Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದೇಹಕ್ಕೆ ತಂಪು ನೀಡುವ ಮೆಂತ್ಯ ದೋಸೆ: ಮಾಡುವ ವಿಧಾನವಿದು!
ನೀವು ಬೆಳಗ್ಗೆ ತಿಂಡಿಗೆ ಹಲವು ರೀತಿಯ ಖಾದ್ಯ ಮಾಡುತ್ತೀರಿ. ಅದರಲ್ಲೂ ಎಲ್ಲರಿಗೂ ಇಷ್ಟವಾಗುವಂತಹ ದೋಸೆ ಮಾಡಿ ಸವಿಯೋದು ಅಂದ್ರೆ ಬಹಳ ಇಷ್ಟವಾಗುತ್ತೆ. ನೀವು ದೋಸೆಯಲ್ಲಿ ಹತ್ತು ಹಲವು ರೀತಿಯ ಬಗೆ ನೋಡಿರಬಹುದು. ಮನೆ ಮಂದಿ ಎಲ್ಲಾ ಕುಳಿತು ಸವಿಯುವಂತಹ ಹಲವು ಬಗೆಯ ದೋಸೆಗಳನ್ನು ನೀವು ಸಹ ಮಾಡಿರುತ್ತೀರಿ. ಹಾಗೆ ಹೋಟೆಲ್ನಲ್ಲಿ, ರಸ್ತೆ ಬದಿಯಲ್ಲೂ ಕೂಡ ರುಚಿ ರುಚಿಯ ದೋಸೆಯನ್ನು ನೀವು ಸವಿದಿರುತ್ತೀರಿ.
ಅಂತಗ ಬಗೆ ಬಗೆಯ ದೋಸೆಗಳಲ್ಲಿ ನಾವಿಂದು ಸುಲಭವಾಗಿ ಮಾಡಬಹುದಾದ ಹಾಗೆ ಬೇಸಿಗೆಯಲ್ಲಿ ನಿಮಗೆ ತಂಪು ತರುವಂತಹ ಮೆಂತೆ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಮೆಂತ್ಯ ಅಥವಾ ಮೆಂತೆ ನಿಮ್ಮ ದೇಹಕ್ಕೆ ಎಷ್ಟು ತಂಪು ಕಾರಕ ಎಂಬುದನ್ನು ನೀವು ಸಹ ತಿಳಿದಿರುತ್ತೀರಿ. ಇದರಿಂದ ಬಹಳ ಸುಲಭವಾಗಿ ಹಲವು ಖಾದ್ಯಗಳ ಮಾಡಿರುತ್ತೀರಿ.

ನಿಮ್ಮ ದೈನಂದಿನ ಆಹಾರದಲ್ಲಿ ಮೆಂತ್ಯ ಬಳಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಹೀಗಾಗಿ ಕೆಲವು ಔಷಧಿಗಳಲ್ಲಿಯೂ ನಾವು ಮೆಂತ್ಯ ಬಳಸುವುದು ನೋಡಬಹುದು. ನಾವಿಂದು ಇಂತಹ ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿರುವ ಈ ಮೆಂತ್ಯದಿಂದ ಮಾಡುವ ದೋಸೆಯ ಕುರಿತು ತಿಳಿಯೋಣ. ನಿಮ್ಮ ದೇಹಕ್ಕೆ ಬಹಳ ಉತ್ತಮ.
