Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬದನೆಕಾಯಿ ಎಣ್ಣೆಗಾಯಿ ಹೀಗೆ ಟ್ರೈ ಮಾಡಿ ನೋಡಿ, ತಿಂದರವರು ನಿಮ್ಮ ಕೈರುಯಚಿ ಹೊಗಳದೆ ಇರಲ್ಲ
ಎಣ್ಣೆ ಬದನೆಕಾಯಿ ರುಚಿಗೆ ಮನಸೋಲದವರು ಯಾರಿದ್ದಾರೆ ಅಲ್ವಾ? ಚಪಾತಿ, ರೊಟ್ಟಿ, ಬಿಸಿ ಬಿಸಿ ಅನ್ನ ಇವುಗಳಿಗೆ ಎಣ್ಣೆ ಬದನೆಕಾಯಿ ಇದ್ದರೆ ನಾವು ಹೊಟ್ಟೆ ತುಂಬಿದರೂ ಒಂದುತುತ್ತು ಹೆಚ್ಚೇ ತಿನ್ನುತ್ತೇವೆ, ಅಷ್ಟೊಂದು ರುಚಿಯಾಗಿರುತ್ತದೆ. ಈ ಬದನೆಕಾಯಿ ಸಾರು ಹಲವಾರು ವಿಧಾನದಲ್ಲಿ ಮಾಡುತ್ತಾರೆ, ಆದರೆ ನಾವಿಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
1/4ಕಪ್ ನೆಲಗಡಲೆ
2 ಚಮಚ ಬಿಳಿ ಎಳ್ಳು
2 ಚಮಚ ಎಣ್ಣೆ
2 ಚಮಚ ಕಡ್ಲೆ ಬೇಳೆ
ಕೊತ್ತಂಬರಿ ಬೀಜ 1 ಚಮಚ
1/2 ಚಮಚ ಜೀರಿಗೆ
1/4 ಚಮಚ ಮೆಂತೆ
ಸ್ವಲ್ಪ ಒಣ ಮೆಣಸು
ಕರಿಬೇವು
ತೆಂಗಿನ ತುರಿ 1/2 ಕಪ್
ಸ್ವಲ್ಪ ಹುಣಸೆಹಣ್ಣು
ಸ್ವಲ್ಪ ಬೆಲ್ಲ
ಸ್ವಲ್ಪ ಅರಿಸಿನ
ರುಚಿಗೆ ತಕ್ಕ ಉಪ್ಪು
ಗ್ರೈಂಡ್ ಮಾಡಲು ಸ್ವಲ್ಪ ಉಪ್ಪು
ಬದನೆ 10-15(ಚಿಕ್ಕ ಬದನೆ)
ಎಣ್ಣೆ
ಸ್ವಲ್ಪ ಕರಿಬೇವು
1/2 ಕಪ್ ನೀರು
ಮಾಡುವ ವಿಧಾನ
ಈವು ನೆಲಗಡಲೆಯನ್ನು ರೋಸ್ಟ್ ಮಾಡಿ ತಟ್ಟೆಗೆ ಹಾಕಿ
ಅದೇ ರೀತಿ ಎಳ್ಳು ರೋಸ್ಟ್ ಮಾಡಿ
ಕಡ್ಲೆ ಬೇಳೆ ರೋಸ್ಟ್ ಮಾಡಿ
ಕೊತ್ತಂಬರಿ ಬೀಜ ಕೂಡ ಹುರಿಯಿರಿ.
ಜೀರಿಗೆ, ಮೆಂತೆ ಹುರಿಯಿರಿ
ಒಣ ಮೆಣಸು ಹುರಿಯಿರಿ
ತೆಂಗಿತುರಿಗೆ 1 ಚಮಚ ಎಣ್ಣೆ ಹಾಕಿ ಹುರಿಯಿರಿ
ಸ್ಟೆಪ್ 1
ಈಗ ನೀವು ರೋಸ್ಟ್ ಮಾಡಿದ ಸಾಮಗ್ರಿ, ತೆಂಗಿನ ತುರಿ, ಹುಣಸೆಹಣ್ಣು, ಉಪ್ಪು,
ಅರಿಶಿಣ ಪುಡಿ, ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ.
