Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಸುಲಭದ ಸೋಯಾ ಚಂಕ್ ಕರಿ: ಸ್ಪೆಷಲ್ ಊಟಕ್ಕೆ ರುಚಿಕರ ರೆಸಿಪಿ!
ನೀವು ಅಡುಗೆಯಲ್ಲಿ ವಿವಿಧ ಬಗೆಯ ಖಾದ್ಯ ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿದ್ದರೆ ಹಲವು ರೀತಿಯ ಅಥವಾ ಬಗೆಯ ಊಟ ಮಾಡುವುದು ಸಾಮಾನ್ಯ. ಹಾಗೆ ನಿತ್ಯ ಒಂದೊಂದು ರೀತಿ ವಿಶೇಷ ಟೇಸ್ಟಿಯ ಅಡುಗೆ ಮಾಡುವುದು ಕಷ್ಟ. ಆದ್ರೆ ಆಗಾಗ ವಿಶೇಷ ರೀತಿಯ ಖಾದ್ಯಗಳ ನಿಮ್ಮ ಬಯಕೆ ಆಗಿದ್ದರೆ ನಾವಿಂದು ಸುಲಭವಾಗಿ ಮಾಡಿ ಮುಗಿಸಬಹುದಾದ ರುಚಿಕರ ಖಾದ್ಯ ಕುರಿತಾಗಿ ಹೇಳಲಿದ್ದೇವೆ.
ನೀವು ಊಟದೊಂದಿಗೆ ಅಥವಾ ತಿಂಡಿಯೊಂದಿಗೆ ಸವಿಯಲು ರುಚಿಯಾದ ತರಕಾರಿಯ ಕರಿ ಮಾಡುತ್ತೀರಿ, ಆದ್ರೆ ನಾವಿಂದು ಸುಲಭದ ಸೋಯಾ ಚಂಕ್ನ ಗ್ರೇವಿ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಸೋಯಾ ಚಂಕ್ ಬಳಸಿ ಹಲವು ರೀತಿ ಅಡುಗೆ ಮಾಡಿರುತ್ತೀರಿ. ಸೋಯಾದಿಂದ ಮಾಡುವ ಬಿರಿಯಾನಿಯಂತು ಎಲ್ಲರಿಗೂ ಇಷ್ಟವಾಗುತ್ತೆ.

ಹಾಗೆ ಸೋಯಾದಲ್ಲಿನ ಫೈಬರ್ ನಿಮ್ಮ ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿ ಎಂಬುದು ಈ ಹಿಂದೆಯೇ ಸಾಬೀತಾಗಿದೆ. ಇನ್ನು ಇದನ್ನು ಹಲವು ಬಗೆಯ ಅಡುಗೆಗಳಲ್ಲಿ ಬಳಸುತ್ತಾರೆ. ನಾವಿಂದು ಈ ಸೋಯಾ ಚಂಕ್ನ ಕರಿ ಮಾಡುವ ಕುರಿತಾಗಿ ತಿಳಿಯೋಣ. ಆದ್ರೆ ಇದು ಸಾಮಾನ್ಯವಾದ ಕರಿಯಲ್ಲ ಬದಲಿಗೆ ಒಂದಿಷ್ಟು ವಿಶೇಷ ಮಸಾಲೆಗಳ ಬಳಸಿ ವಿಭಿನ್ನ ರುಚಿ ಸಿಗುವಂತಹ ಕರಿ ಇದು.