ಹಾಗಾದ್ರೆ ನಾವಿಂದು ಈ ರುಚಿ ರುಚಿಯ ಮೆಂತ್ಯ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ದೋಸೆ ಮಾಡುವಾಗ ಮೆಂತ್ಯ ಬಳಸುತ್ತಾರೆ. ಆದ್ರೆ ನಾವಿಂದು ವಿಶೇಷ ರೀತಿಯಲ್ಲಿ ಈ ದೋಸೆ ಮಾಡಿ ನೋಡೋಣ. ಈ ಮೆಂತ್ಯ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೆಂತ್ಯ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
ಅಕ್ಕಿ - 1 ಕಪ್
ಉದ್ದಿನ ಬೇಳೆ
ಮೆಂತ್ಯ
ಹರಳು ಉಪ್ಪು
ಎಣ್ಣೆ
ಮೆಂತ್ಯ ದೋಸೆ ಮಾಡುವ ವಿಧಾನ
ಮೊದಲು ಅಕ್ಕಿ, ಮೆಂತ್ಯ, ಉದ್ದಿನ ಬೇಳೆಯನ್ನು ತೊಳೆದು ಬೇರೆ ಬೇರೆಯಾಗಿ ನೆನೆಸಿಡಬೇಕು. 1 ಕಪ್ ಅಕ್ಕಿಗೆ 2 ಸ್ಪೂನ್ ಉದ್ದು, ಹಾಗೆ 2 ಸ್ಪೂನ್ ಮೆಂತ್ಯ ಬಳಸಿ. ಹೀಗೆ 6 ಗಂಟೆ ನೆನೆಸಿಟ್ಟ ಬಳಿಕ ನೀರು ಬಸಿದು ಇಟ್ಟುಕೊಳ್ಳಿ. ಮಾರನೆ ದಿನ ಮೂರು ವಸ್ತುಗಳನ್ನು ಕೂಡ ಬೇರೆ ಬೇರೆಯಾಗಿ ರುಬ್ಬಿಕೊಂಡು ಒಂದು ದೊಡ್ಡ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹೀಗೆ ಮಿಕ್ಸ್ ಮಾಡುವಾಗ ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ.
ಈ ಹಿಟ್ಟನ್ನು ಮುಚ್ಚಳ ಮುಚ್ಚಿ 1 ರಾತ್ರಿ ಸಂಪೂರ್ಣ ಹದ ಬರಲು ಬಿಡಿ. ಈಗ ಬೇಕಾದರೆ ನೀವು ಚಿಟಿಕೆಯಷ್ಟು ಸೋಡಾ ಹಾಕಿಕೊಳ್ಳಬಹುದು, ಇಲ್ಲವೆ ಬಳಸದೆಯೂ ಇರಬಹುದು. ಈಗ ಕೈಯಿಂದ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಾಗೆ ಕಾವಲಿ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಚೆನ್ನಾಗಿ ಕಾಯಲು ಬಿಡಿ.
ಕಾವಲಿ ಕಾದ ಬಳಕ ಹಿಟ್ಟನ್ನು ಹಾಕಿಕೊಂಡು ಒಂದು ಭಾಗ ಮಾತ್ರವೇ ಬೇಯಲು ಬಿಡಿ. ಈ ದೋಸೆಯನ್ನು ಎರಡು ಕಡೆ ಕಾಯಿಸುವುದು ಬೇಡ. ಒಂದು ಕಡೆ ಚೆನ್ನಾಗಿ ಕಾದ ಬಳಿಕ ಒಲೆ ಆಫ್ ಮಾಡಿಕೊಂಡರೆ ಸಾಕಾಗುತ್ತದೆ. ನಿಮ್ಮ ಮುಂದೆ ರುಚಿ ರುಚಿಯ ಮೃದುವಾದ ಮೆಂತ್ಯ ದೋಸೆ ರೆಡಿಯಾಗುತ್ತದೆ. ಇದಕ್ಕೆ ನೀವು ಮೆಂತ್ಯವನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬಳಸಬಹುದು. ಆದ್ರೆ ಹೆಚ್ಚು ಮೆಂತ್ಯ ಬಳಸಿದರೆ ಹಿಟ್ಟು ಕಹಿ ಬರುವ ಸಾಧ್ಯತೆಯೂ ಇರಲಿದೆ. ಹೀಗಾಗಿ ಅಳತೆ ಸರಿಯಾಗಿ ಮಾಡಿಕೊಳ್ಳಿ. ಈ ದೋಸೆ ದೇಹಕ್ಕೆ ಬಹಳ ತಂಪು ನೀಡಲಿದೆ.



Click it and Unblock the Notifications
