Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಅಡುಗೆ ಮಾಡಲು ಬರಲ್ಲ ಅನ್ನೋರು ಕೂಡ ಈ ಸಂಬಾರ್ ಮಾಡಬಹುದು..!
ನೀವು ಮನೆಯಲ್ಲಿ ಊಟದ ಜೊತೆಗೆ ಸಾಂಬಾರ್ ಮಾಡಿಯೇ ಮಾಡುತ್ತೀರಿ. ಅದರಲ್ಲೂ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಸರಿ ಒಂದೇ ಬಾರಿಗೆ ಸಾಂಬಾರ್ ಮಾಡುವುದು ಸಾಮಾನ್ಯ. ಹಲವು ತರಕಾರಿಗಳ ಬಳಸಿ ಸಾಂಬಾರ್ ಮಾಡುವುದು ನೋಡಬಹುದು. ಸಾಮಾನ್ಯವಾಗಿ ಸಾಂಬಾರ್ ಮಾಡುವ ವಿಧಾನ ಒಂದೇ ರೀತಿ ಆಗಿರುತ್ತೆ. ಆದ್ರೆ ನಿಮಗೆ ಸಾಂಬಾರ್ ಮಾಡಲು ತಿಳಿದಿಲ್ಲ ಎಂದರೆ ಈ ವಿಧಾನ ಬಳಸಿ ಸಾಂಬಾರ್ ಮಾಡಲು ಪ್ರಯತ್ನಿಸಿ.
ಅದರಲ್ಲೂ ಅಡುಗೆ ಕಲಿಯುವವರು, ಅಥವಾ ಸಾಂಬಾರ್ ಮಾಡಲು ಕಲಿಯುತ್ತಿರುವವರು ಸುಲಭವಾಗಿ ಮಾಡುವಂತಹ ವಿಧಾನ ಯಾವುದು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಮಿಕ್ಸ್ ತರಕಾರಿ ಸಾಂಬಾರ್ ಅನ್ನು ಯಾವ ರೀತಿಯಲ್ಲಿ ಸುಲಭವಾಗಿ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲು ಅಡುಗೆ ಮಾಡಲು ಬರಲ್ಲ ಎನ್ನುವವರು ಕೂಡ ಈ ರೀತಿಯ ಸಾಂಬಾರ್ ಮಾಡಿ ನೋಡಿ.

ಹಾಗಾದ್ರೆ ಸುಲಭವಾಗಿ ಸಾಂಬಾರ್ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ. ಹೊಸಬರು ಯಾವ ರೀತಿ ನಿಯಮ ಪಾಲಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸುಲಭವಾಗಿ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹೆಸರು ಬೇಳೆ- ಅರ್ಧ ಕಪ್
- ತೊಗರಿ ಬೇಳೆ - ಕಾಲು ಕಪ್
- ಈರುಳ್ಳಿ -1
- ಟೊಮೊಟೋ- 2
- ಬದನೆಕಾಯಿ-2
- ಕ್ಯಾರೆಟ್- 1
- ಆಲೂಗಡ್ಡೆ- 1
- ಸಾಸಿವೆ
- ಜೀರಿಗೆ
- ಇಂಗು
- ಕರಿಬೇವಿನ ಸೊಪ್ಪು
- ಹುಣಸೆ ಹಣ್ಣು
- ಕೊತ್ತಂಬರಿ ಸೊಪ್ಪು
- ಸಾಂಬಾರ್ ಪುಡಿ
- ಅರಿಶಿಣ ಪುಡಿ
- ಹಸಿ ಮೆಣಸಿನಕಾಯಿ
- ಉಪ್ಪು
- ಎಣ್ಣೆ
ಸುಲಭವಾಗಿ ಸಾಂಬಾರ್ ಮಾಡುವುದು ಹೇಗೆ?
ಮೊದಲು ಅರ್ಧ ಕಪ್ ಹೆಸರು ಬೇಳೆಯನ್ನು ತೊಳೆದುಕೊಂಡು ನಂತರ ಕುಕ್ಕರ್ಗೆ ಹಾಕಿ ಹಾಗೆ ಕಾಲು ಕಪ್ ತೊಗರಿ ಬೇಳೆಯನ್ನು ತೊಳೆದು ಅದಕ್ಕೆ ಹಾಕಿ ನಂತರ ಈರುಳ್ಳಿ, ಟೊಮೆಟೋ, ಬದನೆಕಾಯಿ, ಕ್ಯಾರೆಟ್, ಆಲೂಗಡ್ಡೆ, ಹಸಿ ಮೆಣಸು, ಸಾಂಬಾರ್ ಪುಡಿ, ಅರಶಿಣ ಪುಡಿ, ಉಪ್ಪು, ಹಾಗೆ ನೀರಿನಲ್ಲಿ ನೆನೆಸಿಟ್ಟಿದ್ದ ಹುಣಸೆ ಹುಳಿಯ ನೀರು ಸಹ ಇದಕ್ಕೆ ಹಾಕಿ ಬಳಿಕ ಇದಕ್ಕೆ ಅರ್ಧ ಲೀಟರ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 3 ಸೀಟಿ ಹೊಡೆಸಿಕೊಳ್ಳಿ.
3 ಸೀಟಿ ಹೊಡೆಸಿಕೊಂಡ ಬಳಿಕ ತಣ್ಣಗಾಗಲು ಬಿಟ್ಟು ನಂತರ ಮುಚ್ಚಳ ತೆಗೆದು ಸ್ವಲ್ಪ ಪುಡಿ ಮಾಡಬೇಕು. ಮಸಿದುಕೊಳ್ಳುವುದರಿಂದ ಸಾಂಬಾರ್ ರುಚಿ ಬರುವುದರ ಜೊತೆಗೆ ದಪ್ಪವಾಗುತ್ತದೆ. ಈಗ ಮತ್ತೆ ಸ್ವಲ್ಪ ನೀರು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ, ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಈ ಒಗ್ಗರಣೆಯನ್ನು ಕುಕ್ಕರ್ನಲ್ಲಿರುವ ಸಾಂಬಾರ್ಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ರುಚಿ ರುಚಿ ಘಮ ಘಮ ಎನ್ನುವಂತಹ ಸಾಂಬಾರ್ ಮಾಡಬಹುದು, ಇದು ಅಡುಗೆ ಕಲಿಯುವವರು ಕೂಡ ಸುಲಭವಾಗಿ ಮಾಡಬಹುದಾದದ ರೆಸಿಪಿಯಾಗಿದೆ. ನೀವು ಕೂಡ ಮನೆಯಲ್ಲಿ ಈ ಸಾಂಬಾರ್ ಮಾಡಿ ನೋಡಿ.



Click it and Unblock the Notifications