ಹಾಗಾದ್ರೆ ಈ ಸೋಯಾ ಚಂಕ್ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸೋಯಾ ಚಂಕ್ ಕರಿ ಮಾಡಲು ಬೇಕಾಗುವ ವಸ್ತುಗಳು
- ಸೋಯಾ
- ದಾಲ್ಚಿನ್ನಿ
- ಕಲ್ಲು ಹೂವು
- ಲವಂಗ
- ಏಲಕ್ಕಿ
- ಸೋಂಪುಕಾಳು
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಹಸಿ ಬಟಾಣಿ
- ಪುದೀನ ಎಲೆಗಳು
- ಟೊಮೆಟೊ
- ಕಾಳು ಮೆಣಸಿನ ಪುಡಿ
- ಅರಿಶಿನ ಪುಡಿ
- ಕೊತ್ತಂಬರಿ ಪುಡಿ
- ಖಾರದ ಪುಡಿ
- ಗರಂ ಮಸಾಲ ಪುಡಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಸೋಯಾ ಚಂಕ್ ಕರಿ ಮಾಡುವ ವಿಧಾನವೇನು?
ಮೊದಲು ಸೋಯಾ ನೆನೆಸಿಡಬೇಕು. ಸೋಯಾವನ್ನು ಬಿಸಿ ನೀರಿನಲ್ಲಿ ನೆನೆಸಿ ಬಳಕ ಎತ್ತಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ಸೋಯಾ ಚಂಕ್ಗಳ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಎಲ್ಲಾ ಮಸಾಲೆ ಪದಾರ್ಥಗಳ ಹಾಕಿ. ಚಕ್ಕೆ, ಲವಂಗ, ನಕ್ಷತ್ರ ಹೂವು, ಏಲಕ್ಕಿ, ಸೋಂಪುಕಾಳು ಹಾಕಿ ಫ್ರೈ ಮಾಡಿ. ಹಾಗೆ ಇದಕ್ಕೆ ಈರುಳ್ಳಿ ಕೂಡ ಹಾಕಿಕೊಳ್ಳಿ. ಅನಂತರ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ. 1 ನಿಮಿಷ ಫ್ರೈ ಮಾಡಿದ ಬಳಿಕ ಬಟಾಣಿ ಇದಕ್ಕೆ ಹಾಕಿ.
ಇದಕ್ಕೆ ಪುದಿನ ಎಲೆ ಹಾಕಿ ಫ್ರೈ ಮಾಡಿಕೊಂಡು ಬಳಿಕ 3 ಟೊಮೆಟೋವನ್ನು ಪೇಸ್ಟ್ ಮಾಡಿ ಇದಕ್ಕೆ ಹಾಕಿಕೊಳ್ಳಿ. ಈ ಪೇಸ್ಟ್ ಹಾಕಿ ಕೈಬಿಡದೆ ಮಿಕ್ಸ್ ಮಾಡುತ್ತಾ ಇರಿ. ಇದರ ಜೊತೆಗೆ ಕಾಳು ಮೆಣಸಿನ ಪುಡಿ, ಖಾರದ ಪುಡಿ, ಅರಶಿಣ ಪುಡಿ, ಧನಿಯಾ ಪುಡಿ, ಗರಂ ಮಸಾಲ ಹಾಕಿಕೊಂಡು ಮಿಕ್ಸ್ ಮಾಡಿ.
3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿದ್ದ ಸೋಯಾ ಚಂಕ್ ಅನ್ನು ಇದಕ್ಕೆ ಹಾಕಿಕೊಳ್ಳಿ. ಇದು ಪೇಸ್ಟ್ ರೀತಿ ಇರಲಿ. ಇದನ್ನು ಹಾಕಿ ಮಿಕ್ಸ್ ಮಾಡುತ್ತಾ ಇರಿ. ನೀರು ಕಡಿಮೆ ಇದ್ದರೆ ಸ್ವಲ್ಪ ನೀರು ಸಹ ಹಾಕಿಕೊಳ್ಳಬಹುದು. ಇದಕ್ಕೆ ಉಪ್ಪು ಹಾಕಿ ಮಿಶ್ರಣ ಮಾಡಿ ಕುದಿಬರಲು ಬಿಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಸೋಯಾ ಚಂಕ್ ಕರಿ ಸಿದ್ದವಾಗುತ್ತೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
