Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸುಲಭದ ಮೊಟ್ಟೆ ಕಬಾಬ್ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ
ನಾನ್ ವೆಜ್ ಪ್ರಿಯರಿಗೆ ಸವಿಯಲು ಹಲವು ಖಾದ್ಯಗಳು ಸಿಗಲಿವೆ. ಅದ್ರಲ್ಲೂ ಬಹುತೇಕರು ಚಿಕನ್ನಿಂದ ಮಾಡುವಂತಹ ವಿವಿಧ ಬಗೆಯ ಖಾದ್ಯಗಳನ್ನು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ಮೊಟ್ಟೆಯಿಂದ ಮಾಡುವ ಹಲವು ಖಾದ್ಯಗಳು ಅಂದ್ರೆ ಕೂಡ ಎಲ್ಲರಿಗೂ ಇಷ್ಟವಾಗುತ್ತೆ. ನಾವಿಂದು ಮೊಟ್ಟೆ ಬಳಸಿ ಮಾಡುವ ಸುಲಭದ ಹಾಗೆ ಎಲ್ಲರಿಗೂ ಇಷ್ಟವಾಗುವ ಖಾದ್ಯ ಕುರಿತಾಗಿ ತಿಳಿದುಕೊಳ್ಳೋಣ.
ಮೊಟ್ಟೆಯಿಂದ ಮಾಡುವ ಹಲವು ರೆಸಿಪಿಗಳನ್ನು ನೀವು ಸಹ ರುಚಿ ನೋಡಿರುತ್ತೀರಿ. ಅದ್ರಲ್ಲೂ ಮೊಟ್ಟೆ ಆಮ್ಲೆಟ್, ಬುರ್ಜಿ, ಸಾಂಬಾರ್, ಗ್ರೇವಿ, ಬಿರಿಯಾನಿ ಸೇರಿ ಹಲವು ರುಚಿಕರ ಖಾದ್ಯಗಳನ್ನು ಇಷ್ಟಪಟ್ಟು ಸವಿದಿರುತ್ತೀರಿ. ಬಹಳಷ್ಟು ಖಾದ್ಯಗಳಿಗೆ ಮೊಟ್ಟೆಯನ್ನು ಬೆರೆಸುವುದರಿಂದ ಅದರ ರುಚಿ ದುಪ್ಪಟ್ಟಾಗುವುದು ನಾವು ನೋಡಬಹುದು.

ಇಂತಹ ರುಚಿಯ ಮೊಟ್ಟೆ ಖಾದ್ಯಗಳ ಪೈಕಿ ನಾವಿಂದು ಮೊಟ್ಟೆಯ ಬಳಸಿಕೊಂಡು ಮಾಡುವಂತಹ ಅದ್ಭುತ ಕಬಾಬ್ ರೆಸಿಪಿ ಕುರಿತಾಗಿ ಹೇಳಲಿದ್ದೇವೆ. ನೀವು ಚಿಕನ್, ಮಟನ್ ಅಷ್ಟೇ ಅಲ್ಲ ಹಲವು ತರಕಾರಿಗಳ ಬಳಸಿಕೊಂಡು ಕೂಡ ಕಬಾಬ್ ಮಾಡಿರುವುದು ನೋಡಿರಬಹುದು. ಆದ್ರೆ ಇಲ್ಲಿ ಕೇವಲ ಮೊಟ್ಟೆಯೊಂದನ್ನು ಬಳಸಿಕೊಂಡು ರುಚಿ ರುಚಿಯಾದ ಕಬಾಬ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೊಟ್ಟೆ ಕಬಾಬ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮೊಟ್ಟೆ ಕಬಾಬ್ ಮಾಡಲು ಬೇಕಾಗುವ ಅಗತ್ಯ ವಸ್ತುಗಳು
ಮೊಟ್ಟೆ
ಕಡಲೆ ಹಿಟ್ಟು
ಮೈದಾ ಹಿಟ್ಟು
ಕಾರ್ನ್ ಫ್ಲೋರ್
ಅಕ್ಕಿ ಹಿಟ್ಟು
ಗರಂ ಮಸಾಲ
ಅರಶಿಣ
ಧನಿಯ ಪುಡಿ
ಖಾರದ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮೊಸರು
ಉಪ್ಪು
ಎಣ್ಣೆ
ಮೊಟ್ಟೆ ಕಬಾಬ್ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ 2 ಸ್ಪೂನ್ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಹಾಕಿಕೊಳ್ಳಿ. ಎಲ್ಲರವೂ ಒಂದೇ ಅಳತೆಯಲ್ಲಿ ತೆಗೆದುಕೊಳ್ಳಿ. ಹಾಗೆ ಇದಕ್ಕೆ 1 ಸ್ಪೂನ್ ಖಾರದ ಪುಡಿ ಸಹ ಹಾಕಿಕೊಳ್ಳಿ. 1 ಸ್ಪೂನ್ ಧನಿಯಾ ಪುಡಿ, ಗರಂ ಮಸಾಲ, ಅರಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡ ಹಾಕಿ.
