Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಎಗ್ ಇಷ್ಟ, ಪನ್ನೀರ್ ಕೂಡ ಇಷ್ಟ ಎಂದಾದರೆ ಇಲ್ಲಿದೆ ಎಗ್ ಪನ್ನೀರ್ ಕರಿ
Recipes
oi-Reena TK
Posted By: Reena TK
ಮೊಟ್ಟೆ-ಪನ್ನೀರ್ ಇಮಗೆ ತುಂಬಾ ಇಷ್ಟ ಎಂದಾದರೆ ಇದೆರಡೂ ಸೇರಿಸಿ ಮಾಡುವ ಎಗ್-ಪನ್ನೀರ್ ಕರಿ ಟ್ರೈ ಮಾಡಿದರೆ ಹೇಗೆ? ಎಗ್ ಪನ್ನೀರ್ ಕರಿ ತುಂಬಾ ಸುಲಭದ ರೆಸಿಪಿಯಾಗಿದೆ, ಇದನ್ನು ಮಾಡುವುದು ಕೂಡ ತುಂಬಾ ಸುಲಭ ಕೂಡ ಹೌದು, ಅಲ್ಲದೆ ಟೇಸ್ಟ್ ರೆಸ್ಟೋರೆಂಟ್ನಲ್ಲಿ ಸಿಗುವಂತಿರುತ್ತದೆ. ಬನ್ನಿ ಎಗ್ ಪನ್ನೀರ್ ಸರಳ ರೆಸಿಪಿ ನೋಡೋಣ:

100 ಗ್ರಾಂ ಪನ್ನೀರ್
ಮೊಟ್ಟೆ 3-4 ( ಹೆಚ್ಚು ಮೊಟ್ಟೆ ಬೇಕಾದರೂ ಹಾಕಬಹುದು)
ಟೊಮೆಟೊ 3-4
ಈರುಳ್ಳಿ 1
ಖಾರದ ಪುಡಿ 1/2 ಚಮಚ
ಕಾಶ್ಮೀರಿ ಮೆಣಸಿನ ಪುಡಿ 1/2 ಚಮಚ
ಕೊತ್ತಂಬರಿ ಪುಡಿ 1 ಚಮಚ
1/4 ಚಮಚ ಗರಂ ಮಸಾಲ ಪುಡಿ
ಸ್ವಲ್ಪ ಶುಂಠಿ (ಪೇಸ್ಟ್)
ಸ್ವಲ್ಪ ಬೆಳ್ಳುಳ್ಳಿ (ಪೇಸ್ಟ್)
ಗೋಡಂಬಿ 8-10
ಅರಿಶಿಣ ಪುಡಿ ಅರ್ಧ ಚಮಚ
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ಮಾಡುವ ವಿಧಾನ
- ನೀವು ಮೊದಲಿಗೆ ಮೊಟ್ಟೆಯನ್ನು ಬೇಯಿಸಿ, ಸಿಪ್ಪೆ ಸುಲಿದು ಇಡಿ
- ಪನ್ನೀರ್ ನಿಮಗೆ ಬೇಕಾದ ಆಕಾರ-ಗಾತ್ರದಲ್ಲಿ ಕತ್ತರಿಸಿ
- ಈಗ ನೀವು ಪನ್ನೀರ್ ಅನ್ನು ಎಣ್ಣೆಯಲ್ಲಿ ಸ್ವಲ್ಪ ರೋಸ್ಟ್ ಮಾಡಿ ತೆಗೆದಿಡಿ
- ಟೊಮೆಟೊವನ್ನು ಪೇಸ್ಟ್ ಮಾಡಿಡಿ
- ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಬೇಡ ಎಂದರೆ ಜಜ್ಜಿ ಇಡಿ
- ಇಷ್ಟು ಸಿದ್ಧತೆ ಮಾಡಿಕೊಂಡ ಮೇಲೆ ಸಾರಿನ ಪಾತ್ರೆ ಸ್ಟೌವ್ ಮೇಲೆ ಇಡಿ
- ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
- ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ, ಅರಿಶಿಣ ಪುಡಿ ಸೇರಿಸಿ
- ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ
- ಗೋಡಂಬಿ ಪೇಸ್ಟ್ ಸೇರಿಸಿ, ಬಳಿಕ ಟೊಮೆಟೊ ಪೇಸ್ಟ್ ಸೇರಿಸಿ, ಸ್ವಲ್ಪ ನೀರು ಸೇರಿಸಿ ಕುದಿಸಿ
- ಮಿಶ್ರಣ ಕುದಿ ಬರಲಾರಂಭಿಸಿದಾಗ ಬೇಯಿಸಿದ ಮೊಟ್ಟೆ ಕತ್ತರಿಸಿ ಹಾಕಿ, ಪನ್ನೀರ್ ಸೇರಿಸಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ
- ನಂತರ ಸ್ವಲ್ಪ ನಿಂಬೆರಸ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಸಲಹೆ:
- ಈ ಎಗ್ ಪನ್ನೀರ್ ಮಾಡಲು ಹೆಚ್ಚಿನ ಸಮಯ ಬೇಕಾಗಿಲ್ಲ, ಅರ್ಧ ಗಂಟೆಯೊಳಗೆ ಈ ಸಾರು ಮಾಡಬಹುದು.
- ಈ ಸಾರು ಬ್ರೇಕ್ಫಾಸ್ಟ್ಗೂ ಸೈ, ಲಂಚ್ , ಡಿನ್ನರ್ಗೂ ಸೈ, ಹಾಗಾಗಿ ಇದನ್ನು ಮಾಡಿದರೆ ಚಪಾತಿ, ರೊಟ್ಟಿ ಈ ಬಗೆಯ ಆಹಾರದ ಜೊತೆಯೂ ಸವಿಯಬಹುದು, ಅನ್ನದ ಜೊತೆಯೂ ಸವಿಯಬಹುದು.
- ನೀವು ಎಗ್ ಮಸಾಲ ಬೇಕಿದ್ದರೆ ಸೇರಿಸಬಹುದು, ಫ್ಲೇವರ್ ಇನ್ನೂ ಭಿನ್ನವಾಗಿರುತ್ತದೆ.
- ಟೊಮೆಟೊ ತುಂಬಾ ಹಣ್ಣಾಗಿರುವುದು ಬಳಸಿ
- ಗೋಡಂಬಿ ಬೇಡ ಅಂದರೆ ಬಳಸದೆಯೂ ಇರಬಹುದು.
Comments
[ of 5 - Users]
Story first published: Thursday, November 28, 2024, 14:09 [IST]
Other articles published on Nov 28, 2024



Click it and Unblock the Notifications