Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
Easy Rasam Recipe: ಟೊಮೆಟೋ ಬಳಸದೆ ಹೊಸ ರೀತಿ ರಸಂ ಮಾಡಿ ನೋಡಿ..! ಇಲ್ಲಿದೆ ಸುಲಭದ ತಿಳಿಸಾರು!
Easy Rasam Recipe: ನೀವುಗಳು ಮಧ್ಯಾಹ್ನದ ಊಟಕ್ಕೆ ಇಲ್ಲವೆ ರಾತ್ರಿಯ ಊಟಕ್ಕೆ ರುಚಿ ರುಚಿಯಾಗಿ ರಸಂ ಮಾಡಿ ಸವಿಯುವುದನ್ನು ಇಷ್ಟಪಡಬಹುದು. ಅದರಲ್ಲೂ ಸುಲಭವಾಗಿ ಎಲ್ಲರಿಗೂ ಇಷ್ಟವಾಗುವಂತಹ ರುಚಿಯಲ್ಲಿ ಟೊಮೆಟೋದಿಂದ ರಸಂ ಮಾಡೋದು ನೋಡಿರುತ್ತೀರಿ. ಆದ್ರೆ ಟೊಮೆಟೋ ಇಲ್ಲದೆ ಇದ್ದಾಗ ಅಥವಾ ಮಳೆಗಾಲದ ಸಮಯದಲ್ಲಿ ಟೊಮೆಟೋ ಬೆಲೆ ಅಧಿಕವಾದಾಗ ಏನು ಮಾಡುತ್ತೀರಿ?
ಹೌದು ಟೊಮೆಟೋ ಬೆಲೆ ಹೆಚ್ಚಾದಾಗ ರಸಂ ಮಾಡಿ ಸವಿಯುವುದು ಅಂದರೆ ದುಬಾರಿ ಬೆಲೆ ನೀಡಿದಂತೆ. ಆದ್ರೆ ನಾವಿಂದು ಟೊಮೆಟೋ ಬಳಸದೆಯೇ ರುಚಿ ರುಚಿಯಾದ ರಸಂ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ರಸಂ ಮಾಡಲು ಟೊಮೆಟೋ ಅಗತ್ಯ ಇದ್ದೇ ಇರಲಿದೆ. ಆದ್ರೆ ಈ ರೀತಿಯ ವಿಧಾನದಲ್ಲಿ ನೀವು ರಸಂ ಮಾಡುವುದಾರೆ ಟೊಮೆಟೋ ಅವಶ್ಯಕತೆಯೇ ಇರುವುದಿಲ್ಲ.

ಹಾಗಾದ್ರೆ ಹೊಸ ರೀತಿಯಾಗಿ ಟೊಮೆಟೋ ಬಳಸದೆಯೇ ರಸಂ ಮಾಡುವುದು ಹೇಗೆ? ಈ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಬಳಸದೆ ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕಾಗುತ್ತವೆ?
- ನಿಂಬೆ ಹಣ್ಣು ಗಾತ್ರದಷ್ಟು ಹುಣಸೆ ಹುಳಿ
- ಜೀರಿಗೆ
- ಕಾಳು ಮೆಣಸು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಸಾಸಿವೆ
- ಇಂಗು ಚಿಟಿಕೆಯಷ್ಟು
- ಬೆಳ್ಳುಳ್ಳಿ
- ಒಣ ಮೆಣಸು
- ಅರಿಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ
ಟೊಮೆಟೋ ಬಳಸದೆ ರಸಂ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ ಹುಣಸೆ ಹುಳಿಯನ್ನು ಹಾಕಿ ನೀರು ಹಾಕಿ ನೆನೆಸಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ಗೆ ಜೀರಿಗೆ, ಕಾಳು ಮೆಣಸು ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ಈಗ ನೆನೆಸಿಟ್ಟ ಹುಣಸೆ ಹುಳಿಯನ್ನು ಕಿವುಚಿಕೊಂಡು ಅದರ ಹೊಟ್ಟನ್ನು ತೆಗೆದು ಬರಿ ಹುಳಿ ನೀರನ್ನು ಮಾತ್ರ ಇಟ್ಟುಕೊಳ್ಳಿ. ಅದಕ್ಕೆ ಸ್ವಲ್ಪ ನೀರು ಸಹ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಚಿಟಿಕೆ ಇಂಗು, ಬೆಳ್ಳುಳ್ಳಿ, ಒಣ ಮೆಣಸು ಹಾಕಿ ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಕೊನೆಯಲ್ಲಿ ಕರಿಬೇವಿನ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮೊದಲು ಕಿವುಚಿ ರೆಡಿ ಮಾಡಿಕೊಂಡಿದ್ದ ಹುಣಸೆ ಹುಳಿ ನೀರು ಹಾಕಿಕೊಳ್ಳಿ.
ಈಗ ಮೊದಲೇ ರುಬ್ಬಿ ಇಟ್ಟಿದ್ದ ಜೀರಿಗೆ, ಕಾಳು ಮೆಣಸಿನ ಪುಡಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಬೇಕು. ಹಾಗೆ ಉಪ್ಪು, ಅರಶಿಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ನೀರು ಹಾಕಿ ತೆಳ್ಳಗೆ ಮಾಡಿಕೊಂಡು ಕುದಿಬರಲು ಬಿಡಬೇಕು. ಈ ರೀತಿ 10 ನಿಮಿಷ ಕುದಿಬರಲು ಬಿಟ್ಟು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಅನಂತರ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಇಳಿಸಿಕೊಂಡರೆ ನಿಮ್ಮ ಮುಂದೆ ಟೊಮೆಟೋ ಹಾಕದ ರಸಂ ರೆಡಿಯಾಗುತ್ತದೆ. ನೀವು ಸಹ ಊಟದ ಜೊತೆಗೆ ಇದನ್ನು ಮಾಡಿ ನೋಡಿ.
ಹಾಗೆ ಈ ರೀತಿಯ ರಸಂ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮ. ಇದರಲ್ಲಿನ ಶುಂಠಿ, ಜೀರಿಗೆ, ಹುಳಿ ಅಂಶ ನಿಮ್ಮ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ, ಅದರಲ್ಲೂ ಮಳೆಗಾಲದ ಸಮಯದಲ್ಲಿ ಕಾಲೋಚಿತವಾಗಿ ಕಾಡುವಂತಹ ಶಿತ, ಕೆಮ್ಮು ಸಮಸ್ಯೆಗಳಿಗೆ ಇದು ಸುಲಭದ ಪರಿಹಾರ ನೀಡಬಹುದು. ಇದನ್ನು ಮಾಡಲು ಕೂಡ ಹೆಚ್ಚು ಸಮಯ ಹಿಡಿಯುವುದಿಲ್ಲ. ಹೀಗಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಸುಲಭವಾಗಿ ಮಾಡಿ ಮುಗಿಸಬಹುದು.



Click it and Unblock the Notifications