Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹೋಟೆಲ್ ರುಚಿಯ ಮೊಟ್ಟೆ ಫ್ರೈ ಮಸಾಲ: ಊಟ, ಚಪಾತಿಗೆ ನಂಬರ್ ಒನ್ ಟೇಸ್ಟ್!
ಎಲ್ಲರು ಇಷ್ಟಪಡುವ ಹಾಗೂ ಸುಲಭವಾಗಿ ಮಾಡಬಹುದಾದ ಯಾವುದಾದ್ರು ಖಾದ್ಯ ಇದ್ರೆ ಅದು ಮೊಟ್ಟೆಯಿಂದ ಮಾಡುವ ಖಾದ್ಯಗಳು. ಯಾಕಂದ್ರೆ ಈ ಮೊಟ್ಟೆಯಿಂದ ಮಾಡುವ ಖಾದ್ಯಗಳು ಬಹಳ ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ಹೀಗಾಗಿ ಎಲ್ಲರು ಗಡಿಬಿಡಿಯಲ್ಲಿ ಮೊಟ್ಟೆಗಳ ಆಯ್ಕೆ ಮಾಡಿಕೊಳ್ಳುತ್ತಾರೆ.
ಮೊಟ್ಟೆ ಕೈಗೆ ಸಿಕ್ಕರೆ ಆಮ್ಲೆಟ್, ಆಫ್ ಬಾಯಿಲ್ಡ್, ಫ್ರೈ, ಮೊಟ್ಟೆ ಮಸಾಲ ಮಾಡುತ್ತಾರೆ. ಊಟ, ತಿಂಡಿಗೆ ಮೊಟ್ಟೆಯಲ್ಲಿ ಮಾಡಿರುವ ಖಾದ್ಯ ತುಂಬಾನೆ ರುಚಿ ನೀಡುತ್ತೆ. ಹೀಗಾಗಿ ಸಸ್ಯಹಾರಿಗಳಲ್ಲೂ ಸಹ ಈ ಮೊಟ್ಟೆ ಸವಿಯುವವರು ಸಿಗುತ್ತಾರೆ. ಜೊತೆಗೆ ಮೊಟ್ಟೆಯಿಂದ ಬಾಯಿ ರುಚಿಯ ಹತ್ತಾರು ಖಾದ್ಯ ಮಾಡಿ ಸವಿಯಬಹುದು.

ನಾವಿಂದು ಈ ಮೊಟ್ಟೆಯಿಂದ ಊಟ ಹಾಗೂ ಚಪಾತಿಗೆ ಮಾಡಬಹುದಾದ ಮೊಟ್ಟೆ ಮಸಾಲೆ ಕುರಿತು ತಿಳಿದುಕೊಳ್ಳೋಣ. ಏಕೆಂದರೆ ಮೊಟ್ಟೆ ಮಸಾಲೆಯು ಬಾಯಿ ರುಚಿಗೆ ಅತ್ಯುತ್ತಮ. ಹಾಗೆ ಸುಲಭವಾಗಿ ಘಮ ಘಮಿಸುವಂತೆ ಮಾಡಬಹುದು.
ಮೊಟ್ಟೆ ಮಸಾಲೆಗೆ ಒಂದಿಷ್ಟು ಮಸಾಲೆಗಳ ಹಾಕುವುದರಿಂದ ಇದರ ರುಚಿ ಬೆಸ್ಟ್ ಆಗಲಿದೆ. ಊಟ, ಚಪಾತಿಗೆ ಹೇಳಿ ಮಾಡಿಸಿದ ಖಾದ್ಯ ಇದು. ಹಾಗಾದ್ರೆ ನಾವಿಂದು ಸುಲಭವಾಗಿ ರುಚಿ ರುಚಿಯ ಮೊಟ್ಟೆ ಮಾಸಲೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಮೊಟ್ಟೆ ಮಸಾಲೆ ಫ್ರೈ ಮಾಡಲು ಬೇಕಾಗುವ ಪದಾರ್ಥಗಳೇನು? ಮೊಟ್ಟೆ ಮಸಾಲೆ ಮಾಡುವುದು ಹೇಗೆ? ಮಾಡುವ ವಿಧಾನವೇನು? ಯಾವೆಲ್ಲಾ ಮಸಾಲೆಗಳ ಹಾಕಿದರೆ ರುಚಿ ದುಪ್ಪಟ್ಟಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಮಸಾಲೆ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆ - 6
- ಈರುಳ್ಳಿ - 4
- ಶುಂಠಿ ಬೆಳ್ಳುಳ್ಳಿ ಪೇಸ್ಟ್ -
- ಹಸಿರು ಮೆಣಸಿನಕಾಯಿ - 4
- ಟೊಮೆಟೋ - 3
- ಮೆಣಸಿನ ಪುಡಿ -
- ಧನಿಯಾ ಪುಡಿ -
- ಗರಂ ಮಸಾಲಾ -
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಎಣ್ಣೆ -
- ಜೀರಿಗೆ
- ಕರಿಬೇವು
- ರುಚಿಗೆ ಉಪ್ಪು
ಮೊಟ್ಟೆ ಮಸಾಲೆ ಫ್ರೈ ಮಾಡುವ ವಿಧಾನ
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ ಹಾಗೂ ಜೀರಿಗೆ ಹಾಕಿಕೊಳ್ಳಿ, ಬಳಿಕ ಕರಿಬೇವು ಹಾಗೂ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಈರುಳ್ಳಿ ಸಣ್ಣದಾಗಿ ಹೆಚ್ಚಿಕೊಂಡಿರಿ. ಈರುಳ್ಳಿ ಫ್ರೈ ಆದ ಬಳಿಕ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮಟೋ ಹಾಕಿಕೊಳ್ಳಿ. ಬಳಿಕ ಉಪ್ಪು, ಖಾರದ ಪುಡಿ ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಅರಶಿನ, ಗರಂ ಮಸಾಲ, ಧನಿಯಾ ಪುಡಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ರಿಂದ 3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಮೊಟ್ಟೆಯನ್ನು ಒಡೆದು ಹಾಕಿ. ಮೊಟ್ಟೆ ಹಾಕಿದ ಬಳಿಕ ಕಲಸಬೇಡಿ, ಹಾಗೆಯೆ ಬಿಡಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಬಿಡಿ. ಬಳಿಕ ಮೊಟ್ಟೆ ಹಾಕಿದ ಭಾಗವನ್ನು ಕತ್ತರಿಸಿಕೊಳ್ಳಿ. ಬಳಿಕ ಮೊಟ್ಟೆ ತಿರುಗಿಸಿಕೊಂಡು ಮತ್ತೊಂದು ಭಾಗ ಬೇಯಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಮೊಟ್ಟೆ ಮಸಾಲ ಫ್ರೈ ರೆಡಿಯಾಗುತ್ತದೆ. ಇದನ್ನು ಅನ್ನ, ಚಪಾತಿಯ ಜೊತೆ ಸವಿಯಬಹುದು.



Click it and Unblock the Notifications