ಈಗ ಎರಡು ಸ್ಪೂನ್ ಮೊಸರು ಹಾಕಿಕೊಂಡು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಬೇಕು. ಸುಲಭವಾಗಿ ಈ ಹಿಟ್ಟು ಬೋಂಡ ಹಿಟ್ಟಿನ ಹದಕ್ಕೆ ಬರುವಂತೆ ಮಾಡಿ. ಈಗ ಮೊದಲೇ ಬೇಯಿಸಿಕೊಂಡಿರುವ ಮೊಟ್ಟೆಗಳನ್ನು ಕತ್ತರಿಸಿಕೊಳ್ಳಬೇಕು. ಒಂದು ಮೊಟ್ಟೆಯಲ್ಲಿ 2ರಿಂದ ನೀವು 4 ಭಾಗ ಸಹ ಮಾಡಿಕೊಳ್ಳಬಹುದು.
ಈಗ ಕತ್ತರಿಸಿಕೊಂಡ ಮೊಟ್ಟೆಗಳನ್ನು ಈ ಹಿಟ್ಟಿಗೆ ಹಾಕಿ. ಹಾಗೆ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಈಗ ಮೊಟ್ಟೆಗಳಿಗೆ ಹಿಟ್ಟು ಚೆನ್ನಾಗಿ ಹಿಡಿದಿದ್ದರೆ 5ರಿಂದ 6 ಮೊಟ್ಟೆಗಳನ್ನು ಒಮ್ಮೆ ಎಣ್ಣೆಯನ್ನು ಬಿಟ್ಟುಕೊಳ್ಳಬಹುದು. ಇಲ್ಲವೆ ಬಾಣಲೆ ದೊಡ್ಡದಾಗಿದ್ದರೆ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಮೊಟ್ಟೆಗಳ ಹಾಕಿ ಕಾಯಲು ಬಿಡಿ.
ಚೆನ್ನಾಗಿ ಮೊಟ್ಟೆಗಳು ಕರಿದ ಬಳಿಕ ತೆಗೆದು ಜರಡಿಯಲ್ಲಿ ಹಾಕಿ ಇಟ್ಟುಕೊಳ್ಳಿ. ಊಟದೊಂದಿಗೆ ಇದನ್ನು ಸವಿಯಲು ಬಹಳ ರುಚಿ ನೀಡಲಿದೆ. ನೀವು ಸಹ ಸುಲಭವಾಗಿ ಮಾಡಿ ಸವಿಯಬಹುದು. ಮನೆಯ ಎಲ್ಲರಿಗೂ ಇದು ಇಷ್ಟವಾಗುತ್ತೆ, ನೀವು ಸಹ ಮಾಡಿ ಸವಿದು ನೋಡಿ.



Click it and Unblock the Notifications
