Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಪ್ರೋಟಿನ್ ತುಂಬಿರುವ ವೆಜ್ ಆಮ್ಲೆಟ್ ಸವಿದು ನೋಡಿ!
ಊಟದ ಜೊತೆಗೆ ನೀವು ರುಚಿ ಹೆಚ್ಚಾಗುವಂತೆ ಮಾಡಲು ಮೊಟ್ಟೆಯಿಂದ ಆಮ್ಲೆಟ್ ಮಾಡಿ ಸವಿಯುವುದು ಸಾಮಾನ್ಯ. ಆದ್ರೆ ನೀವು ಎಂದಾದರು ವೆಜ್ ಆಮ್ಲೆಟ್ ಸವಿದಿದ್ದೀರಾ? ಹೌದು ಮೊಟ್ಟೆಯಿಂದ ಆಮ್ಲೆಟ್ ಮಾಡಿ ಊಟದ ಜೊತೆಗೆ ಇಲ್ಲವೆ ಸಂಜೆ ಸಮಯದಲ್ಲಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಎಲ್ಲೂ ಊಟದೊಂದಿಗೆ ಯಾವುದಾದರು ಚಟ್ನಿ, ಪಲ್ಯ ಹಾಗೆ ಈ ರೀತಿಯ ಆಮ್ಲೆಟ್ ಇದ್ದರೆ ಸವಿಯಲು ಇಷ್ಟವಾಗುತ್ತದೆ.
ಆದ್ರೆ ನೀವು ಎಂದಾದರು ಈ ವೆಜ್ ಆಮ್ಲೆಟ್ ಮಾಡಿ ಸವಿದಿದ್ದೀರಾ? ಅದರಲ್ಲೂ ಊಟದ ಜೊತೆಗೆ ಈ ವೆಜ್ ಆಮ್ಲೆಟ್ ಇದ್ದರೆ ಬಹಳ ರುಚಿಕರವಾಗಿರಲಿದೆ. ಹಾಗೆ ಊಟ ಸವಿಯಲು ನಿಮಗೂ ಕೂಡ ಇಷ್ಟವಾಗುತ್ತೆ. ನಾವಿಂದು ಪ್ರೋಟಿನ್ ಬೂಸ್ಟ್ ನೀಡುವ, ಆರೋಗ್ಯದ ದೃಷ್ಟಿಯಿಂದಲೂ ಬಹಳ ಅದ್ಭುತವಾದ ವೆಜ್ ಆಮ್ಲೆಟ್ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ಬೆಳಗ್ಗಿನ ತಿಂಡಿಗೆ ನೀವು ಪ್ರೋಟಿನ್ ರಿಚ್ ಆಗಿರುವ ಯಾವುದಾದರು ಖಾದ್ಯ ಸವಿಯಬೇಕು ಎಂದುಕೊಂಡಿದ್ದರೆ ಈ ರೀತಿಯಾಗಿ ವೆಜ್ ಆಮ್ಲೆಟ್ ಮಾಡಿ ಸವಿಯಲು ಮುಂದಾಗುವುದು. ಹೀಗಾಗಿ ಬೆಳಗ್ಗೆ ಪ್ರೋಟಿನ್ ರಿಚ್ ಖಾದ್ಯಕ್ಕೆ ನೀವು ಮುಂದಾಗುವುದಾದರೆ ಈ ವೆಜ್ ಆಮ್ಲೆಟ್ ಟ್ರೈ ಮಾಡಿ ನೋಡಿ. ನೀವು ಡಯೆಟ್ ಮಾಡುವ ಮಂದಿಯಾದರೆ ಅಥವಾ ಬೆಳಗ್ಗೆ ಈ ರೀತಿಯ ಪ್ರೋಟಿನ್ ರಿಚ್ ಖಾದ್ಯ ನಿಮ್ಮ ಟೇಬಲ್ ಮೇಲಿನ ತಟ್ಟೆಯಲ್ಲಿರಲಿ.
