Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಿ ರುಚಿಗೆ ಮಾಡಿ ಆಲೂಗಡ್ಡೆ ಮೆಂತ್ಯ ಸೊಪ್ಪಿನ ಪರೋಟ...ಹೇಗೆ ಮಾಡೋದು ನೋಡಿ?
ಅಪರೂಪಕ್ಕೆ ಹಾಗೆ ವಿಶಿಷ್ಟ ಸಮಯದಲ್ಲಿ ಮಾಡಿ ಸವಿಯುವ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ನಿತ್ಯವೂ ಒಂದೇ ರೀತಿಯ ಬ್ರೇಕ್ ಫಾಸ್ಟ್ ಮಾಡಿ ನಿಮಗೂ ಬೇಸರ ತರಿಸಿದ್ದರೆ ಹೊಸ ರೀತಿಯ ಖಾದ್ಯ ಸವಿದು ನೋಡಲು ಮುಂದಾಗುವುದು ಕಾಮನ್. ಇಂತಹ ರುಚಿ ರುಚಿಯ ಖಾದ್ಯಗಳ ಸಾಲಿನಲ್ಲಿ ನಾವಿಂದು ಅಪರೂಪದ ಪರೋಟ ಮಾಡುವ ಕುರಿತಾಗಿ ತಿಳಿಯೋಣ.
ಸಾಮಾನ್ಯವಾಗಿ ವಿಶೇಷ ಸಮಯದಲ್ಲಿ ಮಾತ್ರ ಪರೋಟ ಮಾಡೋದು ನೋಡಬಹುದು. ಅದ್ರಲ್ಲೂ ಈ ರೀತಿ ಆಲೂಗಡ್ಡೆ ಮೆಂತ್ಯ ಸೊಪ್ಪಿನ ಪರೋಟ ಸವಿಯಲು ಬಹಳ ರುಚಿಕರವಾಗಿರಲಿದೆ. ಬ್ರೇಕ್ಫಾಸ್ಟ್ಗೆ ಈ ಪರೋಟ ಮಾಡಿದ್ರೆ ಎಲ್ಲರಿಗೂ ಇಷ್ಟವಾಗೋದು ಖಚಿತ. ಅದ್ರಲ್ಲೂ ನಾವಿಂದು ಸುಲಭವಾಗಿ ಮಾಡುವಂತಹ ಈ ಪರೋಟ ಕುರಿತು ತಿಳಿಯೋಣ.

ಈ ಪರೋಟ ಮೃದುವಾಗಿ ಸವಿಯಲು ಬಹಳ ರುಚಿಕರವಾಗಿರಲಿದೆ. ಹೀಗಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇದು ಬಹಳ ಇಷ್ಟವಾಗುತ್ತೆ. ಹಾಗಾದ್ರೆ ಆಲೂಗಡ್ಡೆ ಮೆಂತ್ಯ ಪರೋಟ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂಗಡ್ಡೆ ಪರೋಟ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ
- ಮೆಂತ್ಯ ಸೊಪ್ಪು
- ಗೋಧಿ ಹಿಟ್ಟು
- ಉಪ್ಪು
- ಎಣ್ಣೆ
- ಜೀರಿಗೆ
- ಕರಿಬೇವು
- ಇಂಗು
- ಈರುಳ್ಳಿ
- ಅರಿಶಿನ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಜೀರಿಗೆ ಪುಡಿ
- ಕೊತ್ತಂಬರಿ ಪುಡಿ
- ಕೆಂಪು ಮೆಣಸಿನ ಪುಡಿ
- ಗರಂ ಮಸಾಲ ಪುಡಿ
- ಚಾಟ್ ಮಸಾಲ ಪುಡಿ
- ಕೊತ್ತಂಬರಿ ಸೊಪ್ಪು
- ತುಪ್ಪ
- ಬೆಣ್ಣೆ
ಆಲೂಗಡ್ಡೆ ಪರೋಟ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ಗೆ 3ರಿಂದ 4 ಆಲೂಗಡ್ಡೆಯನ್ನು ಹಾಕಿಕೊಂಡು ಮುಳುಗುವಷ್ಟು ನೀರು ಹಾಕಿ 4 ಸೀಟಿ ಹೊಡೆಯಲು ಬಿಡಿ. ಈಗ ಒಂದು ಪಾತ್ರೆಯಲ್ಲಿ 2 ಕಪ್ ಗೋಧಿ ಹಿಟ್ಟು ಹಾಕಿ, ಅದಕ್ಕೆ ಉಪ್ಪು, 1 ಸ್ಪೂನ್ ಎಣ್ಣೆ ಹಾಕಿ ಕೈಯಿಂದ ಚೆನ್ನಾಗಿ ಡ್ರೈ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಹಿಟ್ಟು ಹದ ಮಾಡಿಕೊಳ್ಳಿ. ಹಿಟ್ಟು ಚಪಾತಿಯಂತೆ ಗಟ್ಟಿಯಾಗಿ ಬರಬೇಕು. ನಂತರ 30 ನಿಮಿಷ ತಟ್ಟೆ ಮುಚ್ಚಿ ಹಿಟ್ಟನ್ನು ಹಾಗೆಯೇ ಬಿಡಿ.
