Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿಂಪಲ್ ಆಗಿ ಎಗ್ ಫ್ರೈಡ್ ರೈಸ್ ಮಾಡೋದು ಹೇಗೆ? 10 ನಿಮಿಷ ಸಾಕು
ನೀವು ರಸ್ತೆ ಬದಿಯಲ್ಲಿ ನೀಡುವಂತಹ ರುಚಿ ರುಚಿಯ ಎಗ್ ರೈಸ್ ಸವಿದಿರುತ್ತೀರಿ. ಒಂದೊಂದು ಕಡೆಗಳಲ್ಲಿ ಒಂದೊಂದು ರುಚಿಯಲ್ಲಿ ನೀಡುವ ಈ ಎಗ್ ರೈಸ್ ಅನ್ನು ನೀವು ಸವಿಯುತ್ತೀರಿ, ಹಾಗೆ ಇದೇ ರುಚಿಯಲ್ಲಿ ಮನೆಯಲ್ಲಿಯೂ ಸಹ ಮಾಡಿ ಸವಿಯಲು ನೀವು ಮುಂದಾಗಿರುತ್ತೀರಿ. ಒಂದು ಮೊಟ್ಟೆ ಇದ್ದರೂ ಕೂಡ ಬಹಳ ಸುಲಭವಾಗಿ ಈ ಎಗ್ ರೈಸ್ ಮಾಡಿ ಸವಿಯಬಹುದಾಗಿದೆ.
ಹೀಗಾಗಿ ನಾವಿಂದು ಸಿಂಪಲ್ ಆಗಿ ಎಗ್ ಫ್ರೈಡ್ ರೈಸ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ, ಸಂಜೆ ಸ್ನ್ಯಾಕ್ಸ್ ಅಥವಾ ರಾತ್ರಿ ಊಟದ ಸಮಯದಲ್ಲಿ ಈ ರುಚಿಯ ಎಗ್ ರೈಸ್ ಮಾಡಿ ನಾವು ಸವಿದಿರಬಹುದು. ಸಿಂಪಲ್ ರುಚಿಯಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ಎಗ್ ಫ್ರೈಡ್ ರೈಸ್ ಮಾಡಬಹುದಾಗಿದೆ.

ನಾವಿಂದು ಹೋಟೆಲ್ ಸ್ಟೈಲ್‌ನಲ್ಲಿ ಮಾಡುವಂತಹ ಎಗ್ ಫ್ರೈಡ್ ರೈಸ್ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಎಗ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಲ್ಲಿ ತಿಳಿದುಕೊಳ್ಳೋ.
ಎಗ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಮೊಟ್ಟೆ
- ಲವಂಗ-5
- ಶುಂಠಿ
- ಬೆಳ್ಳುಳ್ಳಿ
- ಮೆಣಸು
- ಹಸಿರು ಮೆಣಸಿನಕಾಯಿ
- ಎಣ್ಣೆ
- ಈರುಳ್ಳಿ - 1
- ಕರಿಬೇವಿನ ಎಲೆಗಳು
- ಟೊಮೆಟೊ - 1
- ಕ್ಯಾಪ್ಸಿಕಂ - 1
- ರುಚಿಗೆ ಉಪ್ಪು
- ಕೊತ್ತಂಬರಿ ಸೊಪ್ಪು
- ಚಕ್ಕೆ
ಎಗ್ ಫ್ರೈಡ್ ರೈಸ್ ಮಾಡುವ ವಿಧಾನ
ಮೊದಲು ಒಂದು ಮಿಕಸಿ ಜಾರ್ ತೆಗೆದುಕೊಂಡು ಅದಕ್ಕೆ ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಕಾಳು ಮೆಣಸು ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ ಈ ಮಸಾಲೆ ಬದಿಗಿಟ್ಟುಕೊಳ್ಳಿ. ಈಗ ಬಾಣಲೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಸಣ್ಣದಾಗಿ ಕತ್ತರಿಸಿ ಈರುಳ್ಳಿ, ಕರಿಬೇವು ಹಾಕಿ ಮಿಕ್ಸ್ ಮಾಡಿ.
ಈಗ ಒಂದು ಟೊಮಟೋ ಹಾಕಿ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಂಡಿದ್ದ ಮಸಾಲೆಗಳನ್ನು ಕೂಡ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ, 2 ನಿಮಿಷ ಫ್ರೈ ಆದರೆ ಸಾಕಾಗುತ್ತದೆ. ನಂತರ ಇದಕ್ಕೆ ಉದ್ದಕ್ಕೆ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ ಮಿಕ್ಸ್ ಮಾಡಿ. ನಂರ ಮೂರು ಮೊಟ್ಟೆಯನ್ನು ಒಡೆದು ಇದಕ್ಕೆ ಹಾಕಿ.
ಅನಂತರ ಉಪ್ಪು ಹಾಕಿ ಬೇಯಲು ಬಿಡಿ. ನಂತರ ಮಿಕ್ಸ್ ಮಾಡಿಕೊಳ್ಳುತ್ತಾ ತಳ ಹಿಡಿಯದಂತೆ ಕಲಸಿಕೊಳ್ಳಿ. ಈಗ ನಿಮ್ಮ ಮನೆಯಲ್ಲೇ ಮಾಡುವ ಸಾಮಾನ್ಯ ರೈಸ್ ಅನ್ನು ಪುಡಿ ಪುಡಿಯಾಗಿ ಮಾಡಿಕೊಂಡು ಉರಿ ಹೆಚ್ಚಾಗಿ ಇಟ್ಟುಕೊಂಡು ಅನ್ನವನ್ನು ಈ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇದಕ್ಕೆ ಖಾರದ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳುತ್ತಾ ಕಲಸಿಕೊಳ್ಳಿ. ಇಷ್ಟಾದೆ ನಿಮ್ಮ ಮುಂದೆ ಈ ಅದ್ಭುತವಾಗ ಸಿಂಪಲ್ ಎಗ್ ಫ್ರೈಡ್ ರೈಸ್ ರೆಡಿಯಾಗುತ್ತದೆ, ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ಮಾಡುವ ವಿಧಾನ ಈ ರೀತಿಯಲ್ಲಿರಲಿ.
ನೀವು ಇದಕ್ಕೆ ಹಲವು ರೀತಿಯ ಸಾಸ್ ಬಳಸುವ ಹಾಗೂ ಅತ್ಯುತ್ತಮ ರೈಸ್ ಬಳಸಬೇಕು ಎಂದೇನಿಲ್ಲ. ಮನೆ ಅಕ್ಕಿ ಬಳಸಿಯೇ ಮಾಡಬಹುದು. ನೀವು ಕೂಡ ಮಾಡಿ ಬೆಳಗ್ಗೆ ತಿಂಡಿಗೆ ಸವಿದು ನೋಡಿ.



Click it and Unblock the Notifications
