Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮೊಟ್ಟೆ ಇಡ್ಲಿಯಿಂದ ಮಾಡಬಹುದು ತರಾವರಿ ಅಡುಗೆ, ಪಟಾಪಟ್ ಬ್ರೇಕ್ಫಾಸ್ಟ್ಗೂ ಸೈ, ಸಂಜೆ ಸ್ನ್ಯಾಕ್ಸ್ಗೂ ಸೈ
ನೀವು ಮೊಟ್ಟೆ ಇಡ್ಲಿ ಟೇಸ್ಟ್ ಮಾಡಿದ್ದೀರ? ಇಲ್ಲಾಂದ್ರೆ ಟ್ರೈ ಮಾಡಿ, ಬ್ರೇಕ್ಫಾಸ್ಟ್, ಸ್ನ್ಯಾಕ್ಸ್, ಡಿನ್ನರ್, ಟ್ರಾವಲ್ ಫುಡ್, ಡಯಟ್ ಫುಡ್ ಹೀಗೆ ಎಲ್ಲಾ ಬಗೆಯಲ್ಲೂ ಈ ಆಹಾರ ಆರೋಗ್ಯಕರವಾಗಿದೆ. ಈ ಮೊಟ್ಟೆ ಇಡ್ಲಿ ಮಾಡುವುದು ಸುಲಭ, ಇದನ್ನು ಸಿಂಪಲ್ ಆಗಿ ಮಾಡಿ ಮಕ್ಕಳಿಗೆ ನೀಡಬಹುದು, ನೀವು ಇದಕ್ಕೆ ಮಸಾಲೆ ಹಾಕಿ ಸ್ಪೈಸಿಯಾಗಿ ಮಾಡಬಹುದು. ಈ ಮೊಟ್ಟೆ ಇಡ್ಲಿ ಮಾಡುವುದು ಹೇಗೆ, ಇದನ್ನು ಹೇಗೆ ಸರ್ವ್ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೊದಲಿಗೆ ನೀವು ಮೊಟ್ಟೆ ಇಡ್ಲಿ ರೆಡಿ ಮಾಡಬೇಕು
ನೀವು ಇಡ್ಲಿ ಪಾತ್ರೆಗೆ ಇಡ್ಲಿ ಬೇಯಿಸಲು ಹಾಕುವಷ್ಟು ನೀರು ಹಾಕಿ
ನಂತರ ಇಡ್ಲಿ ತಟ್ಟೆ ಇಡಿ
ತಟ್ಟೆಗೆ ಎಣ್ಣೆ ಸವರಿ
ನಂತರ ಮೊಟ್ಟೆಯನ್ನು ಒಡೆದು ಹಾಕಿ,
ಅದರ ಮೇಲೆ ಕೂಡ ಸ್ವಲ್ಪ ತೆಂಗಿನೆಣ್ಣೆ ಹಾಕಿ, ಉಪ್ಪು ಉದುರಿಸಿ, ಬಳಿಕ ಕಾಳು
ಮೆಣಸಿನ ಪುಡಿ ಉದುರಿಸಿ ಹಬೆಯಲ್ಲಿ 7-8 ನಿಮಿಷ ಬೇಯಿಸಿ
ನಂತರ ಇಡ್ಲಿತಟ್ಟೆಯನ್ನು ಹೊರತೆಗೆದು 5 ನಿಮಿಷ ಬಿಡಿ
ಈಗ ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿ
ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಒಣ ಮೆಣಸು
ಮುರಿದು ಹಾಕಿ, ಬೇಕಿದ್ದರೆ ಹಸಿ ಮೆಣಸು ಕೂಡ ಸೇರಿಸಬಹುದು
1/2 ಚಮಚ ಕಾಶ್ಮೀರಿ ಮೆಣಸಿನ ಪುಡಿ ಸೇರಿಸಿ
1/2 ಚಮಚ ಅರಿಶಿಣ ಪುಡಿ
ಅದಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಸಿ
ಬಳಿಕ ಅದರಲ್ಲಿ ಮೊಟ್ಟ ಇಡ್ಲಿ ಹಾಕಿ ಮಿಕ್ಸ್ ಮಾಡಿ, ಉಪ್ಪು ಬೇಕಿದ್ದರೆ
ಸೇರಿಸಬಹುದು.
