Latest Updates
-
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ
ಕಬ್ಬಿಣದಂತಹ ಮೂಳೆಗಳು ಬೇಕಾದ್ರೆ ಈ ಐಡಿಯಾ ಮಾಡಿ! ಸಖತ್ ಟೇಸ್ಟಿ, ಮಕ್ಕಳಿಗೂ ಇಷ್ಟವಾಗುತ್ತೆ
ಆರೋಗ್ಯಕರ ಪಾನಿಯಗಳನ್ನು ಮನೆಯಲ್ಲಿ ಮಾಡಿ ಸವಿಯುವ ಅಭ್ಯಾಸ ನಿಮಗೆ ಇರಬಹುದು. ಅದ್ರಲ್ಲೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಲವು ಅಡುಗೆಗಳ ಮಾಡುವುದು ಸಾಮಾನ್ಯ. ಇನ್ನು ದೇಹವನ್ನು ತಂಪಾಗಿಡುವ ಜೊತೆಗೆ ನಿಮಗೆ ಮೂಳೆಗಳ ಆರೋಗ್ಯದ ಕುರಿತಾಗಿ ಹಾಗೆ ಬೆನ್ನು ನೋವಿನಿಂತಹ ವಿಚಾರದಲ್ಲಿ ಪರಿಹಾರ ಹುಡುಕುತ್ತಿದ್ದರೆ ನಾವಿಂದು ಹೇಳುವ ಈ ಪಾನಿಯ ನಿಮ್ಮ ಆರೋಗ್ಯ ಸುಧಾರಿಸಲು ನೆರವಾಗಲಿದೆ.
ನೀವು ಕೂಡ ನಿತ್ಯದ ಕೆಲಸದ ನಡುವೆ ಈ ರೀತಿಯ ಸಮಸ್ಯೆ ಎದುರಿಸಿರುತ್ತೀರಿ. ಬೆನ್ನು ನೋವು, ಮಂಡಿ ನೋಡಿ, ಮೂಳೆ ನೋವಿನಂತಹ ವಿಚಾರ ಈಗ ಸಾಮಾನ್ಯ ಎನ್ನುವಂತಾಗಿದೆ. ನಿಮಗೆ ಮೂಳೆಗಳನ್ನು ಕಬ್ಬಿಣದಂತೆ ಇಟ್ಟುಕೊಳ್ಳಬೇಕಾದರೆ ಈ ರೀತಿಯ ಖಾದ್ಯವನ್ನು ಮಾಡಿ ಸವಿದು ನೋಡಿ. ಅದ್ರಲ್ಲೂ ನಿಮಗೆ ಮೂಳೆ ನೋವಿದ್ದರೆ ಇದನ್ನು ಮಾಡಿ ಸವಿದು ನೋಡಿ.

ಇದನ್ನು ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಸಹ ಇದನ್ನು ಮಾಡಿ ಸವಿಯಬಹುದು. ಹಾಗಾದ್ರೆ ಇದನ್ನು ಮಾಡುವುದು ಹೇಗೆ ? ಅಕ್ಕಿಯಿಂದ ಮಾಡುವ ಈ ಜ್ಯೂಸ್ಗೆ ಏನೆಲ್ಲಾ ಹಾಕಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅಕ್ಕಿ ಬಳಸಿ ಮನೆಮದ್ದು ಮಾಡಲು ಯಾವೆಲ್ಲಾ ಪದಾರ್ಥಬೇಕು?
- ಅಕ್ಕಿ
- ತುಪ್ಪ
- ಬಾದಾಮಿ
- ಗೋಡಂಬಿ
- ದ್ರಾಕ್ಷಿ
- ಏಲಕ್ಕಿ
- ಗಸೆಗಸೆ
- ಬೆಲ್ಲ
- ತೆಂಗಿನಕಾಯಿ ತುರಿ
ಅಕ್ಕಿ ಬಳಸಿ ಬೆನ್ನು ನೋವಿಗೆ ಮನೆಮದ್ದು ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅಚ್ಚು ಬೆಲ್ಲ ಹಾಕಿ. 4 ಉಂಡೆ ಬೆಲ್ಲ ಹಾಕಿ ನೀರು ಸಹ ಹಾಕಿಕೊಂಡು ಕರಗಲು ಬಿಡಿ. ಈಗ ಇನ್ನೊಂದು ಬಾಣಲೆಯಲ್ಲಿ ಅರ್ಧ ಕಪ್ ಅಕ್ಕಿ ತೆಗೆದುಕೊಂಡು ಹುರಿದುಕೊಳ್ಳಿ. ಈಗ ಬೆಲ್ಲದ ನೀರನ್ನು ತೆಗೆದು ಬದಿಗಿಟ್ಟುಕೊಳ್ಳಿ. ಹಾಗೆ ಅಕ್ಕಿಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ನೀರು ಹಾಕಿ ನೆನೆಯಲು ಬಿಡಿ.