ಸ್ಟೆಪ್ 2
ಈಗ ನೀವು ಬದನೆಕಾಯಿ ತೊಟ್ಟು ತೆಗಿಯಬೇಡಿ, ಅದನ್ನು ಹಾಗೆಯೇ ಮುಕ್ಕಾಲು ಭಾಗ ಕತ್ತರಿಸಿ, ಏಕೆಂದರೆ ಮಸಾಲೆ ಅದರೊಳಗೆ ತುಂಬುವಂತೆ ಇರಬೇಕು
ಸ್ಟೆಪ್ 3
ಈಗ ನೀವು ರುಬ್ಬಿದ ಮಸಾಲೆಯನ್ನು ಎರಡು ಭಾಗ ಮಾಡಿ, ಒಂದು ಭಾಗ ಮಸಾಲೆಯನ್ನು
ಬದನೆಕಾಯಿ ಒಳಗಡೆ ತುಂಬಲು ಬಳಸಿ, ಎಲ್ಲಾ ಬದನೆಕಾಯಿ ಒಳಗಡೆ ತುಂಬಿ
ಸ್ಟೆಪ್ 4
ತವಾಗೆ 3-4 ಚಮಚ ಎಣ್ಣೆ ಹಾಕಿ ಅದರಲ್ಲಿ ಬದನೆಕಾಯಿ ಇಟ್ಟು ರೋಸ್ಟ್ ಮಾಡಿ
ಸ್ಟೆಪ್ 5
ಈಗ ನೀವು ಸಾರಿನ ಪಾತ್ರೆ ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ
ಸಾಸಿವೆ ಹಾಕಿ, ಚಟ್ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ಈಗ ರುಬ್ಬಿದ ಮಸಾಲೆ
ಹಾಕಿ, ನೀರು ಹಾಕಿ ಕುದಿಸಿ, ಉಪ್ಪು ಸರಿಯಿದೆಯೇ ನೋಡಿ, ನಂತರ ರೋಸ್ಟ್ ಮಾಡಿದ
ಬದನೆಕಾಯಿ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿದರೆ ಸಾಕು, ಸೂಪರ್ ಟೇಸ್ಟ್ನ
ಎಣ್ಣೆ ಬದನೆಕಾಯಿ ರೆಡಿ.
ಸಲಹೆ: ನೀವು ಕೊತ್ತಂಬರಿ ಬೀಜ, ಒಣ ಮೆಣಸು ಬದಲಿಗೆ ಪುಡಿ ಬಳಸಬಹುದು
ಈ ಎಣ್ಣೆಗಾಯಿಗೆ ಯಾವುದೇ ಬದನೆ ಬಳಸಬಹುದು, ಎಣ್ಣೆ ಬದನೆ, ರೌಂಡ್ ಆಗಿ ಬರುತ್ತೆ ಅದನ್ನು ಬೇಕಾದರೂ ಬಳಸಬಹುದು.
ಇಲ್ಲಾ ದಪ್ಪ ಗಾತ್ರದ್ದು ಬದನೆಕಾಯಿ ಇದ್ದರೆ ಅದನ್ನು ಉದ್ದುದ್ದ ತುಂಡಾಗಿ ಕತ್ತರಿಸಿ,ಅದರ ಮೇಲೆ ಮಸಾಲೆ ಲೇಪಿಸಿ ಎಣ್ಣೆಯಲ್ಲಿ ರೋಸ್ಟ್ ಮಾಡಿ ಬಳಸಬಹುದು, ನೀವು ಬದನೆಕಾಯಿಯಲ್ಲಿ ಭಿನ್ನ ಟ್ರೈ ಮಾಡಿದಂತೆ ಮಸಾಲೆ ಒಂದೇ ಆಗಿದ್ದರು ರುಚಿ ಮಾತ್ರ ಭಿನ್ನವಾಗಿರುತ್ತದೆ.
ಇನ್ನ ಎಣ್ಣೆ ಕೂಡ ಅಷ್ಟೇ ಸೂರ್ಯಕಾಂತಿ ಎಣ್ಣೆ, ಸಾಸಿವೆಯೆಣ್ಣೆ, ನೆಲಕಡ್ಲೆ ಎಣ್ಣೆ ಅಂತ ಬೇರೆ-ಬೇರೆ ಎಣ್ಣೆ ಟ್ರೈ ಮಾಡಬಹುದು, ಎಣ್ಣೆ ಬದಲಾದಾಗ ರುಚಿಯೂ ಭಿನ್ನವಾಗಿರುತ್ತೆ



Click it and Unblock the Notifications
