Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮನೆಯಲ್ಲೇ ಫಿಲ್ಟರ್ ಕಾಫಿ ಮಾಡುವುದು ಹೇಗೆ? ಇದು ಸುಲಭದ ವಿಧಾನ
ಮೊದ ಮೊದಲು ಅಡುಗೆ ಕಲಿಯುವವರು ಆರಂಭಿಸೋದೆ ಟೀ-ಕಾಫಿ ಮಾಡುವ ಮೂಲಕ ಸುಲಭವಾಗಿ ಎಲ್ಲರು ಟೀ-ಕಾಫಿ ಮಾಡುವ ವಿಧಾನ ಕಂಡುಹಿಡಿದುಕೊಂಡಿರುತ್ತಾರೆ. ಟೀ ಕಾಫಿ ಮಾಡೋದು ತುಂಬಾ ದೊಡ್ಡ ಕೆಲಸವೇನಲ್ಲ. ಆದ್ರೆ ಕೆಲವರು ಟೀ ಕಾಫಿ ರುಚಿಯಾಗಿ ಮಾಡುವುದನ್ನ ವರ್ಷಗಳಾದರು ಕಲಿತಿರುವುದಿಲ್ಲ.
ಇತ್ತ ಟಿ ಮತ್ತು ಕಾಫಿ ಬಹುತೇಕ ಎಲ್ಲರು ಕುಡಿಯುತ್ತಾರೆ, ಅದರಲ್ಲೂ ಟೀ ಪ್ರೇಮಿಗಳು ಎಲ್ಲೆಡೆ ಸಿಗುತ್ತಾರೆ. ಗಂಡೆಗೊಮ್ಮೆ ಟೀ ಕುಡಿಯದಿದ್ದರೆ ಕೆಲವರಿಗೆ ಸಮಾಧಾನವೇ ಆಗುವುದಿಲ್ಲ. ಇನ್ನು ಕಾಫಿಯ ವಿಚಾರಕ್ಕೆ ಬಂದರೆ ಕಾಫಿ ಬೀಜಗಳ ಪುಡಿ ಮಾಡಿ ಮನೆಯಲ್ಲಿ ಸುಗಂದ ಭರಿತ ಕಾಫೀ ಮಾಡುತ್ತಾರೆ.

ಕೆಲವರು ಮನೆಯಲ್ಲೇ ಬೆಳೆದ ಕಾಫಿಯಿಂದ ಪುಡಿ ಮಾಡಿಸಿಕೊಂಡು ಬಂದರೆ ಬಹುತೇಕ ಮಂದಿ ಅಂಗಡಿಯಲ್ಲಿ ಸಿಗುವ ಕಾಫಿ ಪುಡಿ ತಂದು ಕಾಫಿ ಮಾಡುತ್ತಾರೆ. ಈಗಂತು ಇನ್ಸ್ಸ್ಟಂಟ್ ಕಾಫಿ ಪೌಡರ್ಗಳು ಸಿಗುತ್ತವೆ. ಇನ್ನು ಮಳೆಗಾಲದ ದಿನದಲ್ಲಿ ಕಾಫಿಗೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ. ಏಕೆಂದರೆ ತಣ್ಣಗಿರುವ ವಾತಾವರಣದಲ್ಲಿ ಕಾಫಿ ಬೆಚ್ಚಗಿನ ಅನುಭವ ನೀಡಲಿದೆ.
ಇನ್ನು ಫಿಲ್ಟರ್ ಕಾಪಿಗಂತು ಇನ್ನಿಲ್ಲದ ಬೇಡಿಕೆ ಇರುತ್ತದೆ. ಅಂಗಡಿಗಳಲ್ಲಿ ಫಿಲ್ಟರ್ ಕಾಫಿಗೆ ನೂರಾರು ರೂಪಾಯಿ ನೀಡಿ ಕುಡಿಯಬೇಕಾಗುತ್ತದೆ. ಆದರೆ ನೀವು ಮನೆಯಲ್ಲೇ ಸಿಂಪಲ್ ಆಗಿ ಈ ಫಿಲ್ಟರ್ ಕಾಫಿಯ ರುಚಿ ನೋಡಬಹುದಾಗಿದೆ. ಹಾಗಾದ್ರೆ ಮನೆಯಲ್ಲಿ ಫಿಲ್ಡರ್ ಕಾಫಿ ಮಾಡುವುದು ಹೇಗೆ? ಫಿಲ್ಟರ್ ಕಾಫಿ ಮಾಡಲು ಬೇಕಾಗುವ ಪದಾರ್ಥಗಳು ಏನು? ಫಿಲ್ಟರ್ ಕಾಫಿ ಮಾಡುವ ವಿಧಾನ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಫಿಲ್ಟರ್ ಕಾಫಿ ಮಾಡಲು ಬೇಕಾಗುವ ಪದಾರ್ಥಗಳು
- ಕಾಫಿ ಪುಡಿ
- ಹಾಲು
- ಸಕ್ಕರೆ - 3 ಚಮಚ
- ನೀರು - 1/2 ಕಪ್
- ಕಾಫಿ ಮೇಕರ್
ಫಿಲ್ಟರ್ ಕಾಫಿ ಮಾಡುವುದು ಹೇಗೆ?
