Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಸಂಕ್ರಾಂತಿಗೆ ವಿಶೇಷ ರುಚಿ ರೆಸಿಪಿ; ಮಲ್ನಾಡ್ ಸೌತೆಕಾಯಿ ಇಡ್ಲಿ ಮಾಡಿ ನೋಡಿ
ಬೆಳಗ್ಗೆ ತಿಂಡಿಗೆ ನೀವು ಎಷ್ಟು ಬಗೆಯ ತಿಂಡಿಗಳ ಮಾಡಿರುತ್ತೀರಿ. ಅದ್ರಲ್ಲೂ ಹಲವರು ಬೆಳಗ್ಗೆ ತಿಂಡಿಗೆ ಆರೋಗ್ಯಕರವಾದ ಇಡ್ಲಿ ಸವಿಯಲು ಇಷ್ಟಪಡುತ್ತಾರೆ. ಏಕೆಂದರೆ ಇಡ್ಲಿ ಫೈಬರ್ ಯುಕ್ತ ಹಾಗೆ ಕಡಿಮೆ ಎಣ್ಣೆ ಬಳಸಿಕೊಂಡು ಮಾಡುವಂತಹ ತಿಂಡಿ ಆಗಿರಲಿದೆ. ಹೀಗಾಗಿ ಬಹುತೇಕರು ಈ ತಿಂಡಿ ಸವಿಯೋಕೆ ಇಷ್ಟಪಡಬಹುದು. ಇಡ್ಲಿಯಲ್ಲಿ ಹತ್ತಾರು ಬಗೆಗಳಿವೆ. ಅಕ್ಕಿ, ಉದ್ದು ಬಳಸಿ ಮಾಡುವ ಇಡ್ಲಿ ಬಹಳ ಫೇಮಸ್, ಆದ್ರೆ ಅದಕ್ಕಿಂತ ರುಚಿಯಾಗಿ ವಿವಿಧ ರೀತಿಯ ಇಡ್ಲಿ ಮಾಡಿ ಸವಿಯೋದು ನೋಡಿರಬಹುದು.
ಇಡ್ಲಿಯಲ್ಲಿ ರವೆ ಇಡ್ಲಿ, ಸಿರಿಧಾನ್ಯ ಇಡ್ಲಿ ಸೇರಿದಂತೆ ತರಕಾರಿಗಳಿಂದ ಮಾಡುವಂತಹ ಇಡ್ಲಿಗಳನ್ನು ಕೂಡ ನೀವು ಸವಿದಿರುತ್ತೀರಿ. ಅದ್ರಲ್ಲೂ ಕ್ಯಾಂಟೀನ್, ಹೋಟೆಲ್‌ಗಳಲ್ಲಿ ಹತ್ತಾರು ಬಗೆಯ ಇಡ್ಲಿ ನಿಮ್ಮ ಬಾಯಲ್ಲಿ ನೀರು ತರಿಸಿರಬಹುದು. ಆದ್ರೆ ಎಂದಾದರು ಸೌತೆಕಾಯಿ ಬಳಸಿ ಮಾಡುವ ಇಡ್ಲಿ ಸವಿದಿದ್ದೀರಾ? ಹೌದು ತರಕಾರಿಗಳ ಬಳಸಿಕೊಂಡು ಒಳ್ಳೆಯ ಇಡ್ಲಿ ಮಾಡಬಹುದು. ಆದ್ತೆ ಸೌತೆಕಾಯಿ ಬಳಸಿ ಮಾಡುವುದು ಹೇಗೆ ಗೊತ್ತಾ?

ಈ ಹಿಂದೆ ನಾವು ಸೌತೆಕಾಯಿ ಬಳಸಿ ಮಾಡುವ ದೋಸೆಯ ಕುರಿತು ತಿಳಿದಿದ್ದೆವು. ಆದ್ರೆ ಇಂದು ಮಲೆನಾಡ ಸೌತೆಕಾಯಿ ಬಳಸಿ ಮಾಡುವ ರುಚಿ ರುಚಿಯ ಇಡ್ಲಿ ಕುರಿತಾಗಿ ತಿಳಿದುಕೊಳ್ಳಿ. ಮಲೆನಾಡಿನ ಸೌತೆಕಾಯಿ ಅಥವಾ ಬಣ್ಣದ ಸೌತೆ, ಗದ್ದೆ ಸೌತೆ ಎಂದು ಸಹ ಇದನ್ನು ಕರೆಯಲಾಗುತ್ತದೆ. ಈ ತರಕಾರಿಯ ಬಳಸಿಯೂ ಅದ್ಭುತ ರುಚಿಯಲ್ಲಿ ಇಡ್ಲಿ ಮಾಡಬಹುದು.
