Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಜೋಳದ ಹಿಟ್ಟಿನ ಮಸಾಲೆ ದೋಸೆ ಎಂದಾದ್ರು ರುಚಿ ನೋಡಿದ್ದೀರಾ? ಈ ರೀತಿ ಮಾಡಿ ನೋಡಿ
ದೋಸೆ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲು ಬೆಳಗ್ಗೆ ತಿಂಡಿಗೆ ಹಾಗೆ ಸಂಜೆ ಸಮಯದಲ್ಲಿಯೂ ಕೂಡ ಹಲವರು ದೋಸೆ ಸವಿಯಲು ಇಷ್ಟಪಡುತ್ತಾರೆ. ಹಾಗೆ ದೋಸೆಯಲ್ಲಿ ಹಲವು ಬಗೆ, ಹಾಗೆ ಹಲವು ರುಚಿಯಲ್ಲಿ ಮಾಡಿ ಸವಿಯುವುದು ನೋಡಬಹುದು. ಮುಖ್ಯವಾಗಿ ಎಲ್ಲರಿಗೂ ಮಸಾಲೆ ದೋಸೆ, ರವೆ ದೋಸೆ, ಈರುಳ್ಳಿ ದೋಸೆ, ಸೆಟ್ ದೋಸೆ ಹಾಗೆ ಬಗೆ ಬಗೆಯ ದೋಸೆಗಳ ಸವಿಯುವುದು ನೋಡಬಹುದು.
ಇನ್ನು ವಿಶೇಷವಾಗಿ ಮಾಡುವಂತಹ ಎಲ್ಲಾ ದೋಸೆಗಳು ಕೂಡ ಇಷ್ಟವಾಗುತ್ತೆ. ಅದ್ರಲ್ಲೂ ರುಚಿ ರುಚಿಯಾಗಿ ದೋಸೆಗಳ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ನಾವಿಂದು ಹೊಸ ರೀತಿಯಲ್ಲಿ ಜೋಳ ಹಿಟ್ಟು ಬಳಸಿ ಮಸಾಲೆ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಈ ಜೋಳದ ಹಿಟ್ಟಿನಿಂದ ಮಾಡುವಂತಹ ದೋಸೆ ಬಹಳ ರುಚಿಯಾಗಿ ಹಾಗೆ ಹಾಗೆ ಬಹಳ ಕ್ರಿಸ್ಪಿಯಾಗಿ ಇರಲಿದೆ.

ಜೋಳದ ಹಿಟ್ಟಿನ ಈ ದೋಸೆಯ ರುಚಿ ನೋಡಿದ್ರೆ ಮತ್ತೆ ಮತ್ತೆ ಸವಿದು ನೋಡುತ್ತೀರಿ. ಹಾಗೆ ಸಾಮನ್ಯ ಗೋಧಿ ದೋಸೆಗಿಂತಲೂ ಈ ದೋಸೆ ಅದ್ಭುತವಾಗಿರಲಿದೆ. ಹಾಗಾದ್ರೆ ಜೋಳ ಮಸಾಲೆ ದೋಸೆ ಮಾಡೋದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಜೋಳ ಮಸಾಲೆ ದೋಸೆ ಮಾಡಲು ಬೇಕಾಗುವ ವಸ್ತುಗಳು
ಜೋಳದ ಹಿಟ್ಟು
ಉದ್ದಿನ ಬೇಳೆ
ಮೆಂತ್ಯ
ಉಪ್ಪು
ಎಣ್ಣೆ
ಜೋಳ ಮಸಾಲೆ ದೋಸೆ ಮಾಡುವುದು ಹೇಗೆ?
ಮೊದಲು ಒಂದು ಅಳತೆ ಕಪ್‌ನಲ್ಲಿ ಉದ್ದಿನ ಬೇಳೆ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ ಹಾಗೆ ಇದಕ್ಕೆ 2 ಸ್ಪೂನ್ ಮೆಂತ್ಯ ಕೂಡ ಹಾಕಿಕೊಂಡು ನೀರಿನಲ್ಲಿ ತೊಳೆದು ಬಳಿಕ ಬೇಳೆ ಮುಚ್ಚುವಷ್ಟು ನೀರು ಸಹ ಹಾಕಿ ನೆನೆಯಲು ಬಿಡಬೇಕು. ಅದೇ ಕಪ್ ಅಳತೆಯಲ್ಲಿ ಕಾಲು ಕಪ್ ಅವಲಕ್ಕಿಯನ್ನು ಕೂಡ ತೊಳೆದು ನೀರು ಹಾಕಿ ನೆನೆಸಿಡಬೇಕು. ಈ ಎಲ್ಲಾ ವಸ್ತುಗಳು ಕನಿಷ್ಠ 5 ಗಂಟೆಯಾದರು ನೆನೆಯಬೇಕು.
ಬಳಿಕ ಚೆನ್ನಾಗಿ ನೆನೆಸಿದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನೀರು ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಸಾಮಾನ್ಯ ದೋಸೆ ಹಿಟ್ಟು ಮಾಡಿಕೊಳ್ಳುವಂತೆಯೇ ಹದವಾಗಿರಲಿ. ಈಗ ಮಿಕ್ಸಿ ಜಾರ್‌ಗೆ ಜೋಳದ ಹಿಟ್ಟು ಹಾಕಿಕೊಳ್ಳಿ. ಅಳತೆ ಪ್ರಕಾರವಾಗಿ 3 ಕಪ್ ಜೋಳದ ಹಿಟ್ಟು ಹಾಕಿಕೊಂಡು ನೀರು ಹಾಕಿ ನುಣ್ಣಗೆ ರುಬ್ಬಬೇಕು. ಹೀಗೆ ರುಬ್ಬಿದ ಹಿಟ್ಟನ್ನು ಕೂಡ ಮೊದಲು ರುಬ್ಬಿದ ಹಿಟ್ಟಿನ ಜೊತೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಇಡಿ. ಒಂದು ರಾತ್ರಿ ಪೂರ್ತಿಯಾಗಿ ಹಾಗೆಯೇ ಇಡಬೇಕು. ಮಾರನೆ ದಿನ ಮತ್ತೆ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಬೇಕು. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ನೀರು ಹಾಕಿಕೊಳ್ಳದೆ ನಿಧಾನಕ್ಕೆ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಒಲೆ ಮೇಲೆ ಕಾವಲಿ ಇಟ್ಟು ನೀವು ಮನೆಯಲ್ಲಿ ಮಾಡುವಂತಹ ಸಾಮಾನ್ಯ ದೋಸೆ ವಿಧಾನದಲ್ಲಿಯೇ ಈ ದೋಸೆಯನ್ನು ಕೂಡ ಮಾಡಿಕೊಳ್ಳಬೇಕು. ಹಾಗೆ ಕೆಂಪು ಚಟ್ನಿಯನ್ನು ಮೇಲೆ ಹಚ್ಚಿಕೊಂಡರೆ ಮಸಾಲೆ ದೋಸೆ ರೆಡಿ.
ಇಷ್ಟಾದರೆ ರುಚಿ ರುಚಿಯ ಜೋಳದ ಮಸಾಲೆ ದೋಸೆ ಸಿದ್ದವಾಗುತ್ತೆ. ಇದರ ಜೊತೆಗೆ ಸವಿಯಲು ಆಲೂ ಪಲ್ಯ, ಇಲ್ಲವೆ ಕಾಯಿ ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಗೋದು ಖಚಿತ. ನೀವು ಕೂಡ ಈ ರೀತಿಯಾದ ಮಸಾಲೆ ದೋಸೆ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
