Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
2 ನಿಮಿಷದಲ್ಲಿ ಮಾಡಬಹುದು ಗೋಧಿ ಬೋಂಡಾ! ಇಲ್ಲಿದೆ ಈಸಿ ರೆಸಿಪಿ
ನೀವು ಸಂಜೆಯ ಸಮಯದಲ್ಲಿ ರುಚಿ ರುಚಿಯಾದ ಸ್ನ್ಯಾಕ್ಸ್ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಹಾಗೆ ಪಾನಿ ಪೂರಿ, ಗೋಬಿ ಮಂಚೂರಿಯನ್, ಬೋಂಡಾ,ಬಜ್ಜಿಯಂತಹ ಖಾದ್ಯಗಳ ಮಾಡುವುದು ಸಾಮಾನ್ಯ. ಅದ್ರಲ್ಲೂ ಹಲವು ರೀತಿಯ ಸ್ನ್ಯಾಕ್ಸ್ಗಳು ಬಾಯಲ್ಲಿ ನೀರು ತರಿಸುತ್ತವೆ. ಹಾಗೆ ಊಟದ ರುಚಿ ಹೆಚ್ಚಿಸುವಂತಹ ರುಚಿಯ ಬೋಡವನ್ನಂತು ಮಾಡಿಯೇ ಮಾಡಿರುತ್ತೀರಿ.
ಆದ್ರೆ ಕಡಲೆ ಹಿಟ್ಟು, ಇಲ್ಲವೆ ಮೈದಾ ಹಿಟ್ಟು ಬಳಸಿ ಮಾಡುವ ಬೋಂಡಾವನ್ನು ನೀವೆಲ್ಲಾ ಸವಿದಿರುತ್ತೀರಿ. ಆದ್ರೆ ಸುಲಭವಾಗಿ ನಾವಿಂದು ಗೋಧಿ ಹಿಟ್ಟು ಬಳಸಿ ಅದ್ಭುತ ರುಚಿಯ ಬೋಂಡಾ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ರುಚಿ ರುಚಿಯಾಗಿ ಈ ಬೋಂಡಾ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ. ಸಂಜೆ ಸ್ನ್ಯಾಕ್ಸ್ ಸಮಯಕ್ಕೆ ಹಾಗೆ ಊಟದೊಂದಿಗೆ ಈ ಗೋಧಿ ಬೋಂಡಾ ಬಹಳ ರುಚಿ ನೀಡಲಿದೆ. ನೀವು ಸಹ ಇದನ್ನು ಮಾಡಿ ನೋಡಿ.

ಈ ರೀತಿಯ ಬೋಂಡಾ ನೀವು ರಸ್ತೆ ಬದಿ ಸವಿಯುವ ಬೋಂಡಾಗಿಂತ ಬಹಳ ರುಚಿ ನೀಡಲಿದೆ. ಹೀಗಾಗಿ ಇದನ್ನು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಗೋಧಿ ಬೋಂಡಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಗೋಧಿ ಬೋಂಡಾ ಮಾಡಲು ಬೇಕಾದ ವಸ್ತುಗಳು
- ಗೋಧಿ ಹಿಟ್ಟು
- ಮೊಸರು - 1/2 ಕಪ್
- ಶುಂಠಿ
- ಹಸಿರು ಮೆಣಸಿನಕಾಯಿ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಅಡುಗೆ ಸೋಡಾ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಗೋಧಿ ಬೋಂಡಾ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಅಳತೆ ಕಪ್ನಲ್ಲಿ 1 ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ. ಹಾಗೆ ಅದಕ್ಕೆ ಒಂದು ಕಪ್ ಮೊಸರು, ಉಪ್ಪು, ಕತ್ತರಿಸಿದ ಶುಂಠಿ, ಹಸಿ ಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಒಂದು ಈರುಳ್ಳಿ ಸಹ ಹಾಕಿಕೊಂಡು ಕಲಸಿಕೊಳ್ಳಿ.
ಕೊನೆಯಲ್ಲಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಹಾಗೆ ಕೊನೆಯಲ್ಲಿ 1 ಸ್ಪೂನ್ ಸೋಡಾ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಈ ಹಿಟ್ಟು ಗಟ್ಟಿಯಾಗಿರಬೇಕು, ಬಹಳ ತೆಳುವಾದರೆ ಮತ್ತೆ ಗೋಧಿ ಹಿಟ್ಟು ಹಾಕಿಕೊಳ್ಳಿ. ಹಿಟ್ಟು ಹದವಾಗುವವರೆಗೂ ಕಲಸಿಕೊಳ್ಳಿ. ಇಷ್ಟೆಲ್ಲಾ ಮಾಡಿ 10 ನಿಮಿಷ ಹಿಟ್ಟನ್ನು ಬಿಡಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಬೋಂಡಾವನ್ನು ಎಣ್ಣೆಗೆ ಬಿಟ್ಟುಕೊಳ್ಳಿ. ಈ ಬೋಂಡಾ ಉಬ್ಬಿ ಬರುವ ಕಾರಣ ಉಂಡೆಗಳು ಸಣ್ಣದಾಗಿರಲಿ. ನಂತರ ಎಣ್ಣೆ ಚೆನ್ನಾಗಿ ಬಿಸಿಯಾದ ಬಳಿಕ ಬೋಂಡಾವನ್ನು ಬಿಟ್ಟು ಕರಿದುಕೊಳ್ಳಿ. ಬೋಂಡಾ ಸುತ್ತಲೂ ಕರಿದುಕೊಳ್ಳಿ. 5ರಿಂದ 6 ನಿಮಿಷದವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಗೋಧಿ ಹಿಟ್ಟಿನ ಬೋಂಡಾ ಸಿದ್ದವಾಗುತ್ತೆ ನೀವು ಕೂಡ ಇದನ್ನು ಸಂಜೆ ಸಮಯದಲ್ಲಿ ಅಥವಾ ಊಟಕ್ಕೆ ಸರಿಯಾಗಿ ಸವಿಯಲು ಮಾಡಿಕೊಳ್ಳಬಹುದು. ಕಡಿಮೆ ವಸ್ತುಗಳ ಬಳಸಿಕೊಂಡು ಸುಲಭವಾಗಿ ಮಾಡಿ ಮುಗಿಸಬಹುದಾದ ಸ್ನ್ಯಾಕ್ಸ್ ಇದಾಗಿದೆ.



Click it and Unblock the Notifications