Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಏಕಾದಶಿ, ವಿಶೇಷ ದಿನಕ್ಕಾಗಿ ಈ ರೀತಿ ಅವಲಕ್ಕಿ ಪ್ರಸಾದ ಮಾಡಿ! 5 ನಿಮಿಷ ಸಾಕು
ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹಲವು ಏಕಾದಶಿಗಳು, ವ್ರತಗಳು ಆಗಮಿಸುತ್ತವೆ. ಇಂತಹ ಶುಭ ದಿನಗಳಲ್ಲಿ ನೀವು ನೈವೇದ್ಯಕ್ಕೆ ಹಾಗೆ ದೇವರ ಪೂಜೆಯ ಬಳಿಕ ಸವಿಯಲು ಪ್ರಸಾದವಾಗಿ ಹಲವು ರೀತಿ ಖಾದ್ಯ ಮಾಡಬಹುದು. ಹಾಗೆ ಬೆಳಗ್ಗೆ ಅದನ್ನೇ ತಿಂಡಿಯಾಗಿಯೂ ಸವಿಯಬಹುದು. ಅಂತಹ ಪ್ರಸಾದಗಳ ಪೈಕಿ ಹೆಚ್ಚಿನ ಮಂದಿ ಅವಲಕ್ಕಿ ಮಾಡಿ ಸವಿಯುವುದು ನೋಡಿರಬಹುದು.
ಪ್ರಸಾದದ ಉದ್ದೇಶದಿಂದ ಮಾತ್ರವಲ್ಲ. ಬೆಳಗ್ಗೆ ಗಡಿಬಿಡಯಲ್ಲಿದ್ದಾಗ ಹಾಗೆ ತಿಂಡಿ ಮಾಡಲು ಬಹಳ ಸಮಯ ಇಲ್ಲದೇ ಇದ್ದಾಗಲೂ ಹಲವರು ಈ ಅವಲಕ್ಕಿಯಿಂದ ಬಗೆ ಬಗೆಯಲ್ಲಿ ತಿಂಡಿಗಳ ಮಾಡಿ ಸವಿಯಲು ಮುಂದಾಗುತ್ತಾರೆ. ಗೊಜ್ಜವಲಕ್ಕಿ, ಅವಲಕ್ಕಿ ಒಗ್ಗರಣೆ, ಅವಲಕ್ಕಿ ಚೀವ್ಡಾದಂತಹ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ.

ಅವಲಕ್ಕಿಯಿಂದ ಬಗೆ ಬಗೆಯ ಖಾದ್ಯಗಳ ಮಾಡುವುದು ಒಂದು ಕಡೆಯಾದರೆ, ಬೆಳಗ್ಗೆ ಹಾಗೆ ಸಂಜೆಗೂ ಕೂಡ ಅದನ್ನು ಸವಿಯುವುದು ನೋಡಬಹುದು. ಹಾಗಾದ್ರೆ ಸಂಜೆ ವೇಳೆಗೆ ಸವಿಯಲು ಈ ವಿಶೇಷ ಬಗೆಯ ಅವಲಕ್ಕಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಪ್ರಸಾದವಾಗಿ ಸವಿಯಲು ಈ ಅವಲಕ್ಕಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅವಲಕ್ಕಿ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅವಲಕ್ಕಿ
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು- 1 ಕಟ್
- ಎಣ್ಣೆ
- ಹಸಿ ಮೆಣಸು
ಅವಲಕ್ಕಿ ಗೊಜ್ಜು ಮಾಡುವುದು ಹೇಗೆ?
ಮೊದಲು ಅವಲಕ್ಕಿಯನ್ನು ಜರಡಿ ಹಿಡಿದು ಪುಡಿ ಹಾಗೂ ಕಸಗಳಿದ್ದರೆ ಕ್ಲೀನ್ ಮಾಡಿ ಇಟ್ಟುಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತುರಿದ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಕರಿಬೇವು, ಇಂದು, ನಿಂಬೆ ರಸ, ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ನಂತರ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು. ಎಷ್ಟು ನುಣ್ಣಗೆ ರುಬ್ಬಲು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಬೇಕು.