ಸಲಹೆ: ಇದನ್ನು ಬೇಕಿದ್ದರೆ ನೀವು ಸ್ಯಾಂಡ್ವಿಚ್ ಮಧ್ಯ
ಇಟ್ಟು ಸರ್ವ್ ಮಾಡಬಹುದು
ಇನ್ನು ಚಪಾತಿಗೆ ಸೈಡ್ ಆಗಿ ಬಳಸಬಹುದು
ಇದನ್ನು ಮಾಡಿ ಒನ್ ಡೇ ಟ್ರಿಪ್ ಹೋಗುವಾಗ ಇದನ್ನು ಮಾಡಿ ತೆಗೆದುಕೊಂಡು
ಹೋಗಬಹುದು, ಇನ್ನು ಟ್ರಾವೆಲ್ ಮಾಡುವಾಗ ಕೂಡ ಇದನ್ನು ಮಾಡಿ ತೆಗೆದುಕೊಂಡು ಹೋದರೆ
ತಿನ್ನಲು ಸುಲಭ,
ಬೆಳಗ್ಗೆ ಬ್ರೇಕ್ಫಾಸ್ಟ್ಗೆ ಕೂಡ ಇದನ್ನು ಮಾಡಿ ಸವಿಯಬಹುದು. ಇದನ್ನುಸ್ಟೀಮ್
ಮಾಡುವುದರಿಂದ ಆರೋಗ್ಯಕ್ಕೆ ಇನ್ನೂ ಒಳ್ಳೆಯದು, ಅಲ್ಲದೆ ಈ ಟೇಸ್ಟ್
ಭಿನ್ನವಾಗಿರುತ್ತದೆ.
ಟೊಮೆಟೊ ಮೊಟ್ಟೆ ಗೊಜ್ಜು ರೀತಿ ಮಾಡಬಹುದು
ಮೊಟ್ಟೆಯನ್ನು ಬೇಯಿಸಿ ಹಾಕುವ ಬದಲಿಗೆ ಅಥವಾ ಮೊಟ್ಟೆಯನ್ನು ಹಾಗೆಯೇ ಒಡೆದು ಹಾಕುವ
ಬದಲಿಗೆ ನೀವು ಮೊಟ್ಟೆಯನ್ನು ಟೊಮೆಟೊ ಗೊಜ್ಜು ಜೊತೆ ಸೇರಿಸಿದರೆ ಇದನ್ನು ಅನ್ನದ
ಜೊತೆ ಸವಿಯಲೂಬಹುದು, ಹಾಗಾಗಿ ಈ ಮೊಟ್ಟೆ ಇಡ್ಲಿಯನ್ನು ಹಲವು ರೀತಿಯಲ್ಲಿ
ಮಾಡಬಹುದು.
ನೀವು ಈ ಮೊಟ್ಟೆ ಇಡ್ಲಿಯನ್ನು ಹಲವು ರೀತಿಯಲ್ಲಿ ಬಳಸಬಹುದು, ಇದನ್ನು ಚಿಕ್ಕ ಕಟ್ ಮಾಡಿ ಬುರ್ಜಿ ರೀತಿಯಾಗಿಯೂ ಮಾಡಬಹುದು.
ನೀವು ಮೊದಲು ಎಗ್ ಇಡ್ಲಿ ಟ್ರೈ ಮಾಡಿ ನಂತರ ನಿಮಗೆ ಬೇಕಾದ ರುಚಿಯಲ್ಲಿ ಮಾಡಿ ಸವಿಯಬಹುದು.



Click it and Unblock the Notifications
