Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ದಿನ ಈ ಚಟ್ನಿ ತಿಂದ್ರೆ ಶುಗರ್ ಬರಲ್ಲ, ತೂಕ ಹೆಚ್ಚಾಗಲ್ಲ! 5 ನಿಮಿಷದಲ್ಲಿ ಮಾಡಿ ಮುಗಿಸಿ!
ಊಟ-ತಿಂಡಿಯೊಂದಿಗೆ ನೀವು ಸವಿಯಲು ಚಟ್ನಿ, ಸಾಂಬಾರ್, ಪಲ್ಯ, ಹಾಗೆ ಹಲವು ಬಗೆ ಖಾದ್ಯಗಳ ಸವಿಯೋದು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಆರೋಗ್ಯಕರವಾಗಿಯೂ ಹಾಗೆ ದೇಹಕ್ಕೆ ಉತ್ತಮ ವಿಟಮಿನ್ ಹಾಗೆ ಪೋಷಕಾಂಶ ನೀಡುವಂತಹ ರುಚಿ ರುಚಿಯ ಚಟ್ನಿಗಳ ಮಾಡಿ ಸವಿಯುವುದು ಎಲ್ಲರಿಗೂ ಇಷ್ಟ. ಹಾಗೆ ಆರೋಗ್ಯಕರ ತಿಂಡಿಗಳು ಅಂದ್ರೆ ಕಾಳು ಪಲ್ಯಗಳು ಎನ್ನಬಹುದು.
ನಾವಿಂದು ಉತ್ತರ ಕರ್ನಾಟಕ ಭಾಗದಲ್ಲಿ ಯಾವಾಗಲು ಮಾಡುವಂತಹ ಅಗಸೆ ಬೀಜದ ಚಟ್ನಿ ಕುರಿತು ತಿಳಿದುಕೊಳ್ಳೋಣ. ಈ ಚಟ್ನಿ ನಿಮ್ಮ ಆರೋಗ್ಯ ವೃದ್ಧಿಯ ಜೊತೆಗೆ ನಿಮ್ಮ ನಾಲಗೆ ರುಚಿಯನ್ನು ಹೆಚ್ಚಿಸಲಿದೆ. ಅಗಸೆ ಬೀಜದಲ್ಲಿ ಒಮೆಗಾ 3 ಕೊಬ್ಬನಾಮ್ಲ, ಫೈಬರ್ ಹೊಂದಿದೆ ಇದು ನಿಮ್ಮ ಆರೋಗ್ಯಕ್ಕೆ ಬಹಳ ಪ್ರಮುಖ ಅಂಶಗಳ ನೀಡಲಿವೆ.

ಅಗಸೆ ಬೀಜದಿಂದ ಹಲವು ರೀತಿಯ ಖಾದ್ಯಗಳ ಮಾಡಬಹುದು. ಆದ್ರೆ ನಾವಿಂದು ಅಗಸೆ ಬೀಜದ ಚಟ್ನಿ ಮಾಡುವ ಕುರಿತು ತಿಳಿಯೋಣ. ಈ ಚಟ್ನಿ ನಿತ್ಯವು ಸವಿದರೆ ಶುಗರ್, ಅಧಿಕ ರಕ್ತದೊತ್ತಡ, ಬೊಜ್ಜು ಕರಗಿಸಲು ತೂಕ ಇಳಿಸಲು ಕೂಡ ನಿಮಗೆ ನೆರವಾಗಲಿದೆ. ಹಾಗಾದ್ರೆ ಈ ಅಗಸೆ ಬೀಜದಿಂದ ಇಷ್ಟೆಲ್ಲಾ ಪ್ರಯೋಜನವಿದ್ದು, ಈ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಅಗಸೆ ಬೀಜದ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಗಸೆ ಬೀಜದ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಗಸೆ ಬೀಜ
- ಒಣ ಮೆಣಸು
- ಖರ್ಜೂರ
- ಕರಿಬೇವು
- ಹುಣಸೆ ಹುಳಿ
- ಜೀರಿಗೆ
- ಉಪ್ಪು
- ಇಂಗು
ಅಗಸೆ ಬೀಜದ ಚಟ್ನಿ ಮಾಡುವುದು ಹೇಗೆ?
ಈಗ ಬಾಣಲೆಯನ್ನು ಒಲೆ ಮೇಲೆ ಇಟ್ಟು, ಅಗಸೆ ಬೀಜ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಇದು ಸಿಡಿಯಲು ಆರಂಭಿಸಿದಾಗ ತೆಗೆದು ತಟ್ಟೆಗೆ ಹಾಕಿಡಿ. ಈಗ ಅದೇ ಬಾಣಲೆಗೆ ಒಣ ಮೆಣಸು, ಕರಿಬೇವು, ಹುಣಸೆ ಹುಳಿ, ಜೀರಿಗೆ ಹಾಕಿ ರೋಸ್ಟ್ ಮಾಡಿ. ನಂತರ ಇದನ್ನು ಕೂಡ ಅಗಸೆ ಬೀಜದೊಂದಿಗೆ ಹಾಕಿಡಿ.
ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಹಾಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದುಕೊಂಡ ಎಲ್ಲಾ ಪದಾರ್ಥಗಳನ್ನು ಕೂಡ ಹಾಕಿಕೊಳ್ಳಿ. ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಖರ್ಜುರ ಹಾಕಿಕೊಳ್ಳಿ. ಡ್ರೈ ಖರ್ಜೂರ ಅಂಗಡಿಗಳಲ್ಲಿ ಸಿಗುತ್ತವೆ, ಇವು ಆರೋಗ್ಯಕ್ಕೆ ಬಹಳ ಉತ್ತಮ ಈ ಚಟ್ನಿ ಮಾಡುವಾಗ ಬೀಜ ತೆಗೆದ 2ರಿಂದ 3 ಖರ್ಜೂರ ಬಳಸಿ.
ಇದನ್ನು ಪುಡಿ ಪುಡಿಯಾಗಿ ರುಬ್ಬಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಅಗಸೆ ಬೀದ ಚಟ್ನಿ ರೆಡಿಯಾಗುತ್ತೆ, ಊಟದೊಂದಿಗೆ, ತಿಂಡಿಯೊಂದಿಗೆ ಇದನ್ನು ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ಈ ಚಟ್ನಿಯನ್ನು ನೀವು ತಿಂಡಿ, ಊಟದೊಂದಿಗೆ ಸವಯಲು ನೀವು ಬಳಸಬಹುದು. ಒಂದಿಷ್ಟು ದಿನಗಳ ಕಾಲ ಸಂಗ್ರಹಿಸಿ ಕೂಡ ಸವಿಯಬಹುದು. ನೀವು ಕೂಡ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ. ಈ ಅಗಸೆ ಬೀಜಗಳು ಬಹಳ ತಂಪು ತರಲಿವೆ. ಹಾಗೆ ತೂಕ ಇಳಿಸಲು ಶುಗರ್ ಮಟ್ಟ ನಿಯಂತ್ರಣದಲ್ಲಿಡಲು ಇದು ನಿಮ್ಮ ನೆರವಿಗೆ ಬರಲಿದೆ.
ಮಕ್ಕಳಿಗೂ ಕೂಡ ಈ ಚಟ್ನಿ ಪುಡಿ ಇಷ್ಟವಾಗುತ್ತೆ. ಹಾಗಾದ್ರೆ ಇದನ್ನು ನೀವು ಸಹ ಮಾಡಿ ಸವಿದು ನೋಡಿ. ಒಮ್ಮೆ ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ.



Click it and Unblock the Notifications
