Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಫಟಾಫಟ್ ಅಂತ ಮಾಡಿ ಶುಂಠಿ ಚಟ್ನಿ..! ಎಲ್ಲಾ ತಿಂಡಿ ಜೊತೆಗೂ ಸೈ!!
ನೀವು ಬೆಳಗ್ಗೆ ಇಡ್ಲಿ, ದೋಸೆ, ಚಪಾತಿ ಮಾಡಿ ಅದಕ್ಕೊಂದು ಅದ್ಭುತ ರುಚಿಯ ಚಟ್ನಿ ಮಾಡಲು ಆಲೋಚಿಸಿರಬಹುದು, ಆದ್ರೆ ತಕ್ಷಣಕ್ಕೆ ಯಾವ ಚಟ್ನಿ ಮಾಡುವುದು ಎಂದು ಹೊಳೆಯದೆ ತೆಂಗಿನಕಾಯಿ ಚಟ್ನಿ ಅಥವಾ ಹುರಿಗಡಲೆಯ ಚಟ್ನಿ ಮಾಡುತ್ತೀರಿ, ಇದಕ್ಕಿಂತ ಸುಲಭವಾಗಿ ಚಟ್ನಿ ಮಾಡುವ ಕುರಿತು ನಿಮಗೆ ತಿಳಿದಿರುವುದಿಲ್ಲ. ಆದ್ರೆ ನಾವಿಂದು ಹೇಳುವಂತಹ ಚಟ್ನಿ ನಿಮಗೆ ಅತ್ಯಂತ ರುಚಿಕರ ಹಾಗೆ ಅತ್ಯಂತ ಸುಲಭವಾಗಿ ಮಾಡಬಹುದಾದ ಚಟ್ನಿ ಆಗಿದೆ.
ನಾವಿಂದು ಸುಲಭವಾಗಿ ಎಲ್ಲಾ ತಿಂಡಿಯ ಜೊತೆಗೂ ಮಾಡಿ ಸವಿಯಬಹುದಾದಂತಹ ಶುಂಠಿ ಚಟ್ನಿಯ ಕುರಿತು ತಿಳಿದುಕೊಳ್ಳೋಣ. ಶುಂಠಿಯು ನಮ್ಮ ಆರೋಗ್ಯಕ್ಕೆ ಎಷ್ಟೊಂದು ಉತ್ತಮ ಎಂಬುದು ನಿಮಗೆಲ್ಲಾ ತಿಳಿದಿರಬಹುದು, ಸಣ್ಣ ಪುಟ್ಟ ಜ್ವರ, ಶೀತ, ಕೆಮ್ಮು, ಗಂಟಲು ನೋವು ಇದ್ದರೆ ಈ ಶುಂಠಿಯ ಟೀ, ಕಾಫಿ ಮಾಡಿ ಕುಡಿದರೆ ಬಹಳ ಉತ್ತಮ.

ಹಾಗೆ ಈ ಖಾರ ಖಾರದ ಶುಂಠಿ ಚಟ್ನಿ ಎಲ್ಲರಿಗೂ ಇಷ್ಟವಾಗುತ್ತೆ, ಅದರ ಘಮಲು ಊಟ, ತಿಂಡಿಯ ಸ್ವಾದ ಹೆಚ್ಚಿಸಲಿದೆ. ಎಲ್ಲಾ ಬಗೆಯ ತಿಂಡಿಗೂ ಕೂಡ ಈ ಚಟ್ನಿ ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ಮನೆಯಲ್ಲಿ ಸುಲಭವಾಗಿ ಈ ಶುಂಠಿ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಶುಂಠಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಚಟ್ನಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶುಂಠಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಶುಂಠಿ
- ಒಣ ಮೆಣಸು
- ಬೆಳ್ಳುಳ್ಳಿ
- ಜೀರಿಗೆ
- ಉದ್ದಿನ ಬೇಳೆ
- ಕಡಲೆ ಬೇಳೆ
- ಕೊತ್ತಂಬರಿ ಬೀಜ
- ಕರಿಬೇವು
- ಬೆಲ್ಲ
- ಸಾಸಿವೆ
- ಇಂಗು
- ಹುಣಸೆ ಹುಳಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಶುಂಠಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಕಾಯಲು ಬಿಡಿ. ಬಳಿಕ ಇದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ದನಿಯಾ ಕಾಳು ಕೂಡ ಹಾಕಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಸ್ವಲ್ಪ ಶುಂಠಿಯನ್ನು ಕೂಡ ಇದಕ್ಕೆ ಹಾಕಿಕೊಳ್ಳಿ.
ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಹಾಕಿಕೊಳ್ಳಿ. ಈಗ ಇದಕ್ಮೆ ಬೆಳ್ಳುಳ್ಳಿ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಒಣ ಮೆಣಸು, ಹುಣಸೆ ಹುಳಿ ಸಹ ಹಾಕಿಕೊಂಡು ಫ್ರೈ ಮಾಡಿ. 2 ನಿಮಿಷದ ಬಳಿಕ ಸ್ವಲ್ಪ ಬೆಲ್ಲ ಹಾಗೂ ಸ್ವಲ್ಪ ನೀರು ಉಪ್ಪು ಕೂಡ ಹಾಕಿಕೊಂಡು ಬೆಲ್ಲ ಕರಗಲು ತಿರುಗಿಸುತ್ತಾ ಇರಿ. ಇದು ಬೆಲ್ಲದ ಪಾಕದಂತೆ ಆದ ಬಳಿಕ ಒಲೆ ಆಫ್ ಮಾಡಿ.
ನಂತರ ಈ ಮಸಾಲೆಗಳು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ಗೆ ಈ ಮಸಾಲೆಗಳ ಹಾಕಿಕೊಳ್ಳಿ. ನೀವು ಇದಕ್ಕೆ ತೆಂಗಿನ ತುರಿ ಹಾಕಿಕೊಳ್ಳಬಹುದು. ಆದ್ರೆ ಕಾಯಿ ಹಾಕಿದರೆ ಹೆಚ್ಚು ದಿನ ಇಡಲು ಸಾಧ್ಯವಾಗುವುದಿಲ್ಲ. ಮಿಕ್ಸಿ ಜಾರ್ಗೆ ಸ್ವಲ್ಪ ಉಗುರು ಬೆಚ್ಚಗಿನ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಕೊಳ್ಳಿ.
ಈಗ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಒಣ ಮೆಣಸು, ಕರಿಬೇವು ಹಾಕಿ ಒಂದು ಒಗ್ಗರಣೆ ರೆಡಿ ಮಾಡಿಕೊಂಡು ಚಟ್ನಿಗೆ ಹಾಕಿ ಮಿಕ್ಸ್ ಮಾಡಿಕೊಂಡರೆ ಈ ಶುಂಠಿ ಚಟ್ನಿ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಈ ರೀತಿ ಚಟ್ನಿ ಮಾಡಿ ನೋಡಿ.



Click it and Unblock the Notifications