Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮೊಟ್ಟೆ ಬೋಂಡಾ ಜೊತೆ ಖಾರ ಚಟ್ನಿ ಮಾಡೋದು ಹೇಗೆ? 5 ನಿಮಿಷದ ಸ್ನ್ಯಾಕ್ಸ್ ರೆಸಿಪಿ!
ಸಂಜೆ ಸಮಯದಲ್ಲಿ ಬಾಯಿ ರುಚಿಗೆ ಯಾವುದಾದರು ಸ್ನ್ಯಾಕ್ಸ್ ಇದ್ದರೆ ಟೀ ಕಾಫಿಯ ಜೊತೆಗೆ ಅದ್ಭುತವಾದ ರುಚಿ ನೀಡಲಿದೆ. ಹಾಗೆ ನಾವು ಸಂಜೆ ರಸ್ತೆ ಬದಿಯಲ್ಲೂ ಕೂಡ ಸ್ನ್ಯಾಕ್ಸ್ ಸವಿಯಲು ಇಷ್ಟಪಡುತ್ತೇವೆ. ಇಂತಹ ಹತ್ತಾರು ಸ್ನ್ಯಾಕ್ಸ್‌ಗಳ ಸಾಲಿನಲ್ಲಿ ಖಾರ ಚಟ್ನಿ ಜೊತೆ ಸವಿಯಲು ನೀಡುವಂತಹ ಎಗ್ ಬೋಂಡಾ ಅಥವಾ ಎಗ್ ಬಜ್ಜಿ ಕೂಡ ಒಂದು. ಹಲವರು ಮೊಟ್ಟೆ ಬೋಂಡಾವನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ.
ರಸ್ತೆ ಬದಿಯಲ್ಲಿ ಸಿಗುವಂತಹ ಈ ಬೋಂಡಾವನ್ನು ಜನರು ಮುಗಿಬಿದ್ದು ಸವಿಯುವುದು ನಾವು ನೋಡಿದ್ದೇವೆ. ಹಾಗೆ ಮನೆಯಲ್ಲೂ ಕೂಡ ಈ ಬೋಂಡಾ ಮಾಡಿ ಸವಿಯುವುದು ಸಾಮಾನ್ಯ. ಹಾಗಾದ್ರೆ ನಾವು ಕೂಡ ಒಂದು ಅದ್ಭುತ ರುಚಿಯಲ್ಲಿ ಈ ಮೊಟ್ಟೆ ಬೋಂಡಾ ಹಾಗೂ ಅದನ್ನು ಸವಿಯಲು ನೀಡುವಂತಹ ಹಸಿ ಮೆಣಸಿನ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.

ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳೇನು? ಹಸಿ ಮೆಣಸಿನ ಚಟ್ನಿ ಮಾಡುವುದು ಹೇಗೆ? ಮಾಡಲು ಎಷ್ಟು ಸಮಯಬೇಕು? ಬೋಂಡಾ ಸಿಡಿಯದಂತೆ ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳು
- ಮೊಟ್ಟೆ- 5
- ಕಡಲೆ ಹಿಟ್ಟು
- ಅಕ್ಕಿ ಹಿಟ್ಟು - 2 ಚಮಚ
- ಸೋಡಾ ಪುಡಿ
- ಉಪ್ಪು
- ಖಾರದ ಪುಡಿ
- ಅರಶಿಣ
- ಗರಂ ಮಸಾಲೆ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಹಸಿ ಮೆಣಸು
- ಎಣ್ಣೆ
ಮೊಟ್ಟೆ ಬೋಂಡಾ ಮಾಡುವುದು ಹೇಗೆ?
ಮೊದಲು 5 ರಿಂದ 6 ಮೊಟ್ಟೆಯನ್ನು ಬೇಯಿಸಿಕೊಳ್ಳಿ. ನಂತರ ಮೊಟ್ಟೆಯ ಸಿಪ್ಪೆ ತೆಗೆದು ಮಧ್ಯದಲ್ಲಿ ಕತ್ತರಿಸಿಕೊಳ್ಳಬೇಕು. ಕೆಲವರು ಇಡೀ ಮೊಟ್ಟೆಯ ಬೋಂಡಾ ಮಾಡುತ್ತಾರೆ. ಹೀಗೆ ಮಾಡೋದ್ರಿಂದ ಸಿಡಿಯಬಹುದು.
ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಸೋಡಾ ಪುಡಿ, ಖಾರದ ಪುಡಿ, ಅರಶಿನ ಪುಡಿ, ಗರಂ ಮಸಾಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಈ ಹಿಟ್ಟು ಮಿಕ್ಸ್ ಮಾಡಿಕೊಳ್ಳಿ. ಒಂದು ಹದಕ್ಕೆ ಬರುವವರೆಗೂ ಮಿಕ್ಸ್ ಮಾಡಿ.
ತುಂಬಾನೆ ತೆಳುವಾಗಿ ಹಿಟ್ಟು ಮಾಡಿಕೊಳ್ಳಬೇಡಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಇನ್ನೊಂದು ಕಡೆ ಹಿಟ್ಟಿನೊಳಗೆ ಮೊಟ್ಟೆಗಳನ್ನು ಹಾಕಿಕೊಳ್ಳಿ. ಮೊಟ್ಟೆಗೆ ಸರಿಯಾಗಿ ಹಿಟ್ಟು ಹಿಡಿಯುವಂತೆ ಮಾಡಿಕೊಂಡು ನಂತರ ನಿಧಾನವಾಗಿ ಎಣ್ಣೆಯಲ್ಲಿ ಇದನ್ನು ಬಿಡಬೇಕು. ಹಾಕಿದ ತಕ್ಷಣ ತಿರುಗಿಸಲು ಹೋಗಬೇಡಿ. 3ರಿಂದ 4 ನಿಮಿಷ ಒಂದು ಕಡೆ ಬೇಯಿಸಿದ ಬಳಿಕ ತಿರುಗಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಅದ್ಭುತ ರುಚಿಯ ಮೊಟ್ಟೆ ಬೋಂಡಾ ರೆಡಿಯಾಗುಯತ್ತದೆ.
ಹಸಿ ಮೆಣಸಿನ ಚಟ್ನಿ ಮಾಡುವುದು ಹೇಗೆ?
ಈ ಬೋಂಡಾ ಮತ್ತಷ್ಟು ರುಚಿಯಾಗಬೇಕು ಅಂದರೆ ಅದಕ್ಕೆ ಹಸಿ ಮೆಣಸಿನ ಖಾರ ಚಟ್ನಿ ಇರಬೇಕಾಗುತ್ತದೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆ? ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು 10 ಹಸಿ ಮೆಣಸಿನ ಕಾಯಿ ಹಾಕಿ, ಹಾಗೆ ಸುವಾಸನೆಗಾಗಿ ಇದಕ್ಕೆ ಬೆಳ್ಳುಳ್ಳಿ ಕೂಡ ಹಾಕಬಹುದು. ಹಾಗೆ ಸ್ವಲ್ಪವೇ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇಷ್ಟಾದರೆ ಖಾರವಾದ ಹಸಿ ಮೆಣಸಿನ ಕಾಯಿಯ ಚಟ್ನಿ ರೆಡಿಯಾಗುತ್ತದೆ. ಇದು ಬೋಂಡಾದ ರುಚಿ ದುಪ್ಪಟ್ಟು ಮಾಡುತ್ತದೆ.



Click it and Unblock the Notifications
