Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೆಳಗಿನ ತಿಂಡಿಗೆ ರವೆ ಪಡ್ಡು, ಬಾಕ್ಸ್‌ಗೂ ಇದು ಬೆಸ್ಟ್ ತಿಂಡಿ!
ನೀವು ಬೆಳಗ್ಗೆ ತಿಂಡಿಗೆ ರುಚಿ ರುಚಿಯಾದ ಖಾದ್ಯಗಳ ಸವಿಯುವ ಮಂದಿ ಆಗಿದ್ದರೆ ಕಾವಲಿ ಮೇಲೆ ರೋಸ್ಟ್ ಮಾಡುವ ತಿಂಡಿಗಳನ್ನು ಇಷ್ಟಪಡಬಹುದು. ಅದ್ರಲ್ಲೂ ಅಕ್ಕಿ ಹಿಟ್ಟು ಬಳಸಿ ಮಾಡುವ ದೋಸೆ, ಪಡ್ಡು ಬಹಳ ರುಚಿ ನೀಡಲಿದೆ. ಕಾವಲಿಯಲ್ಲಿ ಮಾಡಿದ ತಿಂಡಿಗಳು ವಿಶೇಷ ರುಚಿ ನೀಡುವುದು ನೋಡಬಹುದು. ಅದ್ರಲ್ಲೂ ಈ ಪಡ್ಡು ಅಂದರೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ಮಕ್ಕಳಿಗೆ ಪಡ್ಡು ಹಾಗೂ ಚಟ್ನಿ ಇದ್ದರೆ ಬಾಯಿ ಚಪ್ಪರಿಸಿ ಸವಿಯುತ್ತಾರೆ.
ಈ ಪಡ್ಡು ಕೇವಲ ಅಕ್ಕಿ ಹಿಟ್ಟಿನಿಂದ ಮಾತ್ರವಲ್ಲದೆ ಹಲವು ಬಗೆಯಲ್ಲಿ ಮಾಡಿ ಸವಿಯಬಹುದು. ಅದ್ರಲ್ಲೂ ಮಸಾಲ ಪಡ್ಡು, ರವೆ ಪಡ್ಡು ಸಹ ಬಹಳ ಫೇಮಸ್ ಖಾದ್ಯ. ನಾವಿಂದು ಬೆಳಗ್ಗೆ ತಿಂಡಿಗೆ ರವೆ ಬಳಸಿ ಮಾಡುವ ಈ ಪಡ್ಡು ಕುರಿತಾಗಿ ತಿಳಿದುಕೊಳ್ಳೋಣ. ರವೆ ಬಳಸಿ ಹಲವು ರೀತಿಯ ಖಾದ್ಯಗಳ ಮಾಡಬಹುದು. ಅದ್ರಲ್ಲಿ ಈ ಪಡ್ಡು ಸಹ ಒಂದು. ರವೆ ಪಡ್ಡು ಸವಿಯಲು ಬಹಳ ರುಚಿ ನೀಡಲಿದೆ.