ಹಾಗಾದ್ರೆ ಈ ವೆಜ್ ಆಮ್ಲೆಟ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೆಜ್ ಆಮ್ಲೆಟ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಡಲೆ ಹಿಟ್ಟು
- ಮೈದಾ
- ಈರುಳ್ಳಿ 1
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಪ್ಪು
- ಬೇಕಿಂಗ್ ಸೋಡಾ
ವೆಜ್ ಆಮ್ಲೆಟ್ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ಗೆ ಕಡಲೆ ಹಿಟ್ಟು ಹಾಕಿಕೊಳ್ಳಿ ಹಾಗೆ ಇದಕ್ಕೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು ಹಾಕಿ ಡ್ರೈ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಿಕೊಳ್ಳುತ್ತಾ ಗಂಟುಗಳು ಇಲ್ಲದಂತೆ ಕಲಸಿಕೊಳ್ಳಬೇಕು. ದೋಸೆ ಹಿಟ್ಟಿನ ಹದವಾಗಿ ಇದನ್ನು ಮಾಡಿಕೊಳ್ಳಿ. ತೆಳುವಾದಷ್ಟು ಉತ್ತಮ ಆದ್ರೆ ದಪ್ಪವಾಗಿದ್ದರೆ ಕಾವಲಿಯಿಂದ ಎಬ್ಬಿಸುವುದು ಸುಲಭ.
ಈಗ ಈ ಹಿಟ್ಟಿಗೆ ಹೆಚ್ಚಿಕೊಂಡಿರುವ ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬೇಕಿದ್ದರೆ ಚಿಟಿಕೆಯಷ್ಟು ಖಾರದ ಪುಡಿ ಸಹ ಹಾಕಿಕೊಳ್ಳಬಹುದು. ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಅದನ್ನು ಕಾಯಲು ಬಿಡಿ. ಅನಂತರ ಕಾವಲಿಯ ಮೇಲೆ ಈ ಹಿಟ್ಟನ್ನು ಹಾಕಿಕೊಳ್ಳಿ. ಇದನ್ನು ಮೊಟ್ಟೆಯನ್ನು ಬೇಯಿಸಿದಂತೆಯೇ ಬೇಸಿಕೊಳ್ಳಿ.
ಒಂದು ಬದಿ ಕಾದ ಬಳಿಕ ಮತ್ತೊಂದು ಬದಿ ತಿರುಗಿಸಿ ಹಾಕಿಕೊಳ್ಳಿ. 2ರಿಂದ 3 ನಿಮಿಷಗಳಲ್ಲಿ ಇದು ಸುಲಭವಾಗಿ ಬೇಯಲಿದೆ. ಇಷ್ಟಾದರೆ ನಿಮ್ಮ ಮುಂದೆ ಈ ವೆಜ್ ಆಮ್ಲೆಟ್ ರೆಡಿಯಾಗುತ್ತದೆ. ಇದನ್ನು ಬೆಳಗ್ಗೆ ತಿಂಡಿಯ ಜೊತೆಗೆ ಹಾಗೆ ಮಧ್ಯಾಹ್ನ ಸೇರಿ ರಾತ್ರಿ ಊಟಕ್ಕೂ ಕೂಡ ಅದ್ಭುತ ರುಚಿ ನೀಡಲಿದೆ. ಮೊಟ್ಟೆ ಆಮ್ಲೆಟ್‌ಗಿಂತಲೂ ಬಹಳ ರುಚಿ ನೀಡಲಿದೆ. ಬೆಳಗ್ಗೆ ತಿಂಡಿಗೆ ಈ ರೀತಿಯ ಪ್ರೋಟಿನ್ ರಿಚ್ ಇರುವ ಖಾದ್ಯ ಮಾಡಿ ಸವಿದರೆ ಇಡೀ ದಿನ ನೀವು ಉಲ್ಲಾಸದಿಂದ ಕಳೆಯುತ್ತೀರಿ. ಹಾಗೆ ಈ ತಿಂಡಿ ಸಸ್ಯಹಾರಿಗಳಿಗೆ ಬಹಳ ಇಷ್ಟವಾಗಬಹುದು, ನೀವು ಸಹ ಮನೆಯಲ್ಲಿ ಈ ರೀತಿಯ ವೆಜ್ ಆಮ್ಲೆಟ್ ಟ್ರೈ ಮಾಡಿ ನೋಡಿ.



Click it and Unblock the Notifications