ಈಗ ಅದೇ ಬಾಣಲೆಗೆ ಗಸೆಗಸೆ ಹಾಗೆ ಕೆಂಪಗಾಗುವವರೆಗೂ ಹುರಿದುಕೊಳ್ಳಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು 5 ನಿಮಿಷ ನೆನೆಸಿದ ಅಕ್ಕಿ ಇದಕ್ಕೆ ಹಾಕಿ, ಕೊಬ್ಬರಿ ತುರಿ ಇಲ್ಲವೆ ಕಾಯಿ ತುರಿ, ತಣ್ಣಗಾದ ಗಸೆ ಗಸೆ, ಏಲಕ್ಕಿ, ಹಾಗೆ ಹುರಿದುಕೊಂಡ 10 ಬಾದಾಮಿ ಸಹ ಹಾಕಿಕೊಳ್ಳಿ. ಅನಂತರ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿ ತೆಗೆದಿಟ್ಟುಕೊಳ್ಳಿ.
ಈಗ ಮತ್ತೊಂದು ಬಾಣಲೆಗೆ ಬೆಲ್ಲದ ನೀರನ್ನು ಜರಡಿ ಹಿಡಿದು ಹಾಕಿಕೊಳ್ಳಿ. ಇದೇ ಬೆಲ್ಲದ ನೀರಿಗೆ ರುಬ್ಬಿಕೊಂಡಿದ್ದ ಪೇಸ್ಟ್ ಅನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಗಂಟುಗಳು ಇರಬಾರದು. ಗಟ್ಟಿಯಾದರೆ ಜಾರ್ ತೊಳೆದ ನೀರು ಹಾಕಿ. ನಿಧಾನವಾಗಿ ತಿರುಗಿಸುತ್ತಾ ಇದ್ದಂತೆ ಅದು ಗಟ್ಟಿಯಾಗಲು ಆರಂಭಿಸುತ್ತದೆ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಕರಗಲು ನಂತರ ಇದಕ್ಕೆ ಗೋಡಂಬಿ, ಕತ್ತರಿಸಿದ ಬಾದಾಮಿ ಹಾಕಿಕೊಂಡು ಹುರಿದುಕೊಳ್ಳಿ. ದ್ರಾಕ್ಷಿ ಸಹ ಹಾಕಬಹುದು.
ಈಗ ಮೊದಲು ಹುರಿದುಕೊಂಡಿದ್ದ ಬಾದಾಮಿಗಳನ್ನು ಸಹ ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮನೆಮದ್ದು ಸಿದ್ದವಾಗುತ್ತೆ. ಇದು ಬಹಳ ರುಚಿಯಾದ ಹಾಗೆ ನಿಮ್ಮ ಆರೋಗ್ಯ ವೃದ್ಧಿಸುವ ಬೆಸ್ಟ್ ರೆಸಿಪಿಯಾಗಿರಲಿದೆ. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಮಾಡಿ ಸವಿದು ನೋಡಿ. ನಿಮ್ಮ ಆರೋಗ್ಯದಲ್ಲೂ ಸುಧಾರಣೆ ನೋಡುವಿರಿ. ಮಕ್ಕಳಿಗೂ ಸಹ ಇದನ್ನು ಸವಿಯಲು ನೀಡಬಹುದು. ಬೇಸಿಗೆಯಲ್ಲಿ ದೇಹ ತಂಪಾಗಿಡಲು ಕೂಡ ಇದು ನೆರವಾಗಲಿದೆ.



Click it and Unblock the Notifications
