Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಫಸ್ಟ್ ಕ್ಲಾಸ್ ಫಿಶ್ ಕಬಾಬ್ ಮಾಡೋದು ಹೇಗೆ? ಇಲ್ಲಿದೆ ಸುಲಭದ ರೆಸಿಪಿ!
ನಾನ್ ವೆಜ್ ಪ್ರಿಯರಿಗೆ ಚಿಕನ್ ಮಟನ್ ಜೊತೆಗೆ ಮೀನು ಸಹ ಬಹಳ ಇಷ್ಟವಾಗುವ ಖಾದ್ಯ. ಮೀನು ಬಳಸಿಕೊಂಡು ಹತ್ತು ಹಲವು ರೀತಿಯ ಅಡುಗೆಗಳು, ಖಾದ್ಯಗಳ ಮಾಡುವುದು ನೋಡಬಹುದು. ಮೀನಿನ ಸಾಂಬಾರ್, ಫ್ರೈ ಸೇರಿ ವಿವಿಧ ರೀತಿಯ ಖಾದ್ಯ ಸಿದ್ದ ಮಾಡಬಹುದು. ಮಾಂಸಹಾರ ಪ್ರಿಯರು ಈ ಮೀನಿನ ಹಲವು ಖಾದ್ಯಗಳನ್ನು ಸವಿಯೋದು ಅಂದ್ರೆ ಬಾಯಲ್ಲಿ ನೀರು ತರಿಸುವುದು ಖಚಿತ.
ಮೀನು ಬಳಸಿ ಮಾಡುವಂತಹ ಈ ಖಾದ್ಯದಲ್ಲಿ ನಾವಿಂದು ಫಿಶ್ ಕಬಾಬ್ ಕುರಿತು ಹೇಳಲಿದ್ದೇವೆ. ಮೀನನ್ನು ಫ್ರೈ ಮಾಡುವ ವಿಧಾನದಲ್ಲಿಯೇ ಸ್ವಲ್ಪ ಭಿನ್ನವಾಗಿ ಈ ಫಿಶ ಕಬಾಬ್ ಮಾಡಬಹುದು. ಬಹುತೇಕರಿಗೆ ಊಟದೊಂದಿಗೆ ಫಿಶ್ ಫ್ರೈ ಸವಿಯುವ ಅಭ್ಯಾಸ ಇರುತ್ತೆ. ಆದ್ರೆ ಇಲ್ಲಿ ಸುಲಭವಾಗಿ ಫಿಶ್ ಕಬಾಬ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ಯಾವುದೇ ಸಾಂಬಾರ್ ಇರಲಿ ಅದರ ಜೊತೆಗೆ ಈ ಫಿಶ್ ಕಬಾಬ್ ಬಹಳ ರುಚಿ ನೀಡಲಿದೆ. ಹಾಗೆ ಇದನ್ನು ಮಾಡುವುದು ಕೂಡ ಬಹಳ ಸುಲಭ. ಹೀಗಾಗಿ ನಾವಿಂದು ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರು ತರಿಸುವಂತಹ ಈ ರುಚಿ ರುಚಿ ಫಿಶ್ ಕಬಾಬ್ ಕುರಿಯಾಗಿ ತಿಳಿದುಕೊಳ್ಳೋಣ. ಈ ಫಿಶ್ ಕಬಾಬ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಫಿಶ್ ಕಬಾಬ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೀನು
- ಮೈದಾ ಹಿಟ್ಟು
- ಜೀರಾ ಪುಡಿ
- ಗರಂ ಮಸಾಲೆ
- ಖಾರದ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕಾರ್ನ್ ಫ್ಲೋರ್
- ಉಪ್ಪು
- ಎಣ್ಣೆ
- ನಿಂಬೆ ರಸ
ಫಿಶ್ ಕಬಾಬ್ ಮಾಡುವ ವಿಧಾನವೇನು?