ಇನ್ನು ಬೆಳಗ್ಗೆ ತಿಂಡಿಗೆ ಮಾತ್ರವಲ್ಲದೆ ಮಧ್ಯಾಹ್ನದ ಬಾಕ್ಸ್‌ಗೂ ಸಹ ಈ ಪಡ್ಡು ಹಾಕಿಕೊಟ್ಟರೆ ಎಲ್ಲವನ್ನು ಖಾಲಿ ಮಾಡ್ತಾರೆ. ಹೀಗಾಗಿ ನಾವಿಂದು ರವೆ ಪಡ್ಡು ಮಾಡುವ ಕುರಿತು ತಿಳಿಯೋಣ. ರವೆ ಪಡ್ಡು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ರವೆ ಪಡ್ಡು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ರವೆ
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಅಡುಗೆ ಸೋಡಾ
- ಮೊಸರು
- ಅರಶಿಣ
- ಎಣ್ಣೆ
- ಹಸಿ ಮೆಣಸು
- ತೆಂಗಿನ ಕಾಯಿ ತುರಿ
- ಕ್ಯಾರೆಟ್
ರವೆ ಪಡ್ಡು ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬೌಲ್‌ಗೆ 2 ಕಪ್ ರವೆ ಹಾಕಿಕೊಂಡು ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ತುರಿದುಕೊಂಡಿರುವ ಕ್ಯಾರೆಟ್, ತೆಂಗಿನಕಾಯಿ ತುರಿ, ಹಸಿ ಮೆಣಸು ಹಾಕಿ ಡ್ರೈ ಮಿಕ್ಸ್ ಮಾಡಿಕೊಳ್ಳಿ. ಅನಂತರ ಇದಕ್ಕೆ ಮುಕ್ಕಾಲು ಕಪ್ ಮೊಸರು, ಉಪ್ಪು, ಅಡುಗೆ ಸೋಡಾ, ಅರಶಿಣ ಸೇರಿಸಿ ಮಿಕ್ಸ್ ಮಾಡಿ.
ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಕಲಸಿಕೊಳ್ಳಬೇಕು. ಇದು ದೋಸೆ ಅಥವಾ ಇಡ್ಲಿ ಹಿಟ್ಟಿಗಿಂತ ಗಟ್ಟಿಯಾಗಿ ಬರಬೇಕು. ಅನಂತರ ಮುಚ್ಚಳ ಮುಚ್ಚಿಕೊಂಡು 15 ನಿಮಿಷ ಹಾಗೆಯೇ ಬಿಡಬೇಕು. ಈ 15 ನಿಮಿಷದಲ್ಲಿ ನೀವು ಯಾವುದಾದರು ಚಟ್ನಿ ರೆಡಿ ಮಾಡಿಕೊಳ್ಳಬಹುದು. ಕಡಲೆ, ತೆಂಗಿನಕಾಯಿ ಬಳಸಿ ಥಟ್ ಅಂತ ಚಟ್ನಿ ರೆಡಿ ಮಾಡಿಟ್ಟುಕೊಳ್ಳಿ.
ಈಗ ಹಿಟ್ಟನ್ನು ಮತ್ತೆ ಮಿಕ್ಸ್ ಮಾಡಿ. ಇದು ಸ್ವಲ್ಪ ಗಟ್ಟಿಯಾಗಿರುತ್ತೆ. ಹೀಗಾಗಿ ಮತ್ತೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಪಡ್ಡು ಮಾಡುವ ಕಾವಲಿ ಇಟ್ಟು ಅದಕ್ಕೆ ಎಣ್ಣೆ ಸವರಿಕೊಳ್ಳಿ. ಕಾವಲಿ ಕಾದ ಬಳಿಕ ಈಗ ಹಿಟ್ಟನ್ನು ಮುಕ್ಕಾಲು ಭಾಗದಷ್ಟು ಹಾಕಿಕೊಂಡು ಮುಚ್ಚಳ ಮುಚ್ಚಿ ಕಾಯಲು ಬಿಡಿ. ಎರಡೂ ಕಡೆಯಲ್ಲೂ ಪಡ್ಡನ್ನು ಬೇಯಿಸಿಕೊಳ್ಳಿ. ಇಷ್ಟಾದರೆ ನಿಮಗೆ ಸವಿಯಲು ರುಚಿ ರುಚಿಯಾದ ಒಡ್ಡು ಸಿದ್ದವಾಗುತ್ತೆ. ಬಿಸಿ ಬಿಸಿಯಾಗಿದ್ದಾಗ ಚಟ್ನಿಯೊಂದಿಗೆ ಇದನ್ನು ಸವಿಯಲು ಬಹಳ ರುಚಿ ನೀಡಲಿದೆ. ನೀವು ಸಹ ಮನೆಯಲ್ಲಿ ಇದನ್ನು ಸವಿದು ನೋಡಿ.



Click it and Unblock the Notifications
