Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಊಟದ ರುಚಿ ದುಪ್ಪಟ್ಟಾಗಿಸುವ ಟೊಮೆಟೋ-ಸಬ್ಬಸ್ಸಿಗೆ ಹಪ್ಪಳ ಮಾಡಿ: ಎಷ್ಟು ಸುಲಭ ಮಾಡೋದು
ನೀವು ಊಟದ ಜೊತೆಗೆ ಪಲ್ಯ, ಉಪ್ಪಿನಕಾಯಿ, ಹಪ್ಪಳ ಸವಿಯಲು ಇಷ್ಟಪಡುತ್ತೀರಿ, ಇದರಲ್ಲಿ ಯಾವುದಾದರೊಂದು ವಸ್ತು ಇದ್ದರೆ ಊಟದ ರುಚಿ ಕೂಡ ಅದ್ಭುತವಾಗಿರಲಿದೆ. ಹಾಗೆ ಊಟಕ್ಕೆ ಹಪ್ಪಳ ಹುರಿದು ಸವಿಯುವುದು ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಹಳ ಇಷ್ಟಪಡುತ್ತಾರೆ. ಹಾಗೆ ಹಪ್ಪಳದಲ್ಲೂ ಬಗೆ ಬಗೆಯ ಖಾದ್ಯವಿದೆ. ಅಕ್ಕಿ ಹಪ್ಪಳ, ಉದ್ದಿನ ಹಪ್ಪಳ, ಜೀರಿಗೆ ಹಪ್ಪಳ ಹೀಗೆ ಹಲವು ರೀತಿಯ ಬಗೆಯ ಹಪ್ಪಳಗಳ ನೋಡಬಹುದು.
ಆದ್ರೆ ನಾವಿಂದು ಸುಲಭವಾಗಿ ಊಟದ ರುಚಿ ಹೆಚ್ಚಿಸುವಂತಹ ರುಚಿ ರುಚಿಯ ಈ ಟೊಮೆಟೋ ಸಬ್ಬಕ್ಕಿ ಹಪ್ಪಳ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಊಟದ ಜೊತೆಗೆ ಈ ರೀತಿಯ ಹಪ್ಪಳ ಸವಿಯಲು ಸಿಕ್ಕರೆ ರುಚಿ ಕೂಡ ಅದ್ಭುತವಾಗಿರಲಿದೆ. ಹಾಗಾದ್ರೆ ನಿಮ್ಮ ಊಟದ ರುಚಿ ಹೆಚ್ಚಿಸುವ ರುಚಿ ರುಚಿ ಟೊಮೆಟೋ ಹಪ್ಪಳ ಮಾಡುವುದು ಹೇಗೆ ನೋಡೋಣ.

ಟೊಮೆಟೋ ಸಬ್ಬಕ್ಕಿ ಹಪ್ಪಳ ಸವಿಯಲು ಬಹಳ ರುಚಿಕರ ಹಾಗೆ ಮಾಡೋದು ಕೂಡ ಬಹಳ ಸುಲಭವಾಗಿದೆ. ಮನೆಯಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಇದನ್ನು ಮಾಡಬಹುದು. ಹಾಗಾದ್ರೆ ಈ ಹಪ್ಪಳ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳಿ ಬೇಕು? ಮಾಡುವ ವಿಧಾನವೇನು ತಿಳಿದುಕೊಳ್ಳೋಣ.
ಟೊಮೆಟೋ ಸಬ್ಬಕ್ಕಿ ಹಪ್ಪಳ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಟೊಮೆಟೋ- 4
- ಸಬ್ಬಕ್ಕಿ
- ರುಚಿಗೆ ತಕ್ಕಷ್ಟು ಉಪ್ಪು
- ಖಾರದ ಪುಡಿ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಎಣ್ಣೆ
ಟೊಮೆಟೋ ಸಬ್ಬಕ್ಕಿ ಹಪ್ಪಳ ಮಾಡುವ ವಿಧಾನವೇನು?
ಮೊದಲು ಹಣ್ಣಾಗಿರುವ ಟೊಮೆಟೋವನ್ನು ತೊಳೆದು ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಬಳಿಕ ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕದೆ ರುಬ್ಬಿಕೊಳ್ಳಿ. ನಂತರ ಈ ಪೇಸ್ಟ್ ಅನ್ನು ಜರಡಿ ಹಿಡಿದು ನುಣ್ಣಗಿರುವ ಪೇಸ್ಟ್ ಮಾಡಿ, ಸಿಪ್ಪೆ, ಬೀಜ ಬೇರೆ ಮಾಡಿಕೊಳ್ಳಿ. ಈಗ ಒಂದು ಗ್ಲಾಸ್ ಸಬ್ಬಕ್ಕಿ ಅಥವಾ ಸಾಬುಧಾನಿಯನ್ನು ಮಿಕ್ಸರ್ಗೆ ಹಾಕಿ ಪುಡಿ ಮಾಡಿಕೊಳ್ಳಿ.
ಸಬ್ಬಕ್ಕಿಯನ್ನು ನುಣ್ಣಗೆ ಮಾಡಿಕೊಳ್ಳಬೇಡಿ, ತರಿ ತರಿಯಾಗಿ ಇರಲಿ. ಈಗ ಸಬ್ಬಕ್ಕಿ ತೆಗೆದುಕೊಂಡ ಕಪ್ನಲ್ಲಿ ಸುಮಾರು 7 ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಈ ನೀರಿಗೆ ಟೊಮೆಟೋ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಕುದಿಬರಲು ಬಿಡಿ. ನೀರು ಬಿಸಿಯಾಗಲು ಬಿಟ್ಟು ಆಗಾಗ ಮಿಕ್ಸ್ ಮಾಡುತ್ತಾ ಇರಿ.
ಕುದಿ ಬರುವ ಹಂತದಲ್ಲಿ ಈಗ ರುಬ್ಬಿಕೊಂಡಿರುವ ಸಬ್ಬಕ್ಕಿಯನ್ನು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ 10 ನಿಮಷಗಳ ಕಾಲ ಕುದಿಬರಲು ಬಿಡಿ. ಬಳಿಕ ಈಗ ಸಾಬೂದಾನಿ ಪುಡಿ ಬೆಂದು ನೀರು ಸ್ವಲ್ಪ ಗಟ್ಟಿಯಾಗಬೇಕು. ಈಗ ಇದಕ್ಕೆ ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಗಟ್ಟಿಯಾಗಲು ಬಿಡಬೇಕು. ಸಬ್ಬಕ್ಕಿ ಚೆನ್ನಾಗಿ ಬೇಯಬೇಕು. ಖಾರದ ಪುಡಿ ಹಾಕಿ 5 ನಿಮಿಷ ಬೇಯಿಸಿಕೊಳ್ಳಿ. ನಂತರ ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿಕೊಳ್ಳಿ. ಒಟ್ಟು 20 ನಿಮಿಷ ಕುದಿ ಬಂದಿರಬೇಕು.
ನಂತರ ಈ ಮಿಶ್ರಣ ತಣ್ಣಗಾಗಲು ಬಿಡಿ, ಆದ್ರೆ ಆಗಾಗ ಕೈ ಆಡಿಸುತ್ತಾ ಇರಿ. ಇದು ಉಗುರು ಬೆಚ್ಚಗೆ ಇದ್ದಾಗಲೇ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ದಪ್ಪವಾಗಿಯೇ ಬಟ್ಟೆಯ ಮೇಲೆ ಹಾಕಿಕೊಳ್ಳಿ. ನಂತರ ಇದನ್ನು ಬಿಸಿಲಿನಲ್ಲಿ ಇಟ್ಟು ಒಣಗಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಟೊಮೆಟೋ ಹಪ್ಪಳ ರೆಡಿಯಾಗುತ್ತದೆ. ಊಟದ ಜೊತೆಗೆ ಸವಿಯಲು ಇವು ಅದ್ಭುತ ರುಚಿ ನೀಡಲಿವೆ. ನೀವು ಸಹ ಮಾಡಿ ನೋಡಿ.



Click it and Unblock the Notifications