ಫಿಶ್ ಕಬಾಬ್ ಮಾಡಲು ಮೊದಲು ಮೀನನ್ನು ಚೆನ್ನಾಗಿ ತೊಳೆದು ಇಟ್ಟುಕೊಂಡಿರಿ. ದೊಡ್ಡದಾಗಿದ್ದರೆ ಸಣ್ಣದಾಗಿ ಇಲ್ಲವೆ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿ ಇಟ್ಟುಕೊಳ್ಳಿ. ಇದಕ್ಕೆ ಉಪ್ಪು ಹಾಕಿ ನೆನೆಸಿಟ್ಟುಕೊಳ್ಳಿ. ಈಗ ಒಂದು ಬೌಲ್‌ಗೆ ಕಾರ್ನ್ ಫ್ಲೋರ್, ಮೈದಾ ಹಿಟ್ಟು, 5 ಸ್ಪೂನ್ ಕಾರ್ನ್ ಫ್ಲೋರ್‌ಗೆ 2 ಸ್ಪೂನ್ ಮೈದಾ ಹಿಟ್ಟು ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಇದಕ್ಕೆ ಖಾರಕ್ಕೆ ತಕ್ಕಷ್ಟು ಖಾರದ ಪುಡಿ, ಗರಂ ಮಸಾಲೆ, ಜೀರಾ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೆ ಒಂದು ಮೊಟ್ಟೆಯನ್ನು ಒಡೆದು ಹಾಕಿ ಚೂರು ಉಪ್ಪು ಹಾಕಿಕೊಂಡು, ನಿಂಬೆ ರಸ ಸಹ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೀರು ಹಾಕದೆ ಮಿಕ್ಸ್ ಮಾಡಿ. ಬಹಳ ಗಟ್ಟಿಯಾಗಿ ಈ ಹಿಟ್ಟು ಬರಬೇಕು. ಇದು ಅಂಟು ಅಂಟಾಗಿ ಬರಬೇಕು.
ಈಗ ಒಂದೊಂದೇ ಮೀನಿನ ಪೀಸ್ ತೆಗೆದುಕೊಂಡು ಈ ಮಸಾಲೆಯನ್ನು ಹಚ್ಚಿಕೊಳ್ಳಬೇಕು. ಮೀನಿನ ಎರಡೂ ಭಾಗಕ್ಕೂ ಮೀನಿನ ಮಸಾಲೆ ಹಚ್ಚಬೇಕು. ಚೆನ್ನಾಗಿ ತೆಳುವಾಗಿ ಈ ಮಸಾಲೆ ಹಚ್ಚಿಕೊಳ್ಳಿ. ಎಲ್ಲಾ ಫಿಶ್‌ಗೂ ಮಸಾಲೆ ಹಚ್ಚಿದ ಬಳಿಕ ಇದಕ್ಕೆ ಮುಚ್ಚಳ ಮಚ್ಚಿ 1 ಗಂಟೆಯಾದರೂ ಬಿಡಬೇಕು. ಫಿಶ್ ಅನ್ನು ಎಣ್ಣೆಗೆ ಬಿಡುವ ಮುನ್ನ 10 ನಿಮಿಷ ಆದರೂ ಎಣ್ಣೆ ಬಿಸಿಯಾಗಲು ಬಿಡಬೇಕು.
ಈಗ ಎಣ್ಣೆ ಕಾದ ಬಳಿಕ ಎಲ್ಲಾ ಮೀನುಗಳನ್ನು ಎಣ್ಣೆಯಲ್ಲಿ ಚಿಕನ್ ಕಬಾಬ್ ಕರಿದುಕೊಂಡಂತೆ ಕರಿದುಕೊಳ್ಳಬೇಕು. ಎಣ್ಣೆಯಲ್ಲಿ 15ರಿಂದ 20 ನಿಮಿಷ ಕರಿದುಕೊಳ್ಳಬೇಕು. ಇಷ್ಟಾದರೆ ಊಟದೊಂದಿಗೆ ಸವಿಯಲು ಫಿಶ್ ಕಬಾಬ್ ಸಿದ್ದಾಗುತ್ತೆ. ಬೇಕಿದ್ದ ಈ ಎಣ್ಣೆಗೆ ಕರಿಬೇವು ಸಹ ಹಾಕಿಕೊಂಡು ಕರಿದುಕೊಳ್ಳಬಹುದು. ನೀವು ಸಹ ಮನೆಯಲ್ಲಿ ಈ ರೀತಿ ಫಿಶ್ ಕಬಾಬ್ ಟ್ರೈ ಮಾಡಿ ನೋಡಿ.



Click it and Unblock the Notifications
