Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಮಕ್ಕಳ ಬಾಯಲ್ಲಿ ನೀರು ತರಿಸುವ ಎಗ್ ದೋಸೆ..! 5 ನಿಮಿಷದಲ್ಲಿ ಮಾಡಬಹುದು!
ಮೊಟ್ಟೆ ಆರೋಗ್ಯಕ್ಕೆ ಬಹಳ ಉತ್ತಮ. ಹೀಗಾಗಿ ನಿತ್ಯ ನಿಮ್ಮ ಆಹಾರದಲ್ಲಿ ಒಂದು ಮೊಟ್ಟೆ ಇದ್ದರೆ ಅತ್ಯುತ್ತಮ. ಅತ್ಯಧಿಕ ಪ್ರೋಟಿನ್ ಹೊಂದಿರುವ ಮೊಟ್ಟೆಯಲ್ಲಿ ಪೋಷಕಾಂಶಗಳೂ ಸಹ ತುಂಬಿರುತ್ತದೆ. ಹೀಗಾಗಿ ಮೊಟ್ಟೆ ಬಳಸಿ ಮಾಡಿರುವ ತಿಂಡಿ ಸವಿದರೆ ಆರೋಗ್ಯಕ್ಕೂ ಒಳ್ಳೆಯದು. ಇನ್ನು ಮೊಟ್ಟೆ ಹಾಕಿ ಮಾಡುವ ಖಾದ್ಯದಲ್ಲಿ ಮೊಟ್ಟೆ ದೋಸೆ/ ಎಗ್ ದೋಸೆ ಸಹ ಒಂದಾಗಿದೆ.
ಮೊಟ್ಟೆ ದೋಸೆ ಬಹಳ ಸುಲಭವಾಘಿ ಮಾಡಬಹುದು ಎಂದುಕೊಂಡಿರುತ್ತೀರಿ, ಆದ್ರೆ ಈ ಮೊಟ್ಟೆ ದೋಸೆ ಸವಿಯಲು ಮುಂದಾದರೆ ಅದು ಹಸಿ ಹಸಿಯಾಗುವುದು ಇಲ್ಲವೆ ರುಚಿಯೇ ಸಿಗುವುದಿಲ್ಲ. ಹಾಗಾದ್ರೆ ರುಚಿಕರವಾಗಿ ಅದ್ಭುತವಾದ ಮೊಟ್ಟೆ ದೋಸೆ ಮಾಡುವುದು ಹೇಗೆ? ಮೊಟ್ಟೆ ದೋಸೆಗೆ ಹಿಟ್ಟು ರೆಡಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೊಟ್ಟೆ ದೋಸೆ ಮಾಡುವುದು ಹೇಗೆ? ಮೊಟ್ಟೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳೇನು?, ಮೊಟ್ಟೆ ದೋಸೆ ಮಾಡುವಾಗ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿಯೋಣ.
ಮೊಟ್ಟೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ರವೆ - 300 ಗ್ರಾಮ್
- ಮೊಸರು - ಕಾಲು ಲೀಟರ್
- ಕೊತ್ತಂಬರಿ ಸೊಪ್ಪು
- ಖಾರದ ಪುಡಿ
- ಮೆಣಸಿನ ಕಾಳಿನ ಪುಡಿ
- ಉಪ್ಪು
- ಎಣ್ಣೆ ಅಥವಾ ತುಪ್ಪ
- ಈರುಳ್ಳಿ - 1
- ಮೊಟ್ಟೆ - 1
ಮೊಟ್ಟೆ ದೋಸೆ ಮಾಡುವುದು ಹೇಗೆ?
ಒಂದು ಬೌಲ್ನಲ್ಲಿ ರವೆ ಹಾಕಿ ಅದಕ್ಕೆ ಕಾಲು ಲೀಟರ್ ಮೊಸರು ಹಾಕಿಕೊಳ್ಳಿ. ಬಳಿಕ ಎರಡನ್ನು ಚೆನ್ನಾಗಿ ಕಲಸಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ನಂತರ ಅದನ್ನು ಬದಿಗಿಟ್ಟುಕೊಳ್ಳಿ.
15 ನಿಮಿಷದ ಬಳಿಕ ಹಿಟ್ಟಿಗೆ ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿಕೊಳ್ಳಿ. ಈಗ ಕಾವಲಿಯನ್ನು ಒಲೆ ಮೇಲೆ ಇಟ್ಟು ಚೆನ್ನಾಗಿ ಕಾಯಲು ಬಿಡಿ. ನಂತರ ಕಾವಲಿ ಕಾದಾಗ ಈ ಹಿಟ್ಟನ್ನು ಹಾಕಿಕೊಳ್ಳ.
ಈಗ ಒಂದು ಲೋಟ ತೆಗೆದುಕೊಂಡು ಒಂದು ಮೊಟ್ಟೆ ಒಡೆದು ಅದಕ್ಕೆ ಹಾಕಿ. ಬಳಿಕ ಕೊತ್ತಂಬರಿ ಸೊಪ್ಪು, ಈರುಳ್ಳಿ, ಮೆಣಸಿನ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ದೋಸೆಯನ್ನು ತಿರುವಿ ಹಾಕಿಕೊಳ್ಳಿ. ಇದರ ಮೇಲೆ ಮಸಾಲೆ ಭರಿತ ಮೊಟ್ಟೆಯನ್ನು ದೋಸೆ ಮೇಲೆ ಹಾಕಿ ಚೆನ್ನಾಗಿ ದೋಸೆ ಸುತ್ತ ಸವರಿಕೊಳ್ಳಿ. ಮೊಟ್ಟೆ ಹರಡಿಕೊಂಡ ಬಳಿಕ ಮತ್ತೆ ದೋಸೆ ಬೇಯಲು ಬಿಡಿ. ನಂತರ ಮತ್ತೊಮ್ಮೆ ದೋಸೆ ತಿರುವಿ ಹಾಕಿಕೊಳ್ಳಿ.
ಈಗ ದೋಸೆಯ ಇನ್ನೊಂದು ಭಾಗಕ್ಕೆ ಸ್ವಲ್ಪ ಎಣ್ಣೆ ಹಚ್ಚಿ. ದೋಸೆ ಸೀದು ಹೋಗದಂತೆ ತಡೆಯಲು ಈ ಎಣ್ಣೆ ಬಳಸಬಹುದು. ಎಣ್ಣೆಯ ಬದಲು ತುಪ್ಪ ಹಾಗೂ ಬೆಣ್ಣೆಯನ್ನು ಸಹ ಬಳಸಬಹುದು. ನಿಮಗೆ ಗರಿ ಗರಿಯಾಗಿ ಮೊಟ್ಟೆ ದೋಸೆ ಬೇಕಿದ್ದರೆ ತಡವಾಗಿ ಕಾವಲಿಯಿಂದ ತೆಗೆಯಿರಿ.
ಇಷ್ಟಾದರೆ ನಿಮ್ಮ ಮುಂದೆ ಎಗ್ ದೋಸೆ ರೆಡಿಯಾಗಿರುತ್ತೆ. ಇದನ್ನ ನೀವು ಮನೆಯಲ್ಲಿ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದು. ಹಿಟ್ಟು ಸಹ ರೆಡಿ ಮಾಡಿಟ್ಟುಕೊಳ್ಳುವ ಅಗತ್ಯವಿಲ್ಲ. ತಕ್ಷಣವೇ ಹಿಟ್ಟು ಸಹ ರೆಡಿ ಮಾಡಿಕೊಳ್ಳಬಹುದು. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.
ಈ ದೋಸೆಯನ್ನ ಚಟ್ನಿ, ಸಾಂಬಾರ್, ಸೇರಿ ವಿವಿಧ ಖಾದ್ಯದ ಜೊತೆಗೂ ಸವಿಯಬಹುದು. ಮನೆಯ ಮಕ್ಕಳು ಇದರ ರುಚಿ ಒಮ್ಮೆ ನೋಡಿದರೆ ಮತ್ತೆ ಸವಿಯಬೇಕು ಎಂದು ಕೇಳೋದು ಪಕ್ಕ.



Click it and Unblock the Notifications