ನಂತರ ರುಬ್ಬಿದ ಪುಡಿ ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಹಾಕಿರುವ ಅವಲಕ್ಕಿಯ ಮೇಲೆ ಈ ರುಬ್ಬಿದ ಪುಡಿಯನ್ನು ಹಾಕಿಕೊಳ್ಳಿ. ಅಷ್ಟು ಪುಡಿ ಒಮ್ಮೆಲೆ ಹಾಕಿಕೊಳ್ಳಬೇಡಿ ಅರ್ಧ ಹಾಕಿಕೊಂಡು ಉಳಿದ ಪ್ರಮಾಣ ಹಾಗೆ ಇಟ್ಟುಕೊಳ್ಳಿ. ಹಾಗೆ 2 ಸ್ಪೂನ್ ಎಣ್ಣೆ ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ನಿಮಗೆ ಖಾರ ಹೆಚ್ಚು ಬೇಕಿದ್ದರೆ ಹಸಿ ಮೆಣಸು ಹೆಚ್ಚು ಬಳಸಿ, ಖಾರದ ಪುಡಿ ಬಳಸಬೇಡಿ. ಹಾಗೆ ಖಾರ ಬೇಕಿಲ್ಲ ಎಂದಾದರೆ ಕಡಿಮೆ ಮೆಣಸು ಬಳಸಬಹುದು.
ಹೀಗೆ ಮಿಕ್ಸ್ ಮಾಡುತ್ತಾ ರುಬ್ಬಿಕೊಂಡಿರುವ ಪದಾರ್ಥಗಳನ್ನು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. ಹಾಗೆ ಬೇಕಿದ್ದರೆ ಎಣ್ಣೆ ಕೂಡ ಮತ್ತೆ ಹಾಕಿಕೊಳ್ಳಬಹುದು. ಹೀಗೆ ಮಿಕ್ಸ್ ಮಾಡಿದ ಬಳಿಕ ಟೇಸ್ಟ್ ಮಾಡಿದರೆ ನಿಮ್ಮ ಮುಂದೆ ವ್ರತಾಚರಣೆಗೆ, ಏಕದಶಿಯಲ್ಲಿ ಸವಿಯಲು ಅವಲಕ್ಕಿ ಪ್ರಸಾದ ರೆಡಿಯಾಗುತ್ತದೆ.
ಹೀಗೆ ನಿತ್ಯವು ಒಂದೊಂದು ರೀತಿಯಲ್ಲಿ ಬೆಳಗ್ಗಿನ ಉಪಹಾರ ಮಾಡಿ ಸವಿಯಲು ನೀವು ಬಯಸಿದ್ದರೆ ಅವಲಕ್ಕಿಯಲ್ಲಿ ಈ ರೀತಿಯ ಖಾದ್ಯ ಸವಿಯಬಹುದು. ಮಾಡೋದು ಕೂಡ ಬಹಳ ಸುಲಭ. ಕೇವಲ 5 ನಿಮಿಷದೊಳಗೆ ಇದನ್ನು ಮಾಡಬಹುದು, ಹಾಗೆ ಕೆಲವೇ ಕೆಲವು ವಸ್ತುಗಳಿದ್ದರೂ ಸಾಕಾಗುತ್ತದೆ. ಹಾಗೆ ಬೇರೆ ಅವಲಕ್ಕಿ ಖಾದ್ಯದಂತೆ ಇದಕ್ಕೆ ಒಗ್ಗರಣೆ ಹಾಕುವ ಅಗತ್ಯವಿಲ್ಲ. ನೀವು ಸಹ ಏಕಾದಶಿ, ವ್ರತದಂತಹ ಸಮಯದಲ್ಲಿ ಪ್ರಸಾದವಾಗಿಯೂ ಈ ಅವಲಕ್ಕಿ ಮಾಡಬಹುದು.



Click it and Unblock the Notifications