ಇನ್ನೊಂದು ಕಡೆ ಬೇಯಿಸಿಕೊಂಡಿರುವ ಆಲೂಗಡ್ಡೆಯ ಸಿಪ್ಪೆ ತೆಗೆದು ಅದನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಪಾತ್ರೆಗೆ ಹಾಕಿಕೊಳ್ಳಿ. ಇನ್ನೊಂದು ಕಡೆ ಮೆಂತ್ಯ ಸೊಪ್ಪನ್ನು ಕೂಡ ತೊಳೆದು ಸಣ್ಣದಾಗಿ ಹೆಚ್ಚಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಜೀರಿಗೆ, ಕರಿಬೇವು, ಇಂಗು, 2 ಸಣ್ಣ ಈರುಳ್ಳಿ ಹೆಚ್ಚಿ ಇದಕ್ಕೆ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ. ಬಳಿಕ ಅರಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿಕೊಂಡು ಫ್ರೈ ಮಾಡಿ.
ಈಗ ಹೆಚ್ಚಿಕೊಂಡಿರುವ ಮೆಂತ್ಯ ಸೊಪ್ಪನ್ನು ಸಹ ಈ ಬಾಣಲೆಗೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಇದಕ್ಕೆ ಜೀರಿಗೆ ಪುಡಿ, ದನಿಯಾ ಪುಡಿ, ಉಪ್ಪು, ಖಾರದ ಪುಡಿ, ಗರಂ ಮಸಾಲ ಪುಡಿ, ಚಾಟ್ ಮಸಾಲ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಪುಡಿ ಮಾಡಿಕೊಂಡಿರುವ ಆಲೂಗಡ್ಡೆ ಹಾಗೂ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. 2 ನಿಮಿಷ ಫ್ರೈ ಆದರೆ ಸಾಕಾಗುತ್ತದೆ.
ಈಗ ಒಲೆ ಆಫ್ ಮಾಡಿ ಈ ಮಸಾಲೆಯನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಹದವಾಗಿರುವ ಹಿಟ್ಟನ್ನು ತೆಗೆದುಕೊಂಡು ಮತ್ತೆ ಒತ್ತಿಕೊಂಡು 2 ನಿಮಿಷ ಮಿಕ್ಸ್ ಮಾಡಿ. ಚಪಾತಿ ಮಾಡುವಂತೆ ಉಂಡೆ ತೆಗೆದುಕೊಂಡು ಒಣ ಹಿಟ್ಟಿನಲ್ಲಿ ಅದ್ದಿ ಪೂರಿಯಂತೆ ಲಟ್ಟಿಸಬೇಕು. ಮಧ್ಯದಲ್ಲಿ ಮಸಾಲೆಗಳನ್ನು ಹಾಕಿ ಸ್ವಲ್ಪ ಅದನ್ನು ಕೂಡ ತಟ್ಟಿಕೊಂಡು ಮತ್ತೆ ಉಂಡೆ ಕಟ್ಟಿಕೊಂಡು ತೆಳ್ಳಗೆ ಲಟ್ಟಿಸಿಕೊಳ್ಳಿ.
ಈಗ ಕಾವಲಿ ಒಲೆ ಮೇಲೆ ಇಟ್ಟು ತುಪ್ಪ ಅಥವಾ ಎಣ್ಣೆ ಹಚ್ಚಿ ಬಿಸಿಯಾದ ಬಳಿಕ ಈ ಪರೋಟವನ್ನು ಹಾಕಿ ಬೇಯಿಸಿಕೊಳ್ಳಿ. ಎರಡು ಕಡೆಯೂ ಚೆನ್ನಾಗಿ ಬೇಯಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ಪರೋಟ ರೆಡಿಯಾಗುತ್ತದೆ.



Click it and Unblock the Notifications