ಮೊದಲು ಫಿಲ್ಟರ್ ಕಾಫಿ ಮಾಡಲು ಕಾಫಿ ಮೇಕರ್ ಬೇಕಾಗುತ್ತದೆ. ಕಾಫಿ ಮೇಕರ್ಗಳು ಆನ್ಲೈನ್ನಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಕೇವಲ 500 ರೂಪಾಯಿಗೆ ಅತ್ಯುತ್ತಮ ಕಾಫಿ ಮೇಕರ್ಗಳು ಸಿಗುತ್ತವೆ. ಸ್ಟೀಲ್ನ ಕಾಫಿ ಮೇಕರ್ ಇದ್ದರೆ ಉತ್ತಮ. ಈ ಕಾಫಿ ಮೇಕರ್ ಒಳಗೆ ಎರಡು ಚಮಚ ಕಾಫಿ ಪೌಡರ್ ಹಾಕಿ ಅದನ್ನು ಒಂದು ಮುಚ್ಚಳದಿಂದ ಒತ್ತಿ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಒಲೆ ಮೇಲೆ ಇಡಿ. ಆ ನೀರು ಬೆಚ್ಚಗಾಗಲು ಬಿಡಿ.
ಬೆಚ್ಚಗಾಗಿರುವ ನೀರನ್ನು ಕಾಫಿ ಮೇಕರ್ ಒಳಗೆ ಹಾಕಿ ಅದರ ಮುಚ್ಚಳ ಮುಚ್ಚಿ. ನೀವು ಎಷ್ಟು ಪ್ರಮಾಣದಲ್ಲಿ ನೀರು ಹಾಕುತ್ತೀರೋ ಅಷ್ಟು ಸ್ಟ್ರಾಂಗ್ ಕಾಫಿ ಮಾಡಬಹುದು. ಅಂದರೆ ಕಡಿಮೆ ನೀರು ಹಾಕಿದರೆ ಕಾಫಿ ಸ್ಟ್ರಾಂಗ್ ಆಗಲಿದೆ. ಕಡಿಮೆ ನೀರು ಹಾಕಿದರೆ ಕಾಫಿ ತೆಳುವಾಗುತ್ತದೆ.
ಬಳಿಕ ಒಂದು ಪಾತ್ರೆಯಲ್ಲಿ ಸ್ವಲ್ಪ ಹಾಲು ಹಾಕಿ ಒಲೆ ಮೇಲೆ ಇಡಿ. ಅದಕ್ಕೆ ಸಕ್ಕರೆ ಹಾಕಿಕೊಂಡಿ ಕುದಿಯಲು ಬಿಡಿ. ಹಾಲು ಕುದಿಯುತ್ತಿರುವಾಗ ಕಾಫಿ ಮೇಕರ್ನಲ್ಲಿರು ಡಿಕಾಕ್ಷನ್ ಅನ್ನು ತೆಗೆದು ಒಂದು ಲೋಟಕ್ಕೆ ಹಾಕಿಕೊಂಡು ಅದಕ್ಕೆ ಕುದಿಯುತ್ತಿರುವ ಹಾಲು ಹಾಕಿಕೊಳ್ಳಿ. ಒಂದೆರಡು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೋಟೆಲ್ ರುಚಿಯ ಫಿಲ್ಟರ್ ಕಾಫಿ ರೆಡಿಯಾಗುತ್ತದೆ. ಈ ಡಿಕಾಕ್ಷನ್ ತುಂಬಾ ಗೊತ್ತು ಇಟ್ಟು ಆಗಾಗ ಹಾಲು ಬಿಸಿ ಮಾಡಿಕೊಳ್ಳುತ್ತಾ ಸವಿಯಬಹುದು. ಇದಕ್ಕೆ ಯಾವ ಬೇರೆ ವಸ್ತುಗಳನ್ನು, ಮಸಾಲೆಯನ್ನು ಮಿಕ್ಸ್ ಮಾಡದೆ ಸವಿದರೆ ರುಚಿ ದುಪ್ಪಟ್ಟಾಗುತ್ತದೆ. ಬಿಸಿ ಬಿಸಿ ಕಾಫಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.



Click it and Unblock the Notifications