ಹಾಗಾದ್ರೆ ಈ ಸೌತೆಕಾಯಿ ಇಡ್ಲಿ ಮಾಡುವುದು ಹೇಗೆ? ಈ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಸೌತೆಕಾಯಿ ಇಡ್ಲಿ ಮಾಡಲು ಬೇಕಾಗುವ ವಸ್ತುಗಳು
ಸೌತೆಕಾಯಿ
ಇಡ್ಲಿ ರವೆ
ಉಪ್ಪು
ಎಣ್ಣೆ
ಸೌತೆಕಾಯಿ ಇಡ್ಲಿ ಮಾಡುವುದು ಹೇಗೆ?
ಮೊದಲು ಸೌತೆಕಾಯಿಯನ್ನು ತೊಳೆದು ಸಿಪ್ಪೆಯನ್ನು ತೆಗೆದುಕೊಳ್ಳಿ, ಅನಂತರ ಬೀಜಗಳ ತೆಗೆದು ತುರಿದಕೊಳ್ಳಬೇಕು. ಕ್ಯಾರೆಟ್‌ನಂತೆ ತುರಿದುಕೊಂಡು ಇಟ್ಟುಕೊಳ್ಳಿ. ಹಾಗೆ ಇದಕ್ಕೆ ಹಸಿ ತೆಂಗಿನಕಾಯಿ ತುರಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ.
ಚೆನ್ನಾಗಿ ಮಿಕ್ಸ್ ಮಾಡಿದಾಗ ಸೌತೆಕಾಯಿ ನೀರು ಬಿಟ್ಟುಕೊಳ್ಳಲಿದೆ. ಹಾಗೆ ಇದಕ್ಕೆ 2 ಕಪ್ ಇಡ್ಲಿ ರವೆ ಹಾಕಿ ಮಿಕ್ಸ್ ಮಾಡಿ. ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ. ಗಟ್ಟಿಯಾದಾಗ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ. ಹಿಟ್ಟು ಗಟ್ಟಿಯಾಗಿರಬೇಕು. ಈ ಹಿಟ್ಟು ಉಪ್ಪಿಟ್ಟಿನ ಹದಕ್ಕೆ ಬರಬೇಕು, ಅಂದ್ರೆ ನೀರು ನೀರಾಗಿರಬಾರದು.
ಈಗ ಇಡ್ಲಿ ಪಾತ್ರೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿಕೊಂಡು ಚೆನ್ನಾಗಿ ಸವರಿಕೊಳ್ಳಿ. ಹಾಗೆ ಇದಕ್ಕೆ ಹಿಟ್ಟನ್ಯು ಹಾಕಿಕೊಳ್ಳಬೇಕು. ಎಲ್ಲಾ ಅಚ್ಚುಗಳಿಗೆ ಹಾಕಿಕೊಂಡ ಬಳಿಕ ಇದನ್ನು ಇಡ್ಲಿ ಮಾತ್ರೆಗೆ ಇಟ್ಟು 15 ನಿಮಿಷ ಬೇಯಲು ಬಿಡಬೇಕು. ಇದು ಬಹಳ ಮೃದಿವಾಗಿ ಇರಲಿದೆ, ಆದ್ರೆ ಮೇಲ್ನೋಟಕ್ಕೆ ಪದರ ಪದರವಾಗಿ ಕಾಣಿಸಲಿದೆ.
ಇದಕ್ಕೆ ನೀವು ಚಟ್ನಿಯೊಂದನ್ನು ಮಾಡಿಕೊಂಡರೆ ಸವಿಯಲು ಬಹಳ ರುಚಿ ನೀಡಲಿದೆ, ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ವಿಶೇಷ ದಿನದಲ್ಲಿ ಈ ಇಡ್ಲಿ ಮಾಡಿ ಸವಿಯಬಹುದು. ಇನ್ನು ಈ ತಿಂಗಳಲ್ಲಿ ಬರುವ ಸಂಕ್ರಾಂತಿಯ ದಿನದಂದು ಈ ರುಚಿ ರುಚಿಯ ಇಡ್ಲಿ ಮಾಡಿ ಸವಿದು ನೋಡಿ. ಮನೆ ಮಂದಿಗೆಲ್ಲಾ ಇದು ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ.



Click it and Unblock the Notifications
