Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೈಲಾರಿ ಹೋಟೆಲ್ ದೋಸೆ ಸವಿದಿದ್ದೀರಾ? ಮಾಡುವ ವಿಧಾನವಿದು!
ಬ್ರೇಕ್‌ಫಾಸ್ಟ್‌ಗೆ ನೀವು ಹಲವು ರೀತಿಯ ತಿಂಡಿಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ದೋಸೆ ಅಂದ್ರೆ ಎಲ್ಲರಿಗೂ ಬಹಳ ಇಷ್ಟವಾಗುತ್ತೆ. ದೋಸೆ ಸವಿಯಲು ಹೋಟೆಲ್ ಮುಂದೆ ಕ್ಯಾಂಟೀನ್‌ಗಳ ಮುಂದೆ ಸಾಲಿನಲ್ಲಿ ಜನರು ನಿಂತಿರುತ್ತಾರೆ. ಕೆಲವೊಂದು ಹೋಟೆಲ್‌ಗಳು ಕೇವಲ ದೋಸೆಯನ್ನಷ್ಟೇ ಮಾಡಿ ಫೇಮಸ್ ಆಗಿರುವುದು ಕೂಡ ನೋಡಬಹುದು. ದೋಸೆ ಅಂದ್ರೆ ಎಲ್ಲರಿಗೂ ಇಷ್ಟವಾಗೋದು ಸಾಮಾನ್ಯ.
ಹಾಗೆ ನೀವು ಮಸಾಲೆ ದೋಸೆ, ಈರುಳ್ಳಿ ದೋಸೆ, ರವೆ ದೋಸೆ, ಸೆಟ್ ದೋಸೆ, ಬೆಣ್ಣೆ ದೋಸೆ, ಅವಲಕ್ಕಿ ದೋಸೆ ಹೀಗೆ ಹತ್ತು ಹಲವು ಪ್ರಕಾರ ದೋಸೆಗಳ ಮಾಡಿ ಸವಿದಿರುವುದು ನೋಡಬಹುದು. ಹಾಗೆ ಮನೆಯಲ್ಲೂ ಕೂಡ ನಾವು ಅದ್ಭುತ ರುಚಿಯ ದೋಸೆ ಮಾಡಿರುತ್ತೀರಿ. ಹಾಗೆ ಹೋಟೆಲ್ ರುಚಿಯ ದೋಸೆಯಲ್ಲಿ ಹಲವು ವಿಧಗಳಿವೆ.

ಇನ್ನು ನಾವು ಈ ದೋಸೆಗಳಲ್ಲಿ ವಿಶೇಷ ಎನಿಸುವಂತಹ ಮೈಲಾರಿ ದೋಸೆ ಹೋಟೆಲ್ ಸವಿದು ನೋಡೋಣ. ಮೈಲಾರಿ ಹೋಟೆಲ್ ದೋಸೆ ಅಂದ್ರೆ ಎಲ್ಲಾ ಕಡೆಯೂ ಫೇಮಸ್. ಹಾಗೆ ಅದರ ರುಚಿ ನೀವು ಒಮ್ಮೆ ಸವಿದರೆ ಪದೇ ಪದೇ ಸವಿಯುತ್ತೀರಿ. ಹಾಗಾದ್ರೆ ಈ ಮೈಲಾರಿ ಹೋಟೆಲ್ ದೋಸೆ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೈಲಾರಿ ಹೋಟೆಲ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಮೈದಾ ಹಿಟ್ಟು
- ಅಕ್ಕಿ ಹಿಟ್ಟು
- ಉದ್ದಿನ ಬೇಳೆ
- ಉಪ್ಪು
- ಎಣ್ಣೆ
ಮೈಲಾರಿ ಹೋಟೆಲ್ ದೋಸೆ ಮಾಡುವುದು ಹೇಗೆ?
ಮೊದಲು ಒಂದು ಗ್ಲಾಸ್‌ನಲ್ಲಿ ಕುಸುಬಲಕ್ಕಿ ಅಥವಾ ಬಾಯ್ಲ್ಡ್ ರೈಸ್ ತೆಗೆದುಕೊಳ್ಳಿ. ಹಾಗೆ ಮತ್ತೊಂದು ಕಪ್‌ನಲ್ಲಿ ನಾರ್ಮಲ್ ಅಕ್ಕಿ ತೆಗೆದುಕೊಂಡು ಎರಡನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ನೀರು ಹಾಕಿ ನೆನೆಯಲು ಬಿಡಿ. ಈಗ ಮತ್ತೊಂದು ಪಾತ್ರೆಯಲ್ಲಿ ಉದ್ದಿನ ಬೇಳೆ ಹಾಕಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಬೇಕು.
ಹೀಗೆ ನೆನೆಸಿದ ಬಳಿಕ ಮಿಕ್ಸಿ ಜಾರ್‌ಗೆ ಉದ್ದಿನ ಬೇಳೆ ಹಾಕಿ ರುಬ್ಬಿಕೊಳ್ಳಿ. ನಂತರ ಹಿಟ್ಟನ್ನು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ನಂತರ ನೆನೆಸಿದ ಅಕ್ಕಿಯನ್ನು ಕೂಡ ರುಬ್ಬಕೊಳ್ಳಬೇಕು. ಬಹಳ ತೆಳುವಾಗಿ ಮಾಡಿಕೊಳ್ಳಬೇಡಿ. ಈಗ ಮಿಕ್ಸಿ ಜಾರ್‌ಗೆ ಕಾಲು ಕಪ್ ಅಕ್ಕಿ ಹಿಟ್ಟು, ಹಾಗೆ ಅರ್ಧ ಕಪ್ ಮೈದಾ ಹಿಟ್ಟು ಹಾಕಿ ನೀರು ಹಾಕಿ ರುಬ್ಬಿಕೊಂಡು ದೋಸೆ ಹಿಟ್ಟಿನ ಜೊತೆಗೆ ಸೇರಿಸಿಕೊಳ್ಳಿ.
4 ಹಿಟ್ಟುಗಳನ್ನು ಕೂಡ ಒಂದೇ ಪಾತ್ರೆಗೆ ಹಾಕಿಕೊಂಡು ಕೈಯಿಂದ 5 ನಿಮಿಷಗ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ರಾತ್ರಿ ಪೂರ್ತಿ ಇಡಬೇಕು. ಮಾರನೆ ದಿನ ಬೆಳಗ್ಗೆ ಈ ಹಿಟ್ಟಿಗೆ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಕಾವಲಿ ಒಲೆ ಮೇಲೆ ಇಟ್ಟು ಸಾಮಾನ್ಯ ದೋಸೆಯಂತೆಯೇ ಹಾಕಿಕೊಂಡು ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಮೈಲಾರಿ ಹೋಟೆಲ್ ದೋಸೆ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.
ಇದು ಬಹಳ ಮೃದುವಾದ ಹಾಗೆ ರುಚಿಯಾದ ಸ್ಪೆಷಲ್ ದೋಸೆಯಾಗಿರಲಿದೆ. ನೀವು ಕೂಡ ಮನೆಯಲ್ಲಿ ಈ ಮೈಲಾರಿ ಹೋಟೆಲ್‌ನ ಸ್ಪೆಷಲ್ ದೋಸೆ ಟ್ರೈ ಮಾಡಿ. ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಹೇಗೆ ಮಾಡಿದ್ದು ಅನ್ನೋ ಪ್ರಶ್ನೆ ಕೂಡ ಕೇಳಿಯೇ ಕೇಳ್ತಾರೆ.



Click it and Unblock the Notifications
