ಅವಶ್ಯಕತೆ ಇಲ್ಲ. ಅನಂತರ ಒಲೆ ಮೇಲೆ ಎಣ್ಣೆ ಇಟ್ಟು ಕಾಯಲು ಬಿಡಿ. ಹಾಗೆ ಉರಿ ಜಾಸ್ತಿ ಇಟ್ಟು ಈ ಆಲೂಗಡ್ಡೆಯನ್ನು ಹಾಕಿ ಕರಿದುಕೊಳ್ಳಿ.
ಇದನ್ನು ಒಟ್ಟು 5ರಿಂದ 7 ನಿಮಿಷಗಳ ಕಾಲ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಫ್ರೆಂಚ್ ಫ್ರೈಸ್ ಸಿದ್ದವಾಗುತ್ತೆ. ಅನಂತರ ಇದನ್ನು ಬೌಲ್‌ಗೆ ಹಾಕಿ ಖಾರದ ಪುಡಿಯನ್ನು ಹರಡಿಕೊಂಡರೆ ಸವಿಯಲು ನಿಮಗೆ ಫ್ರೆಂಚ್ ಫ್ರೈಸ್ ಸಿದ್ದವಾಗುತ್ತೆ. ಉಪ್ಪು ಕಡಿಮೆ ಎನಿಸಿದರೆ ಖಾರದ ಪುಡಿಯೊಂದಿಗೆ ಉಪ್ಪು ಸೇರಿಸಿಕೊಂಡರೆ ರುಚಿ ದುಪ್ಪಟ್ಟಾಗುತ್ತೆ. ಕ್ರಿಸ್ಪಿಯಾಗಿ ಬೇಕಿದ್ದರೆ ಹೆಚ್ಚು ಸಮಯ ಕರಿಬೇಕಾಗುತ್ತದೆ. ಹಾಗೆ ಕಡಿಮೆ ಸಮಯ ಕರಿದುಕೊಂಡರೆ ಬಹಳ ಮೃದುವಾಗಿ ಬರಲಿದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications

